ಬ್ರಹ್ಮಪುತ್ರ ನದಿಯಲ್ಲಿ ಎರಡು ಬೋಟ್ ಮುಖಾಮುಖಿ ಡಿಕ್ಕಿ ಭೀಕರ ದುರಂತದಲ್ಲಿ ಹಲವರು ಜಲಸಮಾಧಿ ಶಂಕೆ 100ಕ್ಕೂ ಹೆಚ್ಚು ಮಂದಿ ರಕ್ಷಣೆ, ನೆರವಿಗೆ NDRF, SDRF

ಅಸ್ಸಾಂ(ಸೆ.08): ಭೀಕರ ಮಳೆ, ಪ್ರವಾಹ, ಗುಡ್ಡ ಕುಸಿತದಿಂದ ದೇಶ ನಲುಗಿದೆ. ಇದರ ನಡುವೆ ಇದೀಗ ಅಸ್ಸಾಂನಲ್ಲಿ ದೋಣಿ ದುರಂತ ಸಂಭವಿಸಿದೆ. ಬ್ರಹ್ಮಪುತ್ರ ನದಿಯಲ್ಲಿ 2 ಬೋಟ್ ಡಿಕ್ಕಿ ಹೊಡೆದ ಪರಿಣಾಮ ಎರಡೂ ಬೋಟ್ ಮುಳುಗಡೆಯಾಗಿದೆ. 120ಕ್ಕೂ ಹೆಚ್ಚು ಮಂದಿ ಬೋಟ್‌ನಲ್ಲಿದ್ದರು ಎಂದು ವರದಿಯಾಗಿದೆ.

Scroll to load tweet…

ಎರಡು ಬೋಟ್‌ ಡಿಕ್ಕಿಯಾಗಿ ಮುಳುಗಡಯಾಗಿದೆ. ಸಣ್ಣ ಬೋಟ್‌ಗಳಿಂದ 40 ಮಂದಿ ರಕ್ಷಣೆ ಮಾಡಲಾಗಿದೆ. ಆದರ 120ಕ್ಕೂ ಹಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ NDRF, SDRF ಧಾವಿಸಿದ್ದು, ರಕ್ಷಣಾ ಕಾರ್ಯಗಳು ಭರದಿಂದ ಸಾಗಿದೆ.

ನಿಮಾತಿ ಘಾಟ್‌ನಿಂದ ಮಜಲಿಗೆ ತೆರಳುತ್ತಿದ್ದ ಬೋಟ್ ಹಾಗೂ ಮಜಲಿನಿಂದ ನಿಮಾತಿ ಘಾಟ್‌ಗೆ ಮರಳುತ್ತಿದ್ದ ಬೋಟ್‌ಗೆ ಡಿಕ್ಕಿ ಹೊಡೆದಿದೆ. ಎರಡೂ ಬೋಟ್ ಪ್ರಯಾಣಿಕರು ಮುಳುಗಡೆಯಾಗಿದ್ದಾರೆ. ಕೆಲವರು ಈಡಿ ದಡ ಸೇರಿದ್ದಾರೆ. ಆದರೆ ಹಲವರಿಗೆ ಸಾಧ್ಯವಾಗಿಲ್ಲ ಅನ್ನೋ ಮಾಹಿತಿಗಳು ಹೊರಬಿದ್ದಿದೆ. ದುರಂತದಲ್ಲಿ ನೀರಿನಲ್ಲಿ ಮುಳುಗಡೆಯಾಗಿರುವ ಪ್ರಯಾಣಿಕರ ಕುರಿತು ಶೋಧ ಕಾರ್ಯ ಆರಂಭಗೊಂಡಿದೆ. 

ಘಟನೆ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆಯಿಂದ ತೀವ್ರ ನೋವಾಗಿದೆ. ರಕ್ಷಣಾ ಕಾರ್ಯಕ್ಕೆ ಸೂಚಿಸಲಾಗಿದೆ. ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದು ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.

Scroll to load tweet…

ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರೆ ಮಾಡಿ ರಕ್ಷಣಾ ಕಾರ್ಯಕ್ಕೆ ಕೇಂದ್ರದಿಂದ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. 


Scroll to load tweet…