ಕೋಲ್ಕತಾ(ಏ.09): ಲಾಕ್‌ಡೌನ್‌ನಿಂದಾಗಿ ಬಾರ್‌, ಮದ್ಯ ಮಾರಾಟ ಮಳಿಗೆಗಳು ಬಂದ್‌ ಆಗಿರುವ ಹಿನ್ನೆಲೆಯಲ್ಲಿ ಮದ್ಯವನ್ನು ಮನೆ ಬಾಗಿಲಿಗೇ ಪೂರೈಸುವುದಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನೀಡಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿಲ್ಲ ಎಂದು ಅಬಕಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ. ಆದರೆ, ಲಾಕ್‌ಡೌನ್‌ ಮುಗಿಯುವವರೆಗೂ ರಾಜ್ಯದ ಎಲ್ಲಾ ಬಾರ್‌ ಹಾಗೂ ಮದ್ಯ ಮಾರಾಟ ಮಳಿಗೆಗಳು ಬಂದ್‌ ಆಗಿರಲಿವೆ.

ಮದ್ಯದಂಗಡಿ ಬಿಟ್ಟು ಮಾನಸಿಕ ಆಸ್ಪತ್ರೆಗೆ ವ್ಯಸನಿಗಳ ದೌಡು!

ಮದ್ಯವನ್ನು ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಿಂದ ಪೊಲೀಸರು ಮದ್ಯ ಮಾರಾಟಗಾರರಿಗೆ ಡೆಲಿವರಿ ಪಾಸ್‌ಗಳನ್ನು ನೀಡಲಿದ್ದಾರೆ. ಜನರು ತಮ್ಮ ಸಮೀಪದ ಮದ್ಯ ಮಾರಾಟ ಮಳಿಗೆಗಳಿಗೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ಅವಧಿಯಲ್ಲಿ ಫೋನ್‌ ಮಾಡಿ ಮದ್ಯದ ಆರ್ಡರ್‌ ನೀಡಬೇಕು.

ಬಳಿಕ ಅಂಗಡಿ ಮಾಲೀಕರು ಮದ್ಯದ ಆರ್ಡರ್‌ಗಳನ್ನು ಸಂಜೆ 5 ಗಂಟೆಯ ಒಳಗೆ ಮನೆಗಳಿಗೆ ಪೂರೈಕೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

"