Allahabad High Court: ಅಶ್ಲೀಲ ಪೋಸ್ಟ್ ಲೈಕ್ ಮಾಡೋದು ಅಪರಾಧವಲ್ಲ, ಶೇರ್ ಮಾಡೋದು ಅಪರಾಧ!
ಅಶ್ಲೀಲ ಪೋಸ್ಟ್ ಅನ್ನು ಹಂಚಿಕೊಳ್ಳುವುದು ಅಥವಾ ಮರುಟ್ವೀಟ್ ಮಾಡುವುದು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ "ಪ್ರಸಾರ" ಕ್ಕೆ ಸಮನಾಗಿರುತ್ತದೆ. ಹಾಗಾಗಿ ಇದು ಅಪರಾಧವಾಗಿರುತ್ತದೆ ಎಂದು ಅಲಹಾಬಾದ್ ಕೋರ್ಟ್ ತಿಳಿಸಿದೆ.

ನವದೆಹಲಿ (ಅ.28): ಸೋಶಿಯಲ್ ಮೀಡಿಯಾಗಳಾದ ಫೇಸ್‌ಬುಕ್, ಎಕ್ಸ್ ಹಾಗೂ ಇನ್ಸ್‌ಟಾಗ್ರಾಮ್‌ನಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ಲೈಕ್ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯ (ಐಟಿ ಆಕ್ಟ್) ಸೆಕ್ಷನ್ 67 ರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದೆ. ಆದರೆ, ಇಂಥ ಪೋಸ್ಟ್‌ಗಳನ್ನು ಶೇರ್ ಮಾಡುವುದು ಅಥವಾ ರೀಟ್ವೀಟ್ ಮಾಡುವುದು ಇದೇ ಕಾಯ್ದೆಯ ಅಡಿಯಲ್ಲಿ ಪ್ರಸಾರಕ್ಕೆ ಸಮಾನಾಗಿರುತ್ತದೆ. ಇದರಿಂದಾಗಿ ದಂಡ ಅಥವಾ ಶಿಕ್ಷೆಯನ್ನು ಇದು ಆಕರ್ಷಿಸುತ್ತದೆ ಎಂದು ಕೋರ್ಟ್ ಆದೇಶ ನೀಡಿದೆ. ಕೇವಲ ಆಕ್ಷೇಪಾರ್ಹ ಪೋಸ್ಟ್ ಅನ್ನು ಇಷ್ಟಪಡುವುದು ಅಂತಹ ವಿಷಯವನ್ನು ಪ್ರಕಟಿಸಲು ಅಥವಾ "ರವಾನೆ ಮಾಡಲು" ಸಮನಾಗುವುದಿಲ್ಲ ಎಂದು ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ವಿವರಣೆ ನೀಡಿದ್ದಾರೆ. “ಒಂದು ಪೋಸ್ಟ್ ಅಥವಾ ಸಂದೇಶವನ್ನು ಪೋಸ್ಟ್ ಮಾಡಿದಾಗ ಅದನ್ನು ಪ್ರಕಟಿಸಲಾಗಿದೆ ಎಂದು ಹೇಳಬಹುದು ಮತ್ತು ಪೋಸ್ಟ್ ಅಥವಾ ಸಂದೇಶವನ್ನು ಹಂಚಿಕೊಂಡಾಗ ಅಥವಾ ಮರುಟ್ವೀಟ್ ಮಾಡಿದಾಗ ಅದು ಪ್ರಸಾರ ಮಾಡಿದಂತಾಗಿದೆ ಎಂದು ಹೇಳಬಹುದು. ಪೋಸ್ಟ್ ಅನ್ನು ಇಷ್ಟಪಡುವುದು ಪೋಸ್ಟ್ ಅನ್ನು ಪ್ರಕಟಿಸಲು ಅಥವಾ ರವಾನಿಸಲು ಸಮನಾಗಿರುವುದಿಲ್ಲ, ಆದ್ದರಿಂದ , ಕೇವಲ ಪೋಸ್ಟ್ ಅನ್ನು ಲೈಕ್ ಮಾಡುವುದು ಸೆಕ್ಷನ್ 67 ಐಟಿ ಆಕ್ಟ್ ಅಡಿ ಅಪರಾಧವಾಗೋದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರು (ಅರ್ಜಿದಾರರು) ಪ್ರಕರಣವನ್ನು ರದ್ದುಪಡಿಸುವ ಅರ್ಜಿಯ ವಿಚಾರಣೆ ನಡೆಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಪೋಸ್ಟ್‌ಗಳು ಮುಸ್ಲಿಂ ಸಮುದಾಯಕ್ಕೆ ಸೇರಿದ ಸುಮಾರು 600-700 ಜನರ ಗುಂಪಿಗೆ ಕಾರಣವಾಗಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ. ಆರೋಪಿ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಅವರು ಅಪರಾಧ ಎಸಗಿದ್ದಾರೆಂದು ಸೂಚಿಸುವ ಯಾವುದೇ ವಸ್ತು ಅವರ ವಿರುದ್ಧ ಇಲ್ಲ ಎಂದು ವಾದ ಮಂಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ತನಿಖಾಧಿಕಾರಿಗಳು, ಈತ ಈ ಹಿಂದೆ ಲೈಕ್ ಮಾಡಿದಂತ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಸಾಕ್ಷಿ ಎನ್ನುವಂತೆ ಕೋರ್ಟ್‌ಗೆ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಐಟಿಯ ಸೆಕ್ಷನ್ 67 ಅನ್ನು ಅನ್ವಯಿಸಿದ್ದರಿಂದ, ನ್ಯಾಯಾಲಯವು ಕಾನೂನುನ್ನು ಪರಿಶೀಲಿಸಿತು. ಯಾವುದೇ ವ್ಯಕ್ತಿಯು ಸಂದೇಶವನ್ನು ಓದುವ, ನೋಡುವ ಅಥವಾ ಕೇಳುವ ವ್ಯಕ್ತಿಗಳನ್ನು ಕೆಡಿಸುವ ಮತ್ತು ಭ್ರಷ್ಟಗೊಳಿಸುವ ಯಾವುದೇ ವಸ್ತುವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಕಟಿಸಿದಾಗ ಅಥವಾ ರವಾನಿಸಿದಾಗ ಅಥವಾ ಪ್ರಕಟಿಸಲು ಅಥವಾ ರವಾನಿಸಲು ಕಾರಣವಾದಾಗ ಮಾತ್ರ ಈ ನಿಬಂಧನೆಯು ಅನ್ವಯಿಸುತ್ತದೆ ಎಂಬ ತೀರ್ಮಾನಕ್ಕೆ ಬಂದಿತು.
ಎಲ್ಲಿದೆಯೋ ನ್ಯಾಯ: ನಿಥಾರಿ ರಾಕ್ಷಸರು ದೋಷಮುಕ್ತ: ಕಣ್ಣೀರಿಟ್ಟ ಸಂತ್ರಸ್ತ ಮಕ್ಕಳ ಪೋಷಕರು
ಹೀಗಿರುವಾಗ, ಅಂತಹ ಪೋಸ್ಟ್ ಅನ್ನು ಲೈಕ್ ಮಾಡುವುದು ಮಾತ್ರ ಪೋಸ್ಟ್ ಅನ್ನು ಪ್ರಕಟಿಸಲು ಅಥವಾ ರವಾನಿಸಲು ಸಮನಾಗಿರುವುದಿಲ್ಲ ಮತ್ತು ಹೀಗಾಗಿ ಐಟಿ ಕಾಯಿದೆಯ ಸೆಕ್ಷನ್ 67 ಅಥವಾ ಯಾವುದೇ ಇತರ ಕ್ರಿಮಿನಲ್ ಅಪರಾಧವನ್ನು ಆಕರ್ಷಿಸುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಐಟಿ ಕಾಯಿದೆಯ ಸೆಕ್ಷನ್ 67, ಅಶ್ಲೀಲ ಪೋಸ್ಟ್‌ಗಳಿಗೆ ಮತ್ತು "ಪ್ರಚೋದನಕಾರಿ" ಪೋಸ್ಟ್‌ಗಳಿಗೆ ಅಲ್ಲ ಎಂದು ಕೋರ್ಟ್ ಗಮನಿಸಿದೆ. "ಕಾಮಪ್ರಚೋದಕ ಅಥವಾ ಪ್ರುರಿಯಂಟ್ ' ಎನ್ನುವ ಪದಗಳು ಲೈಂಗಿಕ ಆಸಕ್ತಿ ಮತ್ತು ಬಯಕೆಗೆ ಸಂಬಂಧಿಸಿದೆ ಎಂದರ್ಥ, ಆದ್ದರಿಂದ, ಈ ಸೆಕ್ಷನ್ ಇತರ ಪ್ರಚೋದನಕಾರಿ ವಸ್ತುಗಳಿಗೆ ಯಾವುದೇ ಶಿಕ್ಷೆಯನ್ನು ಕಾಯಿದೆ ಸೂಚಿಸುವುದಿಲ್ಲ, ”ಎಂದು ನ್ಯಾಯಾಲಯ ಹೇಳಿದೆ.
ಆರೋಪಿಯನ್ನು ಯಾವುದೇ ಆಕ್ಷೇಪಾರ್ಹ ಪೋಸ್ಟ್‌ನೊಂದಿಗೆ ಸಂಪರ್ಕಿಸಲು ಯಾವುದೇ ವಸ್ತು ಕಂಡುಬಂದಿಲ್ಲ, ನ್ಯಾಯಾಲಯವು ಅವರ ವಿರುದ್ಧ ಯಾವುದೇ ಪ್ರಕರಣವನ್ನು ಮಾಡಲಾಗಿಲ್ಲ ಮತ್ತು ಪರಿಣಾಮವಾಗಿ ಅವರ ವಿರುದ್ಧದ ಪ್ರಕ್ರಿಯೆಗಳನ್ನು ರದ್ದುಗೊಳಿಸಿತು.
ತಾಳಿ ಕಟ್ಟಿದೋರು ಸಪ್ತಪದಿ ತುಳಿಲೇಬೇಕು: ಇಲ್ಲಾಂದ್ರೆ ವಿವಾಹ ಮಾನ್ಯವಲ್ಲವೆಂದ ಹೈಕೋರ್ಟ್