ನವದೆಹಲಿ(ಏ.೨೩): ಕೊರೋನಾ ಸೋಂಕು ತಟ್ಟಿದ್ದ ರಾಜಧಾನಿಯ ಪಿಜ್ಜಾ ಡೆಲಿವರಿ ಬಾಯ್‌ಗೆ, ಗ್ರಾಹಕರೇ ಧೈರ್ಯ ತುಂಬಿದ್ದಾರೆ. ಆ ವ್ಯಕ್ತಿಯನ್ನು ಸಂಪರ್ಕಿಸಿದ 15ಕ್ಕೂ ಹೆಚ್ಚು ಮಂದಿ ಗ್ರಾಹಕರು ಧೃತಿಗೆಡಬೇಡ ಎಂದು ಧೈರ್ಯ ಹೇಳಿದ್ದಾರೆ.

ಬಿಲ್‌ನಲ್ಲಿದ್ದ ನಂಬರ್‌ ಮೂಲಕ ಗ್ರಾಹಕರು ಆತನಿಗೆ ಕರೆ ಮಾಡಿ, ಸಹಾಯ ಬೇಕಿದ್ದರೆ ಸಂಪರ್ಕಿಸುವಂತೆ ವಿಶ್ವಾಸ ತುಂಬಿದ್ದಾರೆ.

ಬಾಯಿ ಚಪಲ: ಪಿಜ್ಜಾ ತರಿಸಿದ 72 ಕುಟುಂಬಕ್ಕೆ ಕ್ವಾರಂಟೈನ್!

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋಂಕಿತ, ಹೆಚ್ಚಿನವರು ಫೋನಿನಲ್ಲಿ ನನ್ನನ್ನು ಸಂಪರ್ಕಿಸಿದ್ದಾರೆ. ಸಹಾಯ ಬೇಕಿದ್ದರೆ ಯಾವುದೇ ಮುಜುಗರವಿಲ್ಲದೇ ಕೇಳು ಎಂದು ಧೈರ್ಯ ತುಂಬಿದ್ದರು ಎಂದು ಹೇಳಿದ್ದಾನೆ.

ತನಗೆ ಕೊರೋನಾ ಸೋಂಕು ತಟ್ಟಿರುವುದು ತಿಳಿಯದೇ ಹಲವು ಕುಟುಂಬಳಿಗೆ ಈತ ಪಿಜ್ಜಾ ಡೆಲಿವರಿ ಮಾಡಿದ್ದ.