ನಂದಿನಿ ಜೊತೆ ಅಮೂಲ್ ಸಂಸ್ಥೆ ವಿವಾದ ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿತ್ತು. ಬಳಿಕ ಸಿಎಂ ಬೊಮ್ಮಾಯಿ ಸೇರಿದಂತೆ ಹಲವರು ಸ್ಪಷ್ಟನೆ ನೀಡಿದ್ದಾರೆ. ಇದೀಗ ಗುಜರಾತ್‌ನ ಅಮೂಲ್ ವ್ಯವಸ್ಥಾಪಕ ನಿರ್ದೇಶಕ ಆರ್‌ಎಸ್ ಸೋಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಹಮ್ಮದಾಬಾದ್(ಜ.09): ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಪ್ರವಾಸದಲ್ಲಿ, ನಂದಿನ ಹಾಗೂ ಅಮೂಲ್ ಕುರಿತು ಮಾತನಾಡಿದ್ದರು. ಈವೇಳೆ ಮಾಡಿದ ಭಾಷಣ ವಿಪಕ್ಷಗಳನ್ನು ಕೆರಳಿಸಿತ್ತು. ಗುಜರಾತ್‌ನ ಅಮೂಲ್ ಜೊತೆ ನಂದಿಯನ್ನು ವಿಲೀನಗೊಳತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ ಅನ್ನೋ ಮಾತು ವೈರಲ್ ಆಗಿತ್ತು. ಹೀಗಾಗಿ ವಿಪಕ್ಷಗಳು ಬಿಜೆಪಿ ವಿರುದ್ಧ ಹರಿಹಾಯ್ದಿತ್ತು. ಈ ಘಟನೆ ಕುರುತಿ ಬಿಜೆಪಿ ಸ್ಪಷ್ಟನೆ ನೀಡಿತ್ತು. ನಂದಿನಿ ಅಮೂಲ್ ವಿವಾದದ ಬೆನ್ನಲ್ಲೇ ಇದೀಗ ಗುಜರಾತ್ ಅಮೂಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್‌ಎಸ್ ಸೋಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆರ್‌ಎಸ್ ಸೋಧಿ(RS Soi) ರಾಜೀನಾಮೆಯನ್ನು(Resign) ಅಮೂಲ್(ಗುಜರಾತ್ ಕೋ ಆಪರೇಟೀವ್ ಮಿಲ್ಕ್ ಮಾರ್ಕೆಟಿಂಗ್ ಫೇಡರೇಶನ್) ಅಂಗೀಕರಿಸಿದೆ. ಹೀಗಾಗಿ ಅಮೂಲ್(AMUL) ಸಿಒಒ ಆಗಿರುವ ಜಯೇನ್ ಮೆಹ್ತಾಗೆ ಇದೀಗ ಹೆಚ್ಚುವರಿಯಾಗಿ ವ್ಯವಸ್ಥಾಪಕ ನಿರ್ದೇಶಕ ಜವಾಬ್ದಾರಿ ವಹಿಸಲಾಗಿದೆ. ಈ ಬೆಳವಣಿಗೆ ವಿವಾದದ ಬೆನ್ನಲ್ಲೇ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ನಂದಿನಿ ಬರ್ಫಿಗೆ ವಿಸಿ ಫಾರಂ ಬೆಲ್ಲ, ಕೇರಳದ ಕಲ್ಲಿಕೋಟೆ ಸಂಸ್ಥೆಗೆ ಬೆಲ್ಲ ತಯಾರಿಕೆ ಗುತ್ತಿಗೆ!
ಆರ್‌ಎಸ್ ಸೋಧಿ ಅಮೂಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ 2010ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸುದೀರ್ಘ ಅವಧಿ ಕಾಲ ಅಮೂಲ್ ಸಂಸ್ಥೆಯ ಮಹತ್ತರ ಜವಾಬ್ದಾರಿ ವಹಿಸಿಕೊಂಡಿದ್ದರು. ಇದೀಗ ದಿಢೀರ್ ರಾಜೀನಾಮೆಯಿಂದ ಅಮೂಲ್ ಆಡಿಳಿತ ಚುಕ್ಕಾಣಿ ಹೊರೆ ಹೆಚ್ಚಾಗಿದೆ. ಈ ಕುರಿತು ಮಾಧ್ಯಮಕ್ಕೆ ಆರ್‌ಎಸ್ ಸೋಧಿ ಪ್ರತಿಕ್ರಿಯೆ ನೀಡಿದ್ದಾರೆ. 2017ಕ್ಕೆ ನನ್ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ಅವಧಿ ಅಂತ್ಯವಾಗಿತ್ತು. ಆದರೆ 2017ರಿಂದ ಹೆಚ್ಚುವರಿ ಅವಧಿ ಎಂಡಿ ಜವಾಬ್ದಾರಿ ನೀಡಲಾಗಿತ್ತು. ಇದೀಗ ನಾನು ರಾಜೀನಾಮೆ ನೀಡಿದ್ದೇನೆ. ನನ್ನ ರಾಜೀನಾಮೆಯನ್ನು ಅಮೂಲ್ ಅಂಗೀಕರಿಸಿದೆ ಎಂದು ಆರ್‌ಎಸ್ ಸೋಧಿ ಹೇಳಿದ್ದಾರೆ.
ಅಮೂಲ್ 2021ರಲ್ಲಿ 61,000 ಕೋಟಿ ರೂಪಾಯಿ ವ್ಯವಹಾರ ನಡೆಸಿತ್ತು. ಇತ್ತ ಕರ್ನಾಟಕದಲ್ಲಿ (Karnataka) ನಂದಿನಿ (Nandini) ಸಂಸ್ಥೆ ಅತೀ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ಎರಡೂ ಸಂಸ್ಥೆಗಳ ವಿಲೀನ ಕುರಿತು ಅಮಿತ್ ಶಾ ಮಾತನಾಡಿದ್ದಾರೆ ಎಂದು ವಿವಾದ ಸೃಷ್ಟಿಯಾಗಿತ್ತು. ಒಬ್ಬರಿಗೊಬ್ಬರು ಸಹಕಾರದ ಮೂಲಕ ನಂದಿನಿ ಮತ್ತು ಅಮುಲ್. ತಾಂತ್ರಿಕವಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕು. ಪೂರಕವಾಗಿ ಕೆಲಸ ಮಾಡಬೇಕು ಎಂದು ಶಾ ಹೇಳಿದ್ದಾರೆ. ಇದು ವಿಲೀನಗೊಳಿಸುವುದು ಎಂದಲ್ಲ. ನಂದಿನಿ ಅಸ್ತಿತ್ವ ನೂರಾರು ವರ್ಷ ಶಾಶ್ವತವಾಗಿ ಇರಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನಂದಿನಿ-ಅಮುಲ್ ಪ್ರತ್ಯೇಕ ಅಸ್ತಿತ್ವ ಹೊಂದಿರಲಿವೆ: ಸಿಎಂ ಬೊಮ್ಮಾಯಿ ಸ್ಪಷ್ಟನೆ
ಕೆಲವು ವಲಯಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರೆ ಲಾಭವಿದೆ. ಯಾವುದೇ ಸಮಸ್ಯೆಯಿಲ್ಲ. ನಂದಿನಿ ಅಥವಾ ಅಮುಲ್ ತಾಂತ್ರಿಕವಾಗಿ ಮುಂದಿದ್ದರೆ ಪರಸ್ಪರ ವಿನಿಯಮ ಮಾಡಿಕೊಳ್ಳಬಹುದು. ಆಡಳಿತಾತ್ಮಕ ಕ್ರಮಗಳನ್ನು ವಿನಿಮಯ ಮಾಡಿಕೊಳ್ಳಿ ಎಂದು ಅವರು ಹೇಳಿರುವುದು. ಆ ಬಗ್ಗೆ ತಪ್ಪು ಅರ್ಥ ಕಲ್ಪಿಸುವ ಅಥವಾ ರಾಜಕಾರಣದ ಅವಶ್ಯಕತೆ ಇಲ್ಲ. ನಾನು ಮುಖ್ಯಮಂತ್ರಿಯಾಗಿ ಹೇಳುವುದು, ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ ಎಂದು ಬೊಮ್ಮಾಯಿ ಸ್ಪಷ್ಟನೆ ನೀಡಿದ್ದರು.
