ಉದಯ್‌ಪುರ[ಜ.23]: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಕಚೇರಿಯ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುವ ನೌಕರರೊಬ್ಬರು ತಮ್ಮ ಮಗುವಿಗೆ ‘ಕಾಂಗ್ರೆಸ್‌ ಜೈನ್‌’ ಎಂದು ಹೆಸರಿಡುವ ಮೂಲಕ ಪಕ್ಷ ನಿಷ್ಠೆ ಮೆರೆದಿದ್ದಾರೆ.

ವಿನೋದ್‌ ಜೈನ್‌ ಎಂಬವರು 2019ರ ಜುಲೈನಲ್ಲಿ ಹುಟ್ಟಿದ್ದ ತನ್ನ ಮಗುವಿಗೆ ಈ ಹೆಸರು ಇಟ್ಟಿದ್ದು, ಅದೇ ಹೆಸರಿನಲ್ಲಿ ಜನ್ಮ ಪ್ರಮಾಣ ಪತ್ರ ಕೂಡ ಮಾಡಿಸಿಕೊಂಡಿದ್ದಾರೆ.

ನನ್ನ ಕುಟುಂಬ ಕಾಂಗ್ರೆಸ್‌ ಪಕ್ಷಕ್ಕೆ ನಿಷ್ಠವಾಗಿದ್ದು ಹಾಗಾಗಿ ಮಗನಿಗೆ ಕಾಂಗ್ರೆಸ್‌ ಎಂದು ಹೆಸರಿಟ್ಟಿದ್ದೇನೆ. ಭವಿಷ್ಯದಲ್ಲಿ ಆತ ಕಾಂಗ್ರೆಸ್‌ ಸೇರಿ ದೊಡ್ಡ ರಾಜಕಾರಣಿಯಾಗುತ್ತಾನೆ ಎಂದು ವಿನೋದ್‌ ಆಶಾಭಾವನೆ ವ್ಯಕ್ತ ಪಡಿಸಿದ್ದಾರೆ.