ವಯನಾಡು ಬಳಿಕ ಕೇರಳದ ಮತ್ತೊಂದು ಜಿಲ್ಲೆಯಲ್ಲೂ 9 ಬಾರಿ ಭೂಕುಸಿತ, ಓರ್ವ ನಾಪತ್ತೆ, 12 ಮನೆಗಳು ಸರ್ವನಾಶ!
ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿರುವ ಭೀಕರ ಭೂಕುಸಿತ ಮತ್ತು ಜಲಪ್ರವಾಹದ ಮಧ್ಯೆಯೇ ಕೇರಳದ ಮತ್ತೊಂದು ಜಿಲ್ಲೆಯಲ್ಲಿ ಕೂಡ ಭೂಕುಸಿತವಾಗಿದೆ. ಸತತ 9 ಬಾರಿ ಭೂಕುಸಿತವಾಗಿದೆ.
ಕೋಯಿಕ್ಕೋಡ್ (ಜು.31): ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿರುವ ಭೀಕರ ಭೂಕುಸಿತ ಮತ್ತು ಜಲಪ್ರವಾಹದ ಮಧ್ಯೆಯೇ ಕೇರಳದ ಮತ್ತೊಂದು ಜಿಲ್ಲೆಯಲ್ಲಿ ಕೂಡ ಭೂಕುಸಿತವಾಗಿದೆ. ಸತತ 9 ಬಾರಿ ಭೂಕುಸಿತವಾಗಿದೆ.
ಕೋಯಿಕ್ಕೋಡ್ ಜಿಲ್ಲೆಯ ವಿಲಂಗಾಡ್‌ನ ವನಿಮೆಲ್ ಪಂಚಾಯತ್‌ನಲ್ಲಿ ಭೂಕುಸಿತ ಸಂಭವಿಸಿದ್ದು, ಒರ್ವ ವ್ಯಕ್ತಿ ನಾಪತ್ತೆಯಾಗಿ, 12 ಮನೆಗಳು ಸಂಪೂರ್ಣವಾಗಿ ನಾಶವಾಗಿದೆ. ಎರಡು ಸೇತುವೆಗಳು ಮತ್ತು ಹಲವಾರು ವ್ಯಾಪಾರ ಸಂಸ್ಥೆಗಳು ಕೂಡ ನಾಶವಾಗಿದೆ.
wayanad landslide: ಯಾರಾದರೂ ಬಂದು ನಮ್ಮನ್ನು ಕಾಪಾಡಿ....! ಸಂಬಂಧಿಕರಿಗೆ ಕರೆ ಮಾಡಿ ಮಹಿಳೆಯ ಆರ್ತನಾದ
ಕಳೆದ ರಾತ್ರಿ ಕೋಝಿಕ್ಕೋಡ್‌ನ ಉತ್ತರ ಪ್ರದೇಶದ ವಾಣಿಮೆಲ್ ಪಂಚಾಯತ್‌ನ ವಿಲಂಗಾಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ ಆದಿಚಿಪ್ಪಾರ, ಮಂಜಚಲ್ಲಿ, ಕುತ್ತಲ್ಲೂರ್ ಮತ್ತು ಪನ್ನಿಯೇರಿಯಲ್ಲಿ ಭೂಕುಸಿತ ಸಂಭವಿಸಿದೆ. ಸತತ ಒಂಬತ್ತು ಬಾರಿ ಭೂಕುಸಿತ ಸಂಭವಿಸಿದೆ.
ಭಾರೀ ಮಳೆಯಿಂದಾಗಿ ಮಾಹೆ ನದಿಯ ಉಗಮಸ್ಥಾನವಾದ ಪುಲ್ಲುವ ನದಿಯಲ್ಲಿ ಪ್ರವಾಹಕ್ಕೆ ದೊಡ್ಡ ಬಂಡೆಗಳು ಮತ್ತು ಮರಗಳು ಕೊಚ್ಚಿಹೋಗಿದೆ. ಇದರ ಪರಿಣಾಮ ನದಿ ದಂಡೆಯಲ್ಲಿದ್ದ 12 ಮನೆಗಳು ಸಂಪೂರ್ಣ ಜಖಂಗೊಂಡಿದ್ದು, ಹಲವು ವಾಹನಗಳು ಜಖಂಗೊಂಡಿವೆ.
wayanad landslide ಮನ ಕಲುಕಿದ ಶವಗಳ ನಡುವೆ ತಮ್ಮವರಿಗಾಗಿ ಹುಡುಕಾಟ, ಸಿಕ್ಕಿದವರ ಕಣ್ಣಲ್ಲಿ ನೀರು
ಭೂಕುಸಿತದ ಸದ್ದು ಕೇಳಿ ಇತರರ ನೆರವಿಗೆ ಧಾವಿಸಿದ ಸ್ಥಳೀಯ ಕುಳತ್ತಿಕಲ್ ನಿವಾಸಿ ಮ್ಯಾಥ್ಯೂ ಈಗ ನಾಪತ್ತೆಯಾಗಿದ್ದಾರೆ. ಭೂಕುಸಿತದಿಂದ ನದಿಯ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ವ್ಯಾಪಕ ಹಾನಿ ಸಂಭವಿಸಿದೆ, ವಿಲಂಗಾಡ್ ಪಟ್ಟಣದ ಅಂಗಡಿಗಳಿಗೆ ನೀರು ನುಗ್ಗಿದೆ. ಹಲವಾರು ಅಂಗಡಿಗಳು ಮತ್ತು ಎರಡು ಸೇತುವೆಗಳು ನಾಶವಾಗಿದೆ, ಅನೇಕ ಕುಟುಂಬಗಳು ಸಂಪರ್ಕ ಕಳೆದುಕೊಂಡು ಪ್ರತ್ಯೇಕವಾಗಿದ್ದು, ಸಂಕಷ್ಟದಲ್ಲಿದೆ. ಈ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯು ಸ್ಥಗಿತಗೊಂಡಿದೆ. ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ತಂಡಗಳು ಘಟನಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿವೆ.
ಇದು ಈಗ ಭೀಕರವಾಗಿ ಭೂಕುಸಿತ ಮತ್ತು ಜಲಪ್ರಳಯಕ್ಕೆ ಒಳಗಾಗಿರುವ ವಯನಾಡಿನಿಂದ 100 ಕಿ ಮೀಟರ್ ದೂರದಲ್ಲಿ ಸಂಭವಿಸಿದೆ. 15 ಕುಟುಂಬಂಗಳು ಇಲ್ಲಿ ಸಂಕಷ್ಟದಲ್ಲಿದೆ ಎಂದು ತಿಳಿದುಬಂದಿದೆ.