ಮೋದಿಯವರಿಗೆ ಸೀಟು ಕಡಿಮೆ ಬಂದಿದ್ದಕ್ಕೆ ಸಂಭ್ರಮಿಸಿದವರು; ಬಾಂಗ್ಲಾದೇಶದಿಂದ ಪಾಠ ಕಲಿಯಬೇಕು: ಉಮಾ ಭಾರತಿ
ಬಾಂಗ್ಲಾದೇಶ ಬಿಕ್ಕಟ್ಟು: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಉಮಾಭಾರತಿ twitter x ನಲ್ಲಿ ಪ್ರತಿಕ್ರಿಯಿಸಿದ್ದಾರೆ ಅಲ್ಲಿರುವ ಎಲ್ಲ ಅಲ್ಪಸಂಖ್ಯಾತರ ಜೊತೆ ನಾವಿದ್ದೇವೆ ಎಂದಿದ್ದಾರೆ, ಬಾಂಗ್ಲಾದೇಶ ಹಿಂದೂಗಳ ವಿಚಾರದಲ್ಲಿ ಕಾಂಗ್ರೆಸ್ ಮಿತ್ರಕೂಟ ಮೌನದ ಬಗ್ಗೆ ಪ್ರಶ್ನಿಸಿದ್ದಾರೆ.
Bangladesh Crisis: ವಿದ್ಯಾರ್ಥಿ ಮೀಸಲಾತಿಗಾಗಿ ಬಾಂಗ್ಲಾದೇಶದಲ್ಲಿ ಆರಂಭವಾದ ಘರ್ಷಣೆ ಉಗ್ರ ಸ್ವರೂಪ ಪಡೆದು ಪ್ರಧಾನಿ ಶೇಖ್ ಹಸೀನಾ ಅವರನ್ನೇ ದೇಶ ತೊರೆಯುವಂತೆ ಮಾಡಿತು. ಪ್ರತಿಭಟನೆಗೆ ಹೆದರಿ ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ನ್ಯಾಯಾಧೀಶರೇ ರಾಜೀನಾಮೆ ಕೊಡಬೇಕಾಯಿತು. ದಿನೇದಿನೆ ಬಾಂಗ್ಲಾದೇಶದ ಪರಿಸ್ಥಿತಿ ಹದಗೆಡುತ್ತಿದೆ. ದೇಶದೊಳಗಿನ ಅಲ್ಪಸಂಖ್ಯಾತ ಹಿಂದೂಗಳು, ಕ್ರಿಶ್ಚಿಯನ್ನರು ಇತರರು ಚಿತ್ರಹಿಂಸೆಗೆ ಗುರಿಯಾಗಿದ್ದಾರೆ. ಹಲವರನ್ನು ಜೀವಂತವಾಗಿ ದಹಿಸಲಾಗಿದೆ. ದಿನನಿತ್ಯ ಚಿತ್ರಹಿಂಸೆಗೆ ಒಳಗಾಗುತ್ತಲೇ ಇದ್ದಾರೆ. ಈ ಕುರಿತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ತಮ್ಮ ಟ್ವಿಟರ್ ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದು, 'ಬಾಂಗ್ಲಾದೇಶದ ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಬಗ್ಗೆ ತುಂಬಾ ದಿನಗಳಿಂದ ತುಂಬಾ ಚಿಂತೆ ಮಾಡುತ್ತಿದ್ದೆ ಏನು ಹೇಳಬೇಕು ತಿಳಿಯುತ್ತಿಲ್ಲ..' ಎಂದು ಬರೆದುಕೊಂಡಿದ್ದಾರೆ.
ರಕ್ತ ಬೇಕಿದ್ರೆ ಕೊಟ್ಟೆವು ಆದ್ರೆ ಮತ್ತೆ ದೇಶ ಬಿಡೆವು: ತಾಯ್ನೆಲದಲ್ಲಿ ಉಳಿವಿಗೆ ಬಾಂಗ್ಲಾ ಹಿಂದೂಗಳ ಹೋರಾಟ
ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳು ಹಿಂಸಾಚಾರ, ಅತ್ಯಾಚಾರ, ಸಾಮೂಹಿಕ ಕೊಲೆಗಳಿಂದ ಆತಂಕಕ್ಕೀಡಾಗಿದ್ದರು. ಇದೀಗ ತಮ್ಮ ಜೀವ ಮತ್ತು ಗೌರವಕ್ಕಾಗಿ ಬೀದಿಗೆ ಬಂದಿದ್ದಾರೆ. ಮತಾಂಧರ ವಿರುದ್ಧ ತಿರುಗಿಬಿದ್ದಿರುವುದು ನನಗೀಗ ಸಮಾಧಾನ ತಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ಸೀಟು ಕಡಿಮೆಯಾಗಿದೆ ಎಂದು ಸಂಭ್ರಮಿಸಿದವರು ಬಾಂಗ್ಲಾದೇಶದಿಂದ ಪಾಠ ಕಲಿಯಬೇಕು. ಅಲ್ಲಿದ್ದವರು ಹಿಂದೂಗಳು ಆ ದೇಶದ ಪ್ರಜೆಗಳಾಗಿದ್ದರು. ಅಲ್ಲಿನವರೊಂದಿಗೆ ಒಂದಾಗಿ ಬೆರೆತಿದ್ದರು. ಆದರೆ ಇದೀಗ ಪ್ರತಿಭಟನೆ ನೆಪದಲ್ಲಿ ಹಿಂದೂಗಳ ಮೇಲೆ ಮೂಲಭೂತವಾದಿಗಳಿಂದ ದಾಳಿಯಾಗಿದೆ. ಈ ದಾಳಿಯ ವಿರುದ್ಧ ಕೊನೆಗೂ ತಿರುಗಿಬಿದ್ದಿದ್ದಾರೆ. ನಾವೀಗ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಜೊತೆ ನಿಲ್ಲಬೇಕಿದೆ. ನಾವು ಅಲ್ಪಸಂಖ್ಯಾತ ಹಿಂದೂಗಳ ಬೆನ್ನಿಗೆ ಇದ್ದೇವೆ ಆದರೆ ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟದ ಪಕ್ಷಗಳು ಈ ವಿಚಾರದಲ್ಲಿ ಯಾಕೆ ಮೌನವಾಗಿವೆ ಎಂದು ಪ್ರಶ್ನನಿಸಿದ್ದಾರೆ.
ಬಾಂಗ್ಲಾದೇಶ ಹಿಂಸಾಚಾರ: ಒಂದೇ ದಿನದಲ್ಲಿ ಪೊಲೀಸರು ಸೇರಿ 1000 ಜನರ ಹತ್ಯೆ!
ಭಾರತದಲ್ಲೂ ಆಗಬಹುದು ಎಂದ ಕಾಂಗ್ರೆಸ್ ಮುಖಂಡ!
'ಶ್ರೀಲಂಕಾ-ಬಾಂಗ್ಲಾದೇಶದ ನಂತರ ಈಗ ಭಾರತದಲ್ಲೂ ಅದೇ ರೀತಿ ಆಗಬಹುದು. ಬಾಂಗ್ಲಾದೇಶದ ಪ್ರಧಾನಮಂತ್ರಿ ನಿವಾಸಕ್ಕೆ ನುಗ್ಗಿದಂತೆಯೇ ಜನರು ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರಧಾನಿ ನಿವಾಸಕ್ಕೆ ನುಗ್ಗುವ ಪರಿಸ್ಥಿತಿ ಭಾರತದಲ್ಲೂ ಆಗಬಹುದು. ಬಾಂಗ್ಲಾದೇಶ ಆಯ್ತು ಇದೀಗ ಭಾರತದ ಸರದಿ ಎಂದಿದ್ದ ಕಾಂಗ್ರೆಸ್ ನಾಯಕ ಮಾಜಿ ಸಚಿವ ಸಜ್ಜನ್ ಸಿಂಗ್ ವರ್ಮಾ ರ ಹೇಳಿಕೆಗೆ ಪ್ರತಿಕ್ರಿಯಿಸಿ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದರು. ಒಂದು ವೇಳೆ ಅಂತಹ ಪರಿಸ್ಥಿತಿ ಬಂದರೆ ನೀವು ಸುರಕ್ಷಿತವಾಗಿರುತ್ತೀರಾ ಎಂಬ ಗ್ಯಾರಂಟಿ ಏನು? ಬಾಂಗ್ಲಾದೇಶದ ಹಿಂದೂಗಳ ಪರಿಸ್ಥಿತಿಯೇ ನಿನಗೆ ಬರಬಹುದು ಕಿಡಿಕಾರಿದ್ದರು.