ಚೆನ್ನೈ[ಜ.25]: ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಸಲವಕ್ಕಂ ಎಂಬಲ್ಲಿ ತಮಿಳು ಸಮಾಜ ಸುಧಾರಕ ಇ.ವಿ. ರಾಮಸ್ವಾಮಿ ‘ಪೆರಿಯಾರ್‌’ ಅವರ ಪುತ್ಥಳಿಯನ್ನು ಭಗ್ನಗೊಳಿಸಿದ ಘಟನೆ ಶುಕ್ರವಾರ ನಡೆದಿದೆ. ಇತ್ತೀಚೆಗೆ ನಟ, ರಾಜಕಾರಣಿ ರಜನೀಕಾಂತ್‌ ಅವರು, ‘ಪೆರಿಯಾರ್‌ ನಡೆಸಿದ ರಾರ‍ಯಲಿಯಲ್ಲಿ ಶ್ರೀರಾಮ-ಸೀತಾಮಾತೆಯರ ಬೆತ್ತಲೆ ಚಿತ್ರದ ಮೆರವಣಿಗೆ ಮಾಡಲಾಗಿತ್ತು’ ಎಂದು ಆರೋಪಿಸಿದ್ದರು. ಈ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿದ್ದು, ಇದರ ನಡುವೆಯೇ ಪ್ರತಿಮೆ ಭಗ್ನ ನಡೆದಿದೆ.

ಪ್ರತಿಮೆ ಭಗ್ನವಾಗಿದ್ದನ್ನು ಜನರು ಗಮನಿಸುತ್ತಿದ್ದಂತೆಯೇ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಅಲ್ಲದೆ ರಾಜಕೀಯ ಆರೋಪ ಪ್ರತ್ಯಾರೋಪಗಳೂ ಆರಂಭಗೊಂಡವು. ಈ ಹಿನ್ನೆಲೆಯಲ್ಲಿ ಸಮಾಜ ಘಾತಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.

ರಜನಿಕಾಂತ್ ಚಿತ್ರವನ್ನೇ ತಿರಸ್ಕರಿಸಿದ ಕನ್ನಡ ನಟಿ!ಕಾರಣವಾದ್ರೂ ಏನು?

ರಜನಿ ವಿರುದ್ಧ ಎಫ್‌ಐಆರ್‌ ಕೋರಿದ್ದ ಅರ್ಜಿ ವಜಾ

ಪೆರಿಯಾರ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆನ್ನಲಾದ ನಟ, ರಾಜಕಾರಣಿ ರಜನೀಕಾಂತ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಪೊಲೀಸರಿಗೆ ನಿರ್ದೇಶಿಸಬೇಕು ಎಂಬ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ವಜಾ ಮಾಡಿದೆ. ದ್ರಾವಿಡರ್‌ ವಿಡುತಲೈ ಕಳಗಂ ಎಂಬ ಸಂಘಟನೆ ಈ ಅರ್ಜಿ ಸಲ್ಲಿಸಿತ್ತು. ಶುಕ್ರವಾರ ಇದರ ವಿಚಾರಣೆ ನಡೆಸಿದ ನ್ಯಾ

ಪಿ. ರಾಜಮಾಣಿಕ್ಯಂ, ‘ಅರ್ಜಿದಾರರು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪ್ರಕರಣ ದಾಖಲಾಗಿದೆಯೇ ಇಲ್ಲವೇ ಎಂಬ ಫಲಿತಾಂಶವೇ ಇನ್ನೂ ತಿಳಿದಿಲ್ಲ. ಆಗಲೇ ಅವರು ಪ್ರಕರಣ ದಾಖಲಿಸಲು ಸೂಚಿಸುವಂತೆ ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದು ಸರಿಯಲ್ಲ’ ಎಂಬ ಸರ್ಕಾರಿ ವಕೀಲರ ವಾದವನ್ನು ಮನ್ನಿಸಿ ಅರ್ಜಿ ವಜಾ ಮಾಡಿದರು. ಇದೇ ವೇಳೆ, ‘ರಜನಿ ಅವರು ಪತ್ರಿಕೆಯೊಂದರ ವರದಿ ಆಧರಿಸಿ ಈ ಹೇಳಿದ್ದಾರೆ. ಈ ವಿಷಯದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ಸರ್ಕಾರಿ ವಕೀಲರು ಭರವಸೆ ನೀಡಿದರು.