ಮಾರಕ ಕೊರೋನಾಗೆ ದೇಶದ ಮೊದಲ ರಾಜಕಾರಣಿ ಬಲಿ!
ಮಾರಕ ಕೊರೋನಾ ವೈರಸ್‌ಗೆ ಗುಜರಾತ್ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಅಹಮದಾಬಾದ್ ನಗರಪಾಲಿಕೆ ಹಿರಿಯ ಸದಸ್ಯ ಬದ್ರುದ್ದೀನ್ ಶೇಖ್ ಅವರು ಬಲಿಯಾಗಿದ್ದಾರೆ. ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ.
ಅಹಮದಾಬಾದ್(ಏ.27): ವಿಶ್ವದಾದ್ಯಂತ ಎರಡು ಲಕ್ಷಕ್ಕೂ ಅಧಿಕ ಮಂದಿಯನ್ನು ಪಡೆದಿರುವ ಕೊರೋನಾದಿಂದ ಇದೀಗ ಭಾರತದಲ್ಲಿ ಮೊದ ಲ ರಾಜಕಾರಣಿ ಬಲಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಜರಾತ್ನ ಬದ್ರುದ್ದೀನ್ ಶೇಖ್ ಮಾರಕ ವೈರಸ್ನಿಂದಾಗಿ ಮೃತಪಟ್ಟಿದ್ದಾರೆ.
"
ಮಾಸ್ಕ್ ಹೊಲಿದು ಬಡವರಿಗೆ ವಿತರಣೆ, ರಾಷ್ಟ್ರಪತಿ ಕೋವಿಂದ್ ಪತ್ನಿ ಕಾರ್ಯಕ್ಕೆ ಶ್ಲಾಘನೆ!
ಾಕ್‌ಡೌನ್‌ನಿಂದಾಗಿ ಜನ ಸಾಮಾನ್ಯರು, ಅದರಲ್ಲೂ ವಿಶೇಷವಾಗಿ ಬಡವರು ಹಾಗೂ ಕಾರ್ಮಿಕ ವರ್ಗ ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಕಂಗಾಲಾಗಿದ್ದಾರೆ. ಹೀಗಿರುವಾಗ ಇವರಿಗೆ ಆಹಾರ ವಿತರಿಸಲು ಹೋಗಿದ್ದ ಗುಜರಾತ್ ಕೈ ನಾಯಕ ಬದ್ರುದ್ದೀನ್ ಶೇಖ್‌ರಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿದ್ದವು. ಟೆಸ್ಟ್ ನಡೆಸಿದಾಗ ಕೊರೋನಾ ಸೋಂಕಿರುವುದು ದೃಢಪಟ್ಟಿದ್ದು, ಅವರನ್ನು ಗುಜರಾತ್ನ ಅಹಮದಾಬಾದ್ನಲ್ಲಿರುವ ಎಸ್ವಿಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೀಗ 8 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಪಡೆದ ಅವರು ಕೊನೆಯುಸಿರೆಳೆದಿದ್ದಾರೆ. ಇನ್ನು ಆಹಾರ ವಿತರಿಸುವಾಗಲೇ ಬದ್ರುದ್ದೀನ್‌ರವರಿಗೆ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ.
ಬದ್ರುದ್ದೀನ್ ಮೃತಪಟ್ಟಿರುವುದನ್ನು ಕಾಂಗ್ರೆಸ್ ನಾಯಕ ಶಕ್ತಿಸಿನ್ಹಾ ಗೋಹಿಲ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ಪ್ರೀತಿಯ ಸ್ನೇಹಿತ ಬದ್ರುದ್ದೀನ್ ನಿಜವಾದ ಕೊರೋನಾ ವಾರಿಯರ್ ಆಗಿದ್ದವರು. ಅಹಮದಾಬಾದ್ನಲ್ಲಿ ಬಡವರಿಗೆ ಆಹಾರ ವಿತರಿಸುವಾಗ ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ದಯವಿಟ್ಟು ಎಲ್ಲರೂ ಮನೆಯಲ್ಲೇ ಸುರಕ್ಷಿತವಾಗಿರಿ ಮತ್ತು ನಿಮ್ಮ ಪ್ರದೇಶದ ಅಧಿಕಾರಿಗಳಿಗೆ ಸಹಕರಿಸಿ ಎಂದಿದ್ದಾರೆ.