ಛತ್ತೀಸ್‌ಗಢ, ಮಧ್ಯಪ್ರದೇಶದಲ್ಲಿ ಇಂದು ವಿಧಾನಸಭಾ ಚುನಾವಣೆ: ಡಿ.3ಕ್ಕೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
2024ರ ಲೋಕಸಭೆ ಚುನಾವಣೆಗೂ ಮುಂಚಿನ ಸೆಮಿಫೈನಲ್ ಎಂದೇ ಪರಿಗಣಿತವಾಗಿರುವ ಪಂಚರಾಜ್ಯ ಚುನಾವಣೆಗಳ ಪೈಕಿ, ಮಧ್ಯಪ್ರದೇಶದ ಎಲ್ಲಾ 230 ವಿಧಾನಸಭಾ ಕ್ಷೇತ್ರಗಳು ಮತ್ತು ಛತ್ತೀಸ್‌ಗಢದಲ್ಲಿ ಎರಡನೇ ಹಂತದ 70 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.

ಭೋಪಾಲ್/ರಾಯ್‌ಪುರ: 2024ರ ಲೋಕಸಭೆ ಚುನಾವಣೆಗೂ ಮುಂಚಿನ ಸೆಮಿಫೈನಲ್ ಎಂದೇ ಪರಿಗಣಿತವಾಗಿರುವ ಪಂಚರಾಜ್ಯ ಚುನಾವಣೆಗಳ ಪೈಕಿ, ಮಧ್ಯಪ್ರದೇಶದ ಎಲ್ಲಾ 230 ವಿಧಾನಸಭಾ ಕ್ಷೇತ್ರಗಳು ಮತ್ತು ಛತ್ತೀಸ್‌ಗಢದಲ್ಲಿ ಎರಡನೇ ಹಂತದ 70 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.
ಕಾಂಗ್ರೆಸ್, ಬಿಜೆಪಿ ಪಾಲಿಗೆ ಎರಡೂ ಚುನಾವಣೆ ಅಗ್ನಿಪರೀಕ್ಷೆ ಆಗಿವೆ. ಮಧ್ಯಪ್ರದೇಶದಲ್ಲಿ (Madhya Pradesh) ಬಿಜೆಪಿ ಅಧಿಕಾರದಲ್ಲಿದ್ದು, ಅಧಿಕಾರ ಕಸಿಯಲು ಬಿಜೆಪಿ ತಂತ್ರ ಹೆಣೆದಿದೆ. ಛತ್ತೀಸ್‌ಗಢದಲ್ಲಿ (Chattisgarh) ಕಾಂಗ್ರೆಸ್ ಅಧಿಕಾರದಲ್ಲಿದ್ದು, ತಾನು ಅಧಿಕಾರಕ್ಕೇರಲು ಬಿಜೆಪಿ ಸರ್ವಯತ್ನ ನಡೆಸುತ್ತಿದೆ. ಈ ಚುನಾವಣೆಯು ಎನ್‌ಡಿಎ ಹಾಗೂ ಇಂಡಿಯಾ ಕೂಟದ ಮುಂದಿನ ಹಣೆಬರಹವನ್ನೂ ನಿರ್ಧರಿಸಲಿದೆ. ಎರಡೂ ರಾಜ್ಯಗಳ ಜೊತೆ ಇತರ 3 ರಾಜ್ಯಗಳೊಂದಿಗೆ ಡಿ.3ರಂದು ಮತ ಎಣಿಕೆ ನಡೆಯಲಿದೆ.
ಲೋಕಸಭೆ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಗೆಲ್ಲುವ ಅಪೇಕ್ಷೆ: ಶಾಸಕ ಲಕ್ಷ್ಮಣ ಸವದಿ
ಛತ್ತೀಸ್‌ಗಢದಲ್ಲಿ ನ.7ರಂದು ಈಗಾಗಲೇ 20 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಬಾಕಿ 70 ಕ್ಷೇತ್ರಗಳಿಗೆ 63 ಲಕ್ಷ ಮತದಾರರು ಇಂದು ಮತ ಹಾಕಲಿದ್ದಾರೆ. 958 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನು ಮಧ್ಯಪ್ರದೇಶದಲ್ಲಿ 230 ಕ್ಷೇತ್ರಗಳಿಗೆ 2,533 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಧ್ಯಪ್ರದೇಶದಲ್ಲಿ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಚುನಾವಣೆ ನಡೆದರೆ, ಛತ್ತೀಸ್‌ಗಢದಲ್ಲಿ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಆದರೆ ಛತ್ತೀಸ್‌ಗಢದ ನಕ್ಸಲ್ ಪೀಡಿತ (Naxal Area) 9 ಮತಕ್ಷೇತ್ರದಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ ಮತದಾನ ನಡೆಯಲಿದೆ.
ಲೋಕಸಭೆಗೆ ಯಡಿಯೂರಪ್ಪ ಉಪಯೋಗಿಸಲು ವಿಜಯೇಂದ್ರಗೆ ಪಟ್ಟ: ಸಚಿವ ಎಂ.ಬಿ.ಪಾಟೀಲ