ದೆಹಲಿಯ ಹಿರಿಯ ನಾಗರಿಕರು ತೀರ್ಥ ಕ್ಷೇತ್ರಗಳಿಗೆ ಉಚಿತ ಪ್ರವಾಸ|  ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬುಧವಾರ ಪ್ರಕಟ

ನವದೆಹಲಿ(ಮಾ.11): ದೆಹಲಿಯ ಹಿರಿಯ ನಾಗರಿಕರು ತೀರ್ಥ ಕ್ಷೇತ್ರಗಳಿಗೆ ಉಚಿತ ಪ್ರವಾಸ ಕೈಗೊಳ್ಳಲು ತೀರ್ಥ ಕ್ಷೇತ್ರ ಪ್ರವಾಸ ಯೋಜನೆಯನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬುಧವಾರ ಪ್ರಕಟಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ಈ ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಉಚಿತವಾಗಿ ಅಯೋಧ್ಯೆ ಪ್ರವಾಸವನ್ನು ಆಯೋಜಿಸಲಾಗುವುದು. ಹಿರಿಯ ನಾಗರಿಕರ ಪ್ರವಾಸ, ವಸತಿ ಹಾಗೂ ಆಹಾರದ ಸಂಪೂರ್ಣ ವೆಚ್ಚವನ್ನು ದೆಹಲಿ ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ದೆಹಲಿ ಸರ್ಕಾರ ಶ್ರೀರಾಮ ಮತ್ತು ರಾಮ ರಾಜ್ಯದ 10 ಆದರ್ಶಗಳನ್ನು ಪಾಲಿಸಲಿದೆ. ಹಿರಿಯ ನಾಗರಿಕರನ್ನು ಗೌರವದಿಂದ ನಡೆಸಿಕೊಳ್ಳಲಿದೆ ಎಂದು ಹೇಳಿದ್ದಾರೆ