ಬೀಜಿಂಗ್(ಜ.22)‌: ಜೋ ಬೈಡೆನ್‌ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ, ಅಮೆರಿಕ ಮಾಜಿ ವಿದೇಶಾಂಗ ಸಚಿವ ಮೈಕ್‌ ಪೊಂಪೆ ಮತ್ತು ಟ್ರಂಪ್‌ ಸರ್ಕಾರದಲ್ಲಿ ವಿವಿಧ ಉನ್ನತ ಹುದ್ದೆ ಹೊಂದಿದ್ದ 28 ಜನರ ಮೇಲೆ ಚೀnA ಸರ್ಕಾರ ನಿರ್ಬಂಧ ಹೇರಿದೆ.

ಟ್ರಂಪ್‌ ಅವಧಿಯಲ್ಲಿ ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಚೀನಾ ಹಿತಾಸಕ್ತಿಯನ್ನು ಕಡಿಗಣಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚೀನಾ ವಿದೇಶಾಂಗ ಇಲಾಖೆ ತಿಳಿಸಿದೆ.

ಪೊಂಪೆ ಮತ್ತು ಇತರ 27 ಮಂದಿ ಹಾಗೂ ಅವರ ಕುಟುಂಬಸ್ಥರಿಗೆ ಚೀನಾ, ಹಾಂಕಾಂಗ್‌, ಮಕಾವ್‌ ಆಫ್‌ ಚೀನಾಕ್ಕೆ ಪ್ರವೇಶವಿಲ್ಲ. ಅವರು ಮತ್ತು ಅವರಿಗೆ ಸಂಬಂಧಿಸಿದ ಕಂಪನಿಗಳೂ ಚೀನಾದೊಂದಿಗೆ ಯಾವುದೇ ವ್ಯವಹಾರ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ನಿಂಗ್‌ ತಿಳಿಸಿದ್ದಾರೆ.