ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಗಳಲ್ಲಿ ಒಂದಾದ ಉಡಾನ್‌ ಯೋಜನೆಯಲ್ಲಿ ಶೇ.93ರಷ್ಟು ಮಾರ್ಗಗಳು ವಿಫಲವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಪಿಸಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಗಳಲ್ಲಿ ಒಂದಾದ ಉಡಾನ್‌ ಯೋಜನೆಯಲ್ಲಿ ಶೇ.93ರಷ್ಟು ಮಾರ್ಗಗಳು ವಿಫಲವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಪಿಸಿದ್ದಾರೆ. ಈ ಕುರಿತು ಮಹಾಲೇಖಪಾಲಕರ (ಸಿಎಜಿ) ವರದಿಯನ್ನು ಉಲ್ಲೇಖಿಸಿದ ಅವರು, ಉಡಾನ್‌ ಯೋಜನೆಯಲ್ಲಿ ಜಾರಿಯಾದ 371 ಮಾರ್ಗಗಳಲ್ಲಿ ಶೇ.30 (112 ಮಾರ್ಗಗಳು) ಮಾತ್ರ ಮೂರು ವರ್ಷದ ಪೂರ್ಣ ಅವಧಿಯನ್ನು ಪೂರ್ಣಗೊಳಿಸಿದೆ. ಈ 112 ಮಾರ್ಗಗಳ ಪೈಕಿ ಕೇವಲ 54 ಮಾರ್ಗಗಳು 17 ಸ್ಥಳೀಯ ವಿಮಾನ ನಿಲ್ದಾಣಗಳನ್ನು ಅವಧಿಯ ನಂತರವೂ ಸಂಪರ್ಕಿಸುತ್ತಿದೆ. ಉಡಾನ್‌ ಯೋಜನೆಯ 116 ವಿಮಾನ ನಿಲ್ದಾಣ/ ಹೆಲಿಪ್ಯಾಡ್‌ಗಳಲ್ಲಿ ಕೇವಲ 71 ಮಾತ್ರ ಕಾರ್ಯನಿರ್ವಹಿಸುತ್ತಿದೆ. ಇದು ಕೇಂದ್ರ ಸರ್ಕಾರದ ವೈಫಲ್ಯ ಎಂದು ಆರೋಪಿಸಿದರು.

ಶಿವಮೊಗ್ಗದಿಂದ ಉಡಾನ್ ಯೋಜನೆಯಡಿ ತಿರುಪತಿ, ಗೋವಾ, ಹೈದರಾಬಾದ್‌ಗೂ ವಿಮಾನ; ಸಚಿವ ಎಂ.ಬಿ.ಪಾಟೀಲ

ಕಲಬುರ್ಗಿ- ಮಂಗಳೂರು ವಿಮಾನ ಸಂಚಾರ ನಿತ್ಯ ಪ್ರಾರಂಭಿಸಲು ಒತ್ತಾಯ