Asianet Suvarna News Asianet Suvarna News

23000 ರುದ್ರಾಕ್ಷಿಯನ್ನು ಬಳಸಿ ಶಿವನ ಮರಳು ಶಿಲ್ಪ ರಚಿಸಿದ ಪಟ್ನಾಯಕ್

  • ಶಿವನ ಮರಳುಶಿಲ್ಪ ಬಿಡಿಸಿದ ಸುದರ್ಶನ್‌ ಪಟ್ನಾಯಕ್
  • ಶಿವರಾತ್ರಿ ಅಂಗವಾಗಿ 23000 ರುದ್ರಾಕ್ಷಿಯ ಬಳಕೆ
  • ಒಡಿಶಾದ ಪುರಿ ಕಡಲತೀರದಲ್ಲಿ ಮರಳುಶಿಲ್ಪ ನಿರ್ಮಾಣ
Artist Sudarshan Patnaik Creates Lord Shiva Sculpture With 23000 Rudraksha Beads akb
Author
Bangalore, First Published Mar 1, 2022, 5:36 PM IST

ಪುರಿ:ಇಂದು ದೇಶಾದ್ಯಂತ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಖ್ಯಾತ ಮರಳುಶಿಲ್ಪ ರಚನೆಕಾರ ಸುದರ್ಶನ್‌ ಪಟ್ನಾಯಕ್‌ (Sudarsan Pattnaik) ಅವರು 23,436  ರುದ್ರಾಕ್ಷಿಯನ್ನು(Rudraksha) ಬಳಸಿ ವಿಭಿನ್ನವಾದ ಶಿವನ ಪ್ರತಿಮೆಯನ್ನು (Lord Shiva Sculpture) ಮರಳಿನಲ್ಲಿ ನಿರ್ಮಾಣ ಮಾಡಿದ್ದಾರೆ. ಒಡಿಶಾದ (Odisha) ಪುರಿ ಕಡಲತೀರದಲ್ಲಿ ಇವರು 9 ಅಡಿ ಎತ್ತರದ 18 ಅಡಿ ಅಗಲದ ಮರಳು ಶಿಲ್ಪವನ್ನು ರಚಿಸಿದ್ದಾರೆ. ಉಕ್ರೇನ್‌ (Ukrain) ಹಾಗೂ ರಷ್ಯಾ (Russia) ಮಧ್ಯೆ ಪರಿಸ್ಥಿತಿ ಬಿಗಾಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಈ ಮರಳು ಶಿಲ್ಪದ ಪಕ್ಕ ನಾವು ಶಾಂತಿಗಾಗಿ ಪ್ರಾರ್ಥಿಸುತ್ತಿದ್ದೇವೆ ಎಂದು ಸಂದೇಶ ಬರೆದಿದ್ದಾರೆ. 

ಈ ಮರಳು ಶಿಲ್ಪಾ ರಚನೆಗೆ 12 ಟನ್‌ ಮರಳನ್ನು ಅವರು ಬಳಸಿದ್ದು, ಸಂಪೂರ್ಣ ಶಿಲ್ಪದ ನಿರ್ಮಾಣಕ್ಕೆ 6 ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಈ ಬಾರಿ ಅವರು ಶಿವರಾತ್ರಿ ಹಿನ್ನೆಲೆಯಲ್ಲಿ ಇನ್ನು ವಿಶೇಷವಾಗಿ ರುದ್ರಾಕ್ಷಿಯನ್ನು ಮರಳುಶಿಲ್ಪದಲ್ಲಿ ಬಳಸುವ ಮೂಲಕ ಈ ಮರಳುಶಿಲ್ಪಕ್ಕೆ ವಿಭಿನ್ನ ಆಯಾಮ ನೀಡಿದ್ದಾರೆ. ಯುದ್ಧ ನಡೆಯುತ್ತಿದ್ದು, ನಾವು ಶಿವ ದೇವರಲ್ಲಿ ವಿಶ್ವಶಾಂತಿಗಾಗಿ ಪ್ರಾರ್ಥಿಸುತ್ತಿದ್ದೇವೆ ಎಂದು ಅವರು ಹೇಳಿದರು. 

 

ಪ್ರತಿ ಬಾರಿಯೂ ಸುದರ್ಶನ್ ಪಟ್ನಾಯಕ್‌ ಮರಳು ಶಿಲ್ಪ ರಚನೆ ಮಾಡುವಾಗ ವಿಶೇಷವಾಗಿ ವಿಭಿನ್ನವಾಗಿ ಮಾಡುತ್ತಾರೆ. ಅವರು ತರಕಾರಿಗಳು, ಕೆಂಪು ಗುಲಾಬಿ ಸೇರಿದಂತೆ ವಿಭಿನ್ನ ವಸ್ತುಗಳನ್ನು ಬಳಸುತ್ತಾರೆ. ಈ ಬಾರಿ ಅವರು ಶಿವನ ಮರಳುಶಿಲ್ಪಕ್ಕೆ ರುದ್ರಾಕ್ಷಿಯನ್ನು ಬಳಸಿದ್ದಾರೆ. ಪದ್ಮಶ್ರೀ ಪುರಸ್ಕೃತ (Padma Shri) ಮರಳು ಶಿಲ್ಪ ಕಲಾಕಾರರಾಗಿರುವ ಸುದರ್ಶನ್‌ ಪಟ್ನಾಯಕ್‌, ಇದುವರೆಗೂ ಜಾಗತಿನಾದ್ಯಂತ 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮರಳು ಶಿಲ್ಪಾ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ತಮ್ಮ ಕಲೆಯೊಂದಿಗೆ ಅವರು ಜಾಗತಿಕ ಶಾಂತಿ, ಜಾಗತಿಕ ತಾಪಮಾನ, ಭಯೋತ್ಪಾದನೆ ನಿಲ್ಲಿಸಿ ಮುಂತಾದವು ಸೇರಿದಂತೆ ಹಲವು ಸಾಮಾಜಿಕ ಸಂದೇಶಗಳನ್ನು ನೀಡುತ್ತಾರೆ.

ಕಳೆದ ವರ್ಷ ಗಣೇಶ ಹಬ್ಬದ ಸಂದರ್ಭದಲ್ಲಿ ಸುದರ್ಶನ್‌ ಪಟ್ನಾಯಕ್‌ ಇದೇ ಪುರಿ ಕಡಲತೀರದಲ್ಲಿ ಗಣೇಶನ ಮೂರ್ತಿ ನಿರ್ಮಿಸಿದ್ದರು.  ಸುಮಾರು 7000 ಚಿಪ್ಪುಗಳನ್ನು ಬಳಸಿ 'ವಿಶ್ವ ಶಾಂತಿ' ಸಂದೇಶದೊಂದಿಗೆ ಮೊದಲ ಚಿಪ್ಪಿನ ವಿಗ್ರಹವನ್ನು ಅವರು ತಯಾರಿಸಿದ್ದರು. ಇದು ಗಣೇಶನ ಮರಳು ಶಿಲ್ಪದ ಜೊತೆ ವಿಶ್ವದ ಮೊದಲ ಸೀಶೆಲ್ ಪ್ರತಿಮೆಯಾಗಿದೆ ಎಂದು ಸುದರ್ಶನ್ ಪಟ್ನಾಯಕ್ ಹೇಳಿದ್ದರು. 

ಕೆಲ ದಿನಗಳ ಹಿಂದೆ ಭಾರತದ ಗಾನಕೋಗಿಲೆ ಎಂದೇ ಖ್ಯಾತರಾಗಿದ್ದ ಲತಾ ಮಂಗೇಶ್ಕರ್ ನಿಧನರಾದಾಗ ಸುದರ್ಶನ್ ಪಟ್ನಾಯಕ್ ಅವರು ಲತಾ ಮಂಗೇಶ್ಕರ್ ಅವರ ಮರಳು ಶಿಲ್ಪವನ್ನು ರಚಿಸಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದರು.

 

Follow Us:
Download App:
  • android
  • ios