Asianet Suvarna News Asianet Suvarna News

UP Election 2022| ಅಖಿಲೇಶ್ ಭೇಟಿಯಾದ ಜಯಂತ್ ಚೌಧರಿ: ಚುನಾವಣಾ ಅಖಾಡದಲ್ಲಿ ಭಾರೀ ಸಂಚಲನ!

* ಉತ್ತರ ಪ್ರದೇಶ ಚುನಾವಣೆಗೆ ಪಕ್ಷಗಳ ಸಿದ್ಧತೆ

* ರಣತಂತ್ರ ಹೆಣೆಯುವಲ್ಲಿ ಪಕ್ಷಗಳು ತಲ್ಲೀನ

* ಅಖಿಲೇಶ್ ಭೇಟಿಯಾದ ಜಯಂತ್ ಚೌಧರಿ

Akhilesh Yadav Jayant Chaudhary tweet pics after meeting hint at poll alliance pod
Author
Bangalore, First Published Nov 23, 2021, 6:22 PM IST
  • Facebook
  • Twitter
  • Whatsapp

ಲಕ್ನೋ(ನ.23): ಉತ್ತರ ಪ್ರದೇಶ ಚುನಾವಣೆ ವಿಚಾರ ಸದ್ಯ ಭಾರೀ ಕಾವು ಪಡೆದಿದ್ದು, ರಾಜಕೀಯ ಪಕ್ಷಗಳು ಮತದಾರನ ಓಲೈಕೆಗೆ ರಣತಂತ್ರ ಹೂಡುವಲ್ಲಿ ತಲ್ಲೀನರಾಗಿವೆ. ರಾಷ್ಟ್ರೀಯ ಲೋಕದಳ (RLD) ಅಧ್ಯಕ್ಷ ಜಯಂತ್ ಚೌಧರಿ (Jayant Chaudhary) ಇಂದು ಲಕ್ನೋದಲ್ಲಿದ್ದಾರೆ (Lucknow). ಈ ವೇಳೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಅವರ ಮನೆಗೆ ಅವರು ತಲುಪಿದ್ದಾರೆ. ಇಲ್ಲಿ ನಡೆದ ಮಾತುಕತೆಯ ಬಳಿಕ ಸೀಟು ಹಂಚಿಕೆ ವಿಚಾರ ತಿರುವು ಪಡೆದುಕೊಂಡಿದೆ. ಈ ಸಭೆಗೂ ಮುನ್ನ ಉಭಯ ನಾಯಕರ ನಡುವಿನ ಒಪ್ಪಂದದ ಬಳಿಕ ಸೀಟು ಹಂಚಿಕೆ ಘೋಷಣೆಯಾಗಬಹುದು ಎಂಬ ಚರ್ಚೆ ನಡೆದಿದೆ. ಈಗಾಗಲೇ ಎರಡು ಪಕ್ಷಗಳ ನಡುವೆ ಮೈತ್ರಿ ಇದೆ.

ಭೇಟಿಯ ಫೋಟೋ ಶೇರ್ ಮಾಡಿಕೊಂಡ ನಾಯಕ

ಈ ಭೇಟಿ ಬಳಿಕ ಜಯಂತ್ ಚೌಧರಿ (Jayant Chaudhary) ಅವರು ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ ಮತ್ತು 'ಮುಂದುವರೆಯುವ ಹೆಜ್ಜೆ' ಎಂದು ಬರೆದಿದ್ದಾರೆ. ಅತ್ತ ಅಖಿಲೇಶ್ ಯಾದವ್ ಕೂಡ ಟ್ವೀಟ್ ಮಾಡಿದ್ದಾರೆ. ‘ಶ್ರೀ ಜಯಂತ್ ಚೌಧರಿ ಅವರೊಂದಿಗೆ ಬದಲಾವಣೆಯ ಕಡೆಗೆ’ ಎಂದು ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ, ಬುಧವಾರ ಇಬ್ಬರೂ ನಾಯಕರು ಮೈತ್ರಿಯನ್ನು (Alliance) ಘೋಷಿಸಬಹುದು. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಜಯಂತ್ ಚೌಧರಿ ಅವರು 50 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದಾರೆ. ಆರ್‌ಎಲ್‌ಡಿ 36 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಆರ್‌ಎಲ್‌ಡಿ 50 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದು, ಎಸ್‌ಪಿ 30ರಿಂದ 32 ಸ್ಥಾನ ನೀಡಲು ಸಿದ್ಧವಿದೆ ಎನ್ನಲಾಗಿದೆ. ಮೂಲಗಳಿಂದ ಸಿಕ್ಕ ಮಾಹಿತಿ ಅನ್ವಯ, ನವೆಂಬರ್ 24 ರಂದು ಜಯಂತ್ ಮತ್ತು ಅಖಿಲೇಶ್ ನಡುವೆ ಮತ್ತೊಂದು ಸುತ್ತಿನ ಮಾತುಕತೆಯೂ ನಡೆಯಬಹುದು. ಇದಾದ ಬಳಿಕ ಇಬ್ಬರೂ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಮೈತ್ರಿ ಬಗ್ಗೆ ಘೋಷಣೆ ಮಾಡಬಹುದು ಎನ್ನಲಾಗಿದೆ.

ಸೀಟಿನ ವಿಚಾರವಾಗಿ ಮುಂದುವರೆದ ಸಸ್ಪೆನ್ಸ್ 

ಯುಪಿ ವಿಧಾನಸಭೆ ಚುನಾವಣೆಗೆ ಇನ್ನು ಮೂರು ತಿಂಗಳು ಮಾತ್ರ ಬಾಕಿ ಇದೆ. ಜಯಂತ್ ಚೌಧರಿ ಅವರು ಎಸ್‌ಪಿ ಜೊತೆಗಿನ ಸೀಟು ಹಂಚಿಕೆಯನ್ನು ಶೀಘ್ರದಲ್ಲೇ ಅಂತಿಮಗೊಳಿಸಬೇಕೆಂದು ಬಯಸಿದ್ದಾರೆ. ಜಯಂತ್ ಚೌಧರಿ ಪಶ್ಚಿಮ ಯುಪಿ ಸ್ಥಾನಗಳನ್ನು ಕೇಳುತ್ತಿದ್ದಾರೆ. ಇದರಲ್ಲಿ ಮೀರತ್, ಮುಜಾಫರ್‌ನಗರ, ಶಾಮ್ಲಿ, ಮಥುರಾ, ಬುಲಂದ್‌ಶಹರ್‌ನ ಅನೇಕ ಅಸೆಂಬ್ಲಿಗಳಿವೆ. ಸೀಟುಗಳ ವಿಚಾರದಲ್ಲಿ ಜಯಂತ್ ಪ್ರಸ್ತಾವನೆಗೆ ಅಖಿಲೇಶ್ ಯಾದವ್ ಒಪ್ಪಿಗೆ ನೀಡಿಲ್ಲ ಎಂದು ವರದಿಯಾಗಿದೆ.

Farm Laws ಹಿಂಪಡೆಯುವ ಘೋಷಣೆ, ತಲೆಕೆಳಗಾದ ಚುನಾವಣಾ ಲೆಕ್ಕಾಚಾರ

ಎಲ್ಲಾ ಮೂರು ಕೃಷಿ ಕಾನೂನುಗಳನ್ನು (Farm Laws) ಹಿಂತೆಗೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ (Prime Minister Narendra Modi) ದೊಡ್ಡ ನಿರ್ಧಾರದ ನಂತರ, ಈಗ 2022 ರ ಚುನಾವಣೆಗೆ ಬಹಳ ಮುಖ್ಯವಾದ ಉತ್ತರ ಪ್ರದೇಶ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗುವ ಸುಳಿವು ಲಭಿಸಿದೆ. ಶನಿವಾರ, ಆರ್‌ಎಲ್‌ಡಿ ಅಧ್ಯಕ್ಷ (RLD President) ಜಯಂತ್ ಚೌಧರಿ (Jayant Chaudhari) ಅವರ ಸಾರ್ವಜನಿಕ ಸಭೆಯಲ್ಲಿ ಸುಮಾರು ಶೇ 70 ರಷ್ಟು ಮುಸ್ಲಿಮರಿದ್ದರು (Muslims), ಆದರೂ ಜಯಂತ್‌ರವರು ರಾಮ್ ರಾಮ್ ಎನ್ನುವ ಮೂಲಕ ಸಾರ್ವಜನಿಕ ಸಭೆಯನ್ನು ಪ್ರಾರಂಭಿಸಿದರು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಜೊತೆಗಿನ ಮೈತ್ರಿಯ ಬಗ್ಗೆ ಅವರು ಪರೋಕ್ಷವಾಗಿ ಮಾತನಾಡಿರುವುದು ಕಂಡುಬಂದಿದೆ. ಕೃಷಿ ಕಾನೂನು ಹಿಂಪಡೆದ ನಂತರ ಸಮಾಜವಾದಿ ಪಕ್ಷ (Samajwadi Party) ಅವರಿಗೆ ಹೆಚ್ಚಿನ ಸ್ಥಾನಗಳನ್ನು ನೀಡುವ ಉತ್ಸಾಹದಲ್ಲಿ ಇಲ್ಲ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಮಾತನಾಡಿದ ರಾಜ್ಯದ ಹಿರಿಯ ಸಚಿವ ಜೈ ಪ್ರತಾಪ್ ಸಿಂಗ್, ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರದಿಂದ ವಿರೋಧ ಪಕ್ಷಗಳಿಗೆ ಕೆಲಸವಿಲ್ಲದಂತಾಗಿದೆ. ಅವರು ಕೇವಲ ತಮ್ಮ ವೋಟ್ ಬ್ಯಾಂಕ್‌ಗಾಗಿ ಮೈತ್ರಿ (Alliance) ಮಾಡುತ್ತಾರೆ ಹಾಗೂ ಮುರಿಯುತ್ತಾರೆ, ಆದರೆ ಪ್ರಧಾನಿ ಮೋದಿಯವರ ದೊಡ್ಡ ಘೋಷಣೆಯ ನಂತರ, ಈಗ ಅವರು ಎಲ್ಲರ ಬಗ್ಗೆ ಯೋಚಿಸುತ್ತಾರೆ ಮತ್ತು ಸಂವೇದನಾಶೀಲರಾಗಿದ್ದಾರೆ. ಈಗ ಅಖಿಲೇಶ್ ಯಾದವ್ ಅವರಿಗೂ ದೊಡ್ಡ ವಿಚಾರವೊಂದು ಕೈ ತಪ್ಪಿ ಹೋಗುತ್ತಿದ್ದಂತೆಯೇ ಜಯಂತ್ ಚೌಧರಿ ಜೊತೆ ಮೈತ್ರಿ ಮಾಡಿಕೊಂಡರೆ ಪ್ರಯೋಜನವಿಲ್ಲ ಎಂದು ಅರ್ಥವಾಗತೊಡಗಿದೆ.

 

Follow Us:
Download App:
  • android
  • ios