ನವದೆಹಲಿ(ಫೆ.15): ಭಾರತದ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದ ಬಳಿಕ ನೆರೆಯ ನೇಪಾಳ ಮತ್ತು ಶ್ರೀಲಂಕಾದಲ್ಲೂ ಬಿಜೆಪಿ ಸರ್ಕಾರ ಸ್ಥಾಪಿಸಲು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಯೋಜನೆ ರೂಪಿಸಿದ್ದಾರೆ ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ ದೇಬ್‌ ಹೇಳಿದ್ದಾರೆ.

ಇತ್ತೀಚೆಗೆ ತ್ರಿಪುರಾದ ರಬೀಂದ್ರ ಶತವಾರ್ಷಿಕ ಭವನದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಅಮಿತ್‌ ಶಾ ಅವರು ಈ ವಿಚಾರ ಹಂಚಿಕೊಂಡಿದ್ದಾರೆ ಎಂದು ತಮಗೆ ಶಾ ಅವರು ಹೇಳಿದ್ದಾರೆ ಎಂದು ಬಿಪ್ಲಬ್‌ ಹೇಳಿದ್ದಾಗಿ ‘ಈಸ್ಟ್‌ ಮೋಜೊ’ ಎಂಬ ವೆಬ್‌ಸೈಟ್‌ ವರದಿ ಮಾಡಿದೆ.

ಅಲ್ಲದೆ ಶಾ ನೇತೃತ್ವದಲ್ಲೇ ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷವಾಗಿದೆ ಎಂದೂ ದೇಬ್‌ ತಿಳಿಸಿದ್ದಾರೆ.