Video: ಅನಂತ್ ಮದುವೆ ಆಮಂತ್ರಣ ಪತ್ರಿಕೆ ನೋಡಿದ್ರಾ? ಬೆಳ್ಳಿ ದೇಗುಲವನ್ನೇ ಕೊಟ್ಟ ಅಂಬಾನಿ ಕುಟುಂಬ

ಅನಂತ್ ಮದುವೆ ಆಮಂತ್ರಣ ಪತ್ರಿಕೆ ವಿಡಿಯೋ ಹೊರ ಬಂದಿದೆ. ಈ ವಿಶೇಷ ಆಮಂತ್ರಣ ಪತ್ರಿಕೆಯನ್ನು ಅತ್ಯಾಪ್ತರಿಗೆ ಅಂಬಾನಿ ಕುಟುಂಬ ವಿತರಿಸುತ್ತಿದೆ.

Anant Ambani Radhika Merchan wedding invitation video viral mrq

ಮುಂಬೈ: ದೇಶದ ಆಗರ್ಭ ಶ್ರೀಮಂತರಾಗಿರುವ ಮುಕೇಶ್ ಅಂಬಾನಿ (Mukhesh Ambani) ಎರಡನೇ ಪುತ್ರ ಅನಂತ್ (Anant Ambani Wedding) ಮದುವೆ ಜುಲೈ 12ರಂದು ನಡೆಯಲಿದೆ. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅದ್ದೂರಿ ಮದುವೆ ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾಯುತ್ತಿದೆ. ವಿವಾಹ ಪೂರ್ವ ಸಮಾರಂಭ ಕಂಡು ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡಿತ್ತು. ದೇಶ-ವಿದೇಶ ಗಣ್ಯರನ್ನು ಮದುವೆಗೆ ಆಹ್ವಾನಿಸಲಾಗುತ್ತಿದೆ. ಪ್ರತಿದಿನ ಅನಂತ್ ಮದುವೆ ಕುರಿತ ಹೊಸ ಹೊಸ ವಿಷಯಗಳು ಹೊರ ಬರುತ್ತಿವೆ. ಇದೀಗ ಅನಂತ್ ಮದುವೆ ಆಮಂತ್ರಣ ಪತ್ರಿಕೆ ವಿಡಿಯೋ ಹೊರ ಬಂದಿದೆ. ಈ ವಿಶೇಷ ಆಮಂತ್ರಣ ಪತ್ರಿಕೆಯನ್ನು ಅತ್ಯಾಪ್ತರಿಗೆ ಅಂಬಾನಿ ಕುಟುಂಬ ವಿತರಿಸುತ್ತಿದೆ.

ಹೇಗಿದೆ ಅದ್ಧೂರಿ ಆಮಂತ್ರಣ ಪತ್ರಿಕೆ 

ಮುಚ್ಚಿದ ಕೆಂಪು ಪೆಟ್ಟಿಗೆ ರೀತಿಯಲ್ಲಿ ಮದುಗೆ ಕಾರ್ಡ್ ಕಾಣುತ್ತದೆ, ಬಾಕ್ಸ್ ಓಪನ್ ಮಾಡುತ್ತಿದ್ದಂತೆ ಪುಟಾಣಿ ಬೆಳ್ಳಿ ದೇವಸ್ಥಾನವೇ ಕಾಣಿಸುತ್ತದೆ. ಇದರಲ್ಲಿ ಗಣಪತಿ, ರಾಧಾ-ಕೃಷ್ಣ ಮತ್ತು ದುರ್ಗಾ ದೇವಿಯ ವಿಗ್ರಹಗಹಳಿವೆ. ವಿಗ್ರಹಗಳು ಬೆಳ್ಳಿಯಿಂದಲೇ ಕೆತ್ತನೆ ಮಾಡಲಾಗಿದೆ. ನಂತರ ಬಣ್ಣ ಬಣ್ಣಗಳ ಆಮಂತ್ರಣ ಪತ್ರಿಕೆಯನ್ನು ನೋಡಬಹುದು. 

ಅಂಬಾನಿ ಕಾರ್ಯಕ್ರಮಗಳಿಗೆ ಫೋಟೋಗ್ರಾಫರ್‌ ಗಳಿಗೆ ಆಮಂತ್ರಣವಿಲ್ಲ ಏಕೆ!?

ಕಾಶಿ ವಿಶ್ವನಾಥನಿಗೆ ಮೊದಕ ಆಮಂತ್ರಣ ಪತ್ರಿಕೆ 

ಅಂಬಾನಿ ಕುಟುಂಬ ಮೊದಲ ಆಮಂತ್ರಣ ಪತ್ರಿಕೆಯನ್ನು ಕಾಶಿ ವಿಶ್ವನಾಥನಿಗೆ ಸಲ್ಲಿಕೆ ಮಾಡಿದ್ದಾರೆ. ಮುಖೇಶ್ ಅಂಬಾನಿ ಪತ್ನಿ, ರಿಲಯನ್ಸ್ ಇಂಡಸ್ಟ್ರಿ ಫೌಂಡೇಶನ್ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಕಾಶಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಅನಂತ್ ಮತ್ತು ರಾಧಿಕಾ ಮದುವೆ ಜುಲೈ 12ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಜಿಯೋ ವರ್ಲ್ಡ್ ಕನ್ವೆಕ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.

ಕಾಶಿಯಲ್ಲಿ ಮಾತನಾಡಿದ್ದ ನೀತಾ ಅಂಬಾನಿ, ಹಿಂದೂ ಸಂಪ್ರದಾಯದಂತೆ ಬಾಬಾ ಬೋಲೇನಾಥನಿಗೆ ಆಮಂತ್ರಣ ಪತ್ರಿಕೆ ನೀಡಿದ್ದೇವೆ. ಇಲ್ಲಿಗೆ ಬಂದಿರೋದಕ್ಕೆ ತುಂಬಾ ಸಂತೋಷವಾಗುತ್ತಿದೆ. 10 ವರ್ಷಗಳ ಹಿಂದೆ ಕಾಶಿ ವಿಶ್ವನಾಥನ ದರ್ಶನಕ್ಕೆ ಬಂದಿದ್ದೆ. ಇಲ್ಲಿನ ಕುಶಲಕರ್ಮಿಗಳ ಜೊತೆ ನಮಗೆ ಅವಿನಾಭವ ಸಂಬಂಧವಿದೆ. ಕಾಶಿ ವಿಶ್ವನಾಥ ಕಾರಿಡಾರ್, ನಮೋ ಘಾಟ್, ಸೌರಶಕ್ತಿ ಸ್ಥಾವರಗಳು ಮತ್ತು ಸ್ವಚ್ಛತೆಯನ್ನು  ಗಮನಿಸಿದ್ರೆ ಮನಸ್ಸಿಗೆ ಸಂತೋಷವಾಗುತ್ತದೆ ಎಂದು ನೀತಾ ಅಂಬಾನಿ ಹೇಳಿದ್ದರು. ನಂತರ ವಾರಣಾಸಿಯ ಪ್ರಸಿದ್ಧ ಚಾಟ್ ಶಾಪ್ ಗೆ ಭೇಟಿ ನೀಡಿದ್ದರು. ಚಾಟ್ ಶಾಪ್ ನಲ್ಲಿಯೇ ಕುಳಿತ ನೀತಾ ಅಂಬಾನಿ ಅಲ್ಲಿನ ಪ್ರಸಿದ್ಧ ಟೊಮಾಟೊ ಚಾಟ್ ಹಾಗೂ ಆಲೂ ಟಿಕ್ಕಿಯ ಸವಿ ಸವಿದ್ರು.

ಅಕ್ಕ ಪಕ್ಕ ಕುಳಿತು 31 ರೂಪಾಯಿ ಒಆರ್‌ಎಸ್ ಕುಡಿದ ಕೋಟ್ಯಾಧಿಪತಿಗಳಾದ ಅಂಬಾನಿ-ಶಾರುಖ್!

ಚಾಟ್ ತಿಂದ ನೀತಾ ಅಂಬಾನಿ, ಮದುವೆಗೆ ಬರುವಂತೆ ಅಲ್ಲಿನ ಸಿಬ್ಬಂದಿಯನ್ನು ಆಹ್ವಾನಿಸಿದ್ದಾರೆ. ಚಾಟ್ ಗೆ ಏನೇನು ಹಾಕಲಾಗಿದೆ ಎಂಬ ಮಾಹಿತಿ ಪಡೆದ ಅವರು, ಮದುವೆಯಲ್ಲಿ ಇದನ್ನು ರೆಡಿ ಮಾಡಲು ಬರ್ತಿರಾ ಎಂದು ಕೇಳಿದ್ದಾರೆ. ಇದಕ್ಕೆ ಸಿಬ್ಬಂದಿ ತಲೆಯಾಡಿಸಿದ್ದರು.

Latest Videos
Follow Us:
Download App:
  • android
  • ios