ನವದೆಹಲಿ[ಡಿ.02]: ಮೋದಿ, ಶಾ ಕೂಡ ವಲಸಿಗರು ಹೀಗಂತ ಕಾಂಗ್ರೆಸ್ ನಾಯಕರೊಬ್ಬರು ಲೋಕಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಹೇಗೆ? ಯಾಕೆ? ಇಲ್ಲಿದೆ ವಿವರ

ಅಕ್ರಮ ವಲಸಿಗರನ್ನು ದೇಶದಿಂದ ಗಡೀಪಾರು ಮಾಡಲು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಯೋಜನೆಯನ್ನು ರಾಷ್ಟಾ್ರದ್ಯಂತ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸುವಾಗಲೇ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ವಲಸಿಗರು. ಗುಜರಾತಿನಲ್ಲಿ ಮನೆ ಇದ್ದರೂ, ದೆಹಲಿಗೆ ನುಗ್ಗಿದ್ದಾರೆ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ ಚೌಧರಿ, ಈ ದೇಶ ಯಾವುದೋ ಒಬ್ಬ ವ್ಯಕ್ತಿಯ ಆಸ್ತಿಯೇ? ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ ಎಂದು ಕಿಡಿಕಾರಿದರು.