Asianet Suvarna News Asianet Suvarna News

ಕಾಂಗ್ರೆಸ್‌ ಸ್ಥಾಪಿತ ಶಾಲೆಯಲ್ಲಿ ಮೋದಿ ವಿದ್ಯಾಭ್ಯಾಸ: ಖರ್ಗೆ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ನೆಹರು, ಕಾಂಗ್ರೆಸ್‌ 70 ವರ್ಷದಲ್ಲಿ ಏನೂ ಮಾಡಿಲ್ಲ ಎನ್ನುವ ಮೋದಿ, ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಶಾಲೆಗಳನ್ನು ನಿರ್ಮಿಸಲಾಗಿದೆಯೇ?

Aicc President Mallikarjun Kharge Slams On PM Narendra Modi gvd
Author
First Published Aug 13, 2023, 11:39 PM IST

ರಾಂಚಿ (ಆ.13): ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ನೆಹರು, ಕಾಂಗ್ರೆಸ್‌ 70 ವರ್ಷದಲ್ಲಿ ಏನೂ ಮಾಡಿಲ್ಲ ಎನ್ನುವ ಮೋದಿ, ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಶಾಲೆಗಳನ್ನು ನಿರ್ಮಿಸಲಾಗಿದೆಯೇ? ಮೋದಿ ಮತ್ತು ಅಮಿತ್‌ ಶಾ ಏನೇ ಓದಿದ್ದರೂ ನಮ್ಮಿಂದ (ಕಾಂಗ್ರೆಸ್‌ನಿಂದ) ಸ್ಥಾಪಿಸಲ್ಪಟ್ಟ ಸರ್ಕಾರಿ ಶಾಲೆಗಳಲ್ಲಿ’ ಎಂದು ಕಿಡಿಕಾರಿದ್ದಾರೆ.

ಛತ್ತೀಸ್‌ಗಢದ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ ‘ಅವಿಶ್ವಾಸ ನಿರ್ಣಯದ ಮೇಲಿನ ಭಾಷಣದಲ್ಲಿ ಮಣಿಪುರ ಜನಾಂಗೀಯ ಹಿಂಸೆ ಕುರಿತು ರಾಹುಲ್‌ ಗಾಂಧಿ ಕೇಳಿದ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಲಿಲ್ಲ. ಬದಲಿಗೆ ಅವರು ಕಾಂಗ್ರೆಸ್‌ ಮತ್ತುಬ ಕಾಂಗ್ರೆಸ್ಸಿನ ಮಾಜಿ ಪ್ರಧಾನಿಗಳನ್ನು ಟೀಕಿಸಿದರು. ಅಲ್ಲದೇ ಎಲ್ಲವನ್ನೂ ತಾವೇ ಮಾಡಿದ್ದಾಗಿ ಹೇಳಿಕೊಂಡರು. ಆದರೆ ಅವರು ಕಾಂಗ್ರೆಸ್‌ ನಿರ್ಮಿಸಿದ ಶಾಲೆಗಳಲ್ಲಿ ಓದಿದ್ದಾರೆ ಎಂಬುದನ್ನು ಮರೆಯಬಾರದು’ ಎಂದರು. ಇದೇ ವೇಳೆ 2024ರಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ನನ್ನ ವಿರುದ್ಧ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ: ನಟ ಉಪೇಂದ್ರ ಹೀಗಂದಿದ್ದೇಕೆ?

ಪ್ರಧಾನಿ ಮೋದಿಯೇನು ದೇವರಾ?: ರಾಜ್ಯಸಭೆಯಲ್ಲಿ ಮಣಿಪುರ ಕುರಿತ ಚರ್ಚೆಗೆ ಪ್ರಧಾನಿ ಮೋದಿ ಹಾಜರಾಗದ ಅನಿವಾರ್ಯತೆ ಏನು? ಅವರೇನು ದೇವರಾ ಎಂದು ರಾಜ್ಯಸಭೆಯಲ್ಲಿನ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಪ್ರಧಾನಿ ಅವರ ಉಪಸ್ಥಿತಿಯಲ್ಲಿ ನಿಯಮ 267 (ಪ್ರಧಾನಿ ಅಭಿಪ್ರಾಯ ಹಾಗೂ ಮತದಾನ) ಅಡಿಯಲ್ಲಿ ಮಣಿಪುರ ವಿಷಯದ ಚರ್ಚೆ ನಡೆಯಬೇಕು ಎಂದು ವಿಪಕ್ಷಗಳು ಒತ್ತಾಯಿಸಿದವು. ಆದರೆ ಇದಕ್ಕೆ ಆಡಳಿತ ಪಕ್ಷ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಖರ್ಗೆ,‘ಪ್ರಧಾನಿ ಮೋದಿ ಸಂಸತ್ತಿಗೆ ಬಂದರೆ ಏನಾಗುತ್ತದೆ ? ಅವರೇನು ದೇವರೇ? ಎಂದು ತಿರುಗೇಟು ನೀಡಿದರು. ಇದರಿಂದ ಉಂಟಾದ ಗದ್ದಲದಿಂದಾಗಿ ಕಲಾಪವನ್ನು ಮಧ್ಯಾಹ್ನ 2 ಗಂಟೆವರೆಗೆ ಮುಂದೂಡಲಾಯಿತು.

ಖರ್ಗೆಗೆ ಅಜಯ್‌ ಸಿಂಗ್‌ ಅಭಿನಂದನೆ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ನೂತನವಾಗಿ ನೇಮಕಗೊಂಡಿರುವ ಜೇವರ್ಗಿ ಶಾಸಕ ಡಾ.ಅಜಯ್‌ ಧರ್ಮಸಿಂಗ್‌ ಅವರು ನವದೆಹಲಿಗೆ ತೆರಳಿ ಅಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಕಮಿಟಿ (ಎಐಸಿಸಿ) ಅಧ್ಯಕ್ಷರು ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು. ಮೊನ್ನೆಯಷ್ಟೇ ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಶುಭ ಕೋರಿದ್ದ ಡಾ. ಅಜಯ್‌ ಸಿಂಗ್‌ ಶನಿವಾರ ಬೆಳಗ್ಗೆ ನವದೆಹಲಿಗೆ ಹೋಗಿ ಡಾ. ಖರ್ಗೆಯವರನ್ನು ಅಭಿನಂದಿಸಿ ಪಕ್ಷ ತಮ್ಮ ಮೇಲಿಟ್ಟಂತಹ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕಲ್ಯಾಣ ನಾಡಿನ ಪ್ರಗತಿಗಾಗಿ ಇರುವಂತಹ ಕೆಕೆಆರ್‌ಡಿಬಿ ಮಂಡಳಿಯ ಅಧ್ಯಕ್ಷರಾಗಿ ಕೆಲಸಗಳನ್ನು ನಿಭಾಯಿಸುವುದಾಗಿ ಈ ಭೇಟಿಯ ಸಂದರ್ಭದಲ್ಲಿ ಡಾ. ಅಜಯ್‌ ಸಿಂಗ್‌ ಅವರು ಡಾ. ಮಲ್ಲಿಕರ್ಜುನ ಖರ್ಗೆಯವರ ಸಮ್ಮುಖದಲ್ಲಿ ಹೇಳಿದರು.

ಗುತ್ತಿಗೆದಾರರ ಆರೋಪದ ವಿಚಾರದಲ್ಲಿ ಸಿದ್ದು ಸುಳ್ಳು ಹೇಳುತ್ತಿದ್ದಾರೆ: ಬೊಮ್ಮಾಯಿ

ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ 7 ಜಿಲ್ಲೆಗಳ ವಿಶಾಲವಾದಂತಹ ವ್ಯಾಪ್ತಿ ಹೊಂದಿರುವ ಹಾಗೂ ಬಹುಕೋಟಿ ಅಭಿವೃದ್ಧಿ ಅನುದಾನ ಹೊಂದಿರುವ ಕೆಕೆಆರ್‌ಡಿಬಿಯನ್ನು ಹೆಚ್ಚು ಕ್ರಿಯಾಶೀಲವಾಗಿಸಿ ಅನುದಾನ ಸೂಕ್ತ ಹಾಗೂ ಜನಪರ, ಪ್ರದೇಶ ಅಭಿವೃದ್ಧಿ ಗಮನಲ್ಲಿಟ್ಟುಕೊಂಡು ಯೋಜನೆ ರೂಪಿಸಿ ವೆಚ್ಚ ಮಾಡುವಂತೆ ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರು, ರಾಜ್ಯಸಭಾ ವಿರೋಧ ಪಕ್ಷದ ಮುಖಂಡರಾದ ಡಾ. ಮಲ್ಲಿಕಾರ್ಜುನ ಖರ್ಗೆಯವರು ಸಲಹೆ ನೀಡುತ್ತ ನೂತನ ಅಧ್ಯಕ್ಷ ಡಾ. ಅಜಯ್‌ಸಿಂಗ್‌ ಅವರಿಗೆ ಶುಭ ಕೋರಿದರು.

Latest Videos
Follow Us:
Download App:
  • android
  • ios