Asianet Suvarna News Asianet Suvarna News

Bharat Jodo Yatra ಭಾರತ ಒಂದು ರಾಷ್ಟ್ರವಲ್ಲ ಎಂದವರಿಂದ ಇದೀಗ ಒಗ್ಗೂಡಿಸುವ ಯಾತ್ರೆ, ರಾಹುಲ್‌ಗೆ ಅಮಿತ್ ಶಾ ಟಾಂಗ್!

ರಾಹುಲ್ ಗಾಂಧಿಯ ಅತೀ ಉತ್ಸಾಹದಿಂದ ಭಾರತ್ ಜೋಡೋ ಯಾತ್ರೆ ಚಾಲನೆ ನೀಡಿ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಯಾತ್ರೆ ವಿರುದ್ದ ಸತತ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಇದೀಗ ರಾಹುಲ್ ಹಾಗೂ ಕಾಂಗ್ರೆಸ್ ವಿರುದ್ದ ಗುಡುಗಿದೆ.

Amit Shah takes swipe at Rahul Gandhi bharat jodo yatra says Congress can only practice vote bank ckm
Author
First Published Sep 10, 2022, 7:58 PM IST

ಜೈಪುರ(ಸೆ.10):  ಕಾಂಗ್ರೆಸ್ ಆಯೋಜಿಸಿರುವ ಭಾರತ್ ಜೋಡೋ ಯಾತ್ರೆ ವಿರುದ್ದ ಬಿಜೆಪಿ ಸತತ ವಾಗ್ದಾಳಿ ನಡೆಸುತ್ತಿದೆ. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಖಾಡಕ್ಕಿಳಿದಿದ್ದು, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣದಲ್ಲಿ, ಭಾರತ ಒಂದು ರಾಷ್ಟ್ರವೇ ಅಲ್ಲ ಎಂದಿದ್ದರು. ಇದೀಗ ಅವರೇ ಭಾರತವನ್ನು ಒಂದೂಗೂಡಿಸಲು ಯಾತ್ರೆ ಮಾಡುತ್ತಿದ್ದಾರೆ. ವಿದೇಶಿ ಟಿ ಶರ್ಟ್ ಧರಿಸಿ ಭಾರತ ಒಗ್ಗೂಡಿಸುವ ಯಾತ್ರೆ ನಡೆಸುತ್ತಿದ್ದಾರೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿ ಬೂತ್ ಮಟ್ಟದ ಪದಾಧಿಕಾರಿಗಳ ಸಭೆಯನ್ನುದ್ದೇಶಿ ಮಾತನಾಡಿದ ಅಮಿತ್ ಶಾ, ಭಾರತ್ ಜೋಡೋ ಯಾತ್ರೆ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ತುಷ್ಟೀಕರಣ ರಾಜಕಾರಣ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ರಾಹುಲ್ ಗಾಂಧಿ ತಮಗೆ ಬೇಕಾದಂತೆ ಇತಿಹಾಸಗಳನ್ನು ತಿರುಚುತ್ತಾರೆ.  ಭಾರತ ಒಂದು ರಾಷ್ಟ್ರವಲ್ಲ ಎಂದಿದ್ದ ರಾಹುಲ್ ಗಾಂಧಿ ಯಾವ ಪುಸ್ತಕದಲ್ಲಿ ಈ ವಿಚಾರ ಓದಿದ್ದೀರಿ ಎಂದು ಅಮಿತ್ ಶಾ ಪ್ರಶ್ನಿಸಿದ್ದರೆ. ಒಂದು ಕುಟುಂಬ ಹಾಗೂ ಪಕ್ಷ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ತಂದಿದೆ ಅನ್ನುವಂತೆ ಬಿಂಬಿಸಲಾಗುತ್ತಿದೆ. ಲಕ್ಷ ಲಕ್ಷ ಭಾರತೀಯರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರಿಗೆ ಅವಮಾನ ಮಾಡಬೇಡಿ ಎಂದು ಅಮಿತ್ ಶಾ ಹೇಳಿದ್ದಾರೆ.

ಸಿಎಂ, ಕೇಂದ್ರ ಸಚಿವ ಸ್ಥಾನ ಕಳೆದುಕೊಂಡಿದ್ದವರಿಗೆ 2024 Lok Sabha Electionಗೆ ಹೊಸ ಜವಾಬ್ದಾರಿ

ರಾಹುಲ್ ಗಾಂಧಿ ಮೊದಲು ಇತಿಹಾಸವನ್ನು ಅಧ್ಯಯನ ಮಾಡಿ ಭಾರತ್ ಜೋಡೋ ಯಾತ್ರೆ ಮಾಡುವುದು ಒಳ್ಳೆಯದು ಎಂದು ಅಮಿತ್ ಶಾ ಹೇಳಿದ್ದಾರೆ. ಇದೇ ವೇಳೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಕಿಡಿ ಕಾರಿದ್ದಾರೆ. ಉದಯಪುರದಲ್ಲಿ ಮುಸ್ಲಿಂ ಉಗ್ರಗಾಮಿಗಳಿಂದ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕನ್ಹಯ್ಯ ಲಾಲ್ ಹತ್ಯೆ, ಕರೌಲಿ ಹಿಂಸಾಚಾರ ಕುರಿತು ರಾಜಸ್ಥಾನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ಕಾಂಗ್ರೆಸ್ ಈ ರೀತಿಯ ರಾಜಾಕಾರಣದಿಂದ ರಾಜಸ್ಥಾನ ಹಾಗೂ ಚತ್ತೀಸಘಡದಲ್ಲಿ ಮುಂದಿನ ಬಾರಿ ಬಿಜೆಪಿ ಸರ್ಕಾರ ರಚಿಸಲಿದೆ. ಬಳಿಕ ಕಾಂಗ್ರೆಸ್‌ಗೆ ಯಾವ ರಾಜ್ಯವೂ ಉಳಿಯುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. 

Follow Us:
Download App:
  • android
  • ios