ಪಾಟ್ನಾ[ಜ.12]: ಜೆಡಿಯು ನಾಯಕ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪೌರತ್ವ ಕಾಯ್ದೆ ಹಾಗೂ NRC ಬಹಿಷ್ಕರಿಸುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇದಕ್ಕಾಗಿ ಅವರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಗೆ ಧನ್ಯವಾದ ತಿಳಿಸಿದ್ದಾರೆ ಹಾಗೂ ಬಿಹಾರದಲ್ಲಿ NPR ಜಾರಿಯಾಗಲು ಅವಕಾಶ ನೀಡುವುದಿಲ್ಲ ಎಂಬ ಆಶ್ವಾಸನೆ ನೀಡಿದ್ದಾರೆ. 

ಈ ಸಂಬಂಧ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ. ಆದರೆ ಅವರ ಈ ಮಾತು ನೀಡಿದಷ್ಟು ಸಾಮಾನ್ಯವಲ್ಲ. ಯಾಕೆಂದರೆ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಸುಶೀಲ್ ಮೋದಿ ಈಗಾಗಲೇ ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ನಿತೀಶ್ ಕುಮಾರ್ ರಾಜ್ಯದಲ್ಲಿ NRC ಎಂಬ ಘೋಷಣೆ ಮಾಡಿದ್ದಾರೆ, ಅವರು ಏನೇ ಆದರೂ NPR, NRC ಜಾರಿಯಾಗಲು ಬಿಡುವುದಿಲ್ಲ  ಎಂದು ಪ್ರಶಾಂತ್ ಕಿಶೋರ್ ವಾದಿಸುತ್ತಿದ್ದಾರೆ. 

NRC, CAA ತಡೆಯಲು 2 ದಾರಿ ತೋರಿಸಿದ ಚುನಾವಣಾ ಚಾಣಕ್ಯ

ಹೀಗಿರುವಾಗ ಪ್ರಶಾಂತ್ ಕಿಶೋರ್ ಮಾಡಿರುವ ಈ ಟ್ವೀಟ್ ಸಿಎಂ ನಿತೀಶ್ ಕುಮಾರ್ ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂಬುವುದು JDU ನಾಯಕರ ಅಭಿಪ್ರಾಯವಾಗಿದೆ. ಯಾಕೆಂದರೆ ನಿತೀಶ್ ಕುಮಾರ್ NPR ಜಾರಿಗೊಳಿಸದಿದ್ದರೆ ಬಿಜೆಪಿ ನಾಯಕರ ಆಕ್ರೋಶಕ್ಕೀಡಾಗುತ್ತಾರೆ. ಒಂದು ವೇಳೆ ಜಾರಿಗೊಳಿಸಿದರೆ ಕುರ್ಚಿಗಾಘಿ ಒಂದು ಹೆಜ್ಜೆ ಮುಂದಿಟ್ಟು, ಎರಡು ಹೆಜ್ಜೆ ಹಿಂದಿಡುವ ಅವರ ನಡವಳಿಕೆ ಮುಂದುವರೆಸಿದಂತಾಗುತ್ತದೆ. ಅಂತಿಮ ಕ್ಷಣದಲ್ಲಿ ಯೂ ಟರ್ನ್ ಹೊಡೆಯುವ ಆರೋಪ ಅವರ ಮೇಲೆ ಈ ಮೊದಲಿನಿಂದಲೂ ಇದೆ.

ಸದ್ಯ ಬಿಹಾರ ಸಿಎಂ ನಿತೀಶ್ ಕುಮಾರ್ ನಿರ್ಧಾರವೇನು ಎಂಬುವುದೇ ಭಾರೀ ಕುತೂಹಲ ಕೆರಳಿಸಿದೆ. ಯಾಕೆಂದರೆ ಪಕ್ಷದ ಇಬ್ಬರು ಹಿರಿಯ ನಾಯಕರಾದ ಲಲನ್ ಸಿಂಗ್ ಹಾಗೂ ಆರ್ ಪಿಸಿ ಸಿಂಗ್ ಹಲವಾರು ಬಾರಿ ಪೌರತ್ವ ಕಾಯ್ದೆ, NPR ಹಾಗೂ NRC ಸಂಬಂಧ ಭ್ರಮೆ ಹುಟ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಹೇಳಿಕೆ ನೀಡಿದ್ದಾರೆ. ಅದೇನಿದ್ದರೂ ಸದ್ಯ ಎಲ್ಲರ ಗಮನ ರಾಜ್ ಗಿರ್ ನಲ್ಲಿ ನಡೆಯುವ JDU ಪಕ್ಷದ ಸಭೆ ಮೇಲಿದೆ. ಆದರೆ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪೌರತ್ವ ಕಾಯ್ದೆ, NPR ಹಾಗೂ NRC ವಿಚಾರಗಳು ಮತ್ತಷ್ಟು ಕಾವು ಪಡೆದುಕೊಳ್ಳುತ್ತಿವೆ.

ಬಿಜೆಪಿಗೆ ಮತ್ತೊಂದು ಮುಖಭಂಗ; NRCಗೆ ಪಕ್ಷದ ಸಿಎಂರಿಂದಲೇ ಅಪಸ್ವರ!

ಇನ್ನು ಇತ್ತ ಪ್ರಶಾಂತ್ ಕಿಶೋರ್ ಮಾತುಗಳು ಖುದ್ದು JDU ನಾಯಕರಿಗೆ ಇಷ್ಟವಾಗುತ್ತಿಲ್ಲ ಎಂದರೆ, ಮತ್ತೊಂದೆಡೆ ಮೈತ್ರಿ ಪಕ್ಷ ಬಿಜೆಪಿಯಲ್ಲೂ ಚಡಪಡಿಕೆ ಆರಂಭವಾಗಿದೆ. ಹೀಗಿರುವಾಗ ಸಿಎಂ ನಿತೀಶ್ ಕುಮಾರ್ ಮಾತ್ರ ಈ ಕುರಿತು ಮೌನ ತಾಳಿದ್ದು, ನಸು ನಗುತ್ತಾ 'ಎಲ್ಲಾ ಸರಿಯಾಗಿದೆ' ಎನ್ನುತ್ತಿದ್ದಾರೆ. 

ಜನವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ