ಕೇಂದ್ರ ಆಯುಷ್‌ ಸಚಿವ ಶ್ರೀಪಾದ್‌ ನಾಯ್ಕ್ ಅವರಿಗೆ ಕೊರೋನಾ| ಆಯುಷ್‌ ಮಂತ್ರಿಯಾಗಿರುವ ಶ್ರೀಪಾದ್| ಕೊರೋನಾ ತಗುಲಿದ ಕೇಂದ್ರ ಸಂಪುಟದ 5ನೇ ಸಚಿವ

ನವದೆಹಲಿ(ಆ.13): ಕೇಂದ್ರ ಆಯುಷ್‌ ಸಚಿವ ಶ್ರೀಪಾದ್‌ ನಾಯ್‌್ಕ ಅವರಿಗೆ ಕೊರೋನಾ ಸೋಂಕಿರುವುದು ಬುಧವಾರ ದೃಢವಾಗಿದೆ.

ಕೊರೋನಾತಂಕ: ಬ್ರಿಟನ್‌ ಹಿಂದಿಕ್ಕಿ 4ನೇ ಸ್ಥಾನಕ್ಕೆ ಭಾರತ!

ಸೋಂಕು ಲಕ್ಷಣರಹಿತವಾಗಿರುವುದರಿಂದ ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಪಟ್ಟಿರುವುದಾಗಿ ಟ್ವೀಟ್‌ ಮೂಲಕ ಸಚಿವರು ತಿಳಿಸಿದ್ದಾರೆ. ಅಲ್ಲದೆ ಕಳೆದ ಒಂದು ವಾರದಿಂದ ತಮ್ಮ ಸಂಪರ್ಕಕ್ಕೆ ಬಂದವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Scroll to load tweet…

ಶ್ರೀಪಾದ್‌ ಅವರು ಕೊರೋನಾ ಸೋಂಕಿಗೆ ತುತ್ತಾಗಿರುವ 5ನೇ ಕೇಂದ್ರ ಸಚಿವರಾಗಿದ್ದಾರೆ. ಇದಕ್ಕೂ ಮೊದಲು ಗೃಹ ಸಚಿವ ಅಮಿತ್‌ ಶಾ, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಮತ್ತು ರಾಜ್ಯ ಖಾತೆ ಸಚಿವರಾದ ಅರ್ಜುನ್‌ ರಾಮ್‌ ಮೇಘ್ವಾಲ್‌, ಕೈಲಾಶ್‌ ಚೌಧರಿ ಅವರಲ್ಲಿ ಕೊರೋನಾ ಪತ್ತೆಯಾಗಿತ್ತು.