Asianet Suvarna News Asianet Suvarna News

ಉತ್ತಮ ಸುಧಾರಣೆ: 3 ತಿಂಗಳ ಬಳಿಕ ಸಾವಿರಕ್ಕಿಂತಲೂ ಕೆಳಕ್ಕಿಳಿದ ಕೊರೋನಾ ಕೇಸ್​

ಮೊದಲ ಬಾರಿಗೆ ಒಂದು ಸಾವಿರದೊಳಕ್ಕೆ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಸೋಂಕು ತಡೆಗಟ್ಟುವಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಸಕ್ಸಸ್ ಆಗಿದೆ.

After 2 months, Delhi reports less than 1000 new Covid-19 cases on July 20
Author
Bengaluru, First Published Jul 20, 2020, 9:00 PM IST

ನವದೆಹಲಿ, (ಜುಲೈ.20): ಕೊರೋನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ರಾಷ್ಟ್ರ ರಾಜಧಾನಿ ಒಂದು ರೀತಿಯಲ್ಲಿ ಯಶಸ್ಸು ಕಂಡಿದೆ ಅಂತ ಹೇಳಬಬಹುದು.

ಯಾಕಂದ್ರೆ,  ಮೊದಲ ಬಾರಿಗೆ ಒಂದು ಸಾವಿರದೊಳಕ್ಕೆ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಮೂರು ತಿಂಗಳಿಂದ ದೆಹಲಿಯಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. 

3 ರಿಂದ 4 ಸಾವಿರ ತಲುಪುವುದು ಸಾಮಾನ್ಯ ಸಂಗತಿಯಾಗಿತ್ತು. ಈ ಕಾರಣಕ್ಕಾಗಿ ಮುಂಬೈಯನ್ನು ಮೀರಿಸುತ್ತಾ ಎಂಬ ಆತಂಕವೂ ಎದುರಾಗಿತ್ತು. ಆದ್ರೆ, ಇದೀಗ ಸಂತಸದ ಸಂಗತಿ ಅಂದ್ರೆ ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಹೊಸದಾಗಿ ವರದಿಯಾಗಿರುವ ಪ್ರಕರಣಗಳ ಸಂಖ್ಯೆ 954ಕ್ಕೆ ಇಳಿದಿದೆ. 

ಕೊರೋನಾ ಲಸಿಕೆ ರೇಸ್‌ನಲ್ಲಿ ಭಾರತದ 7 ಕಂಪನಿಗಳು!

ಮೇ 27ರ ಬಳಿಕ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿರುವುದು ಇದೇ ಮೊದಲಾಗಿದೆ. 35 ಜನರು ಮೃತಪಟ್ಟಿದ್ದಾರೆ.

ಸದ್ಯ ದೆಹಲಿಯಲ್ಲಿ 1,23,747 ಸೋಂಕಿತರಿದ್ದು,  ಈ ಪೈಕಿ 1,04,918 ಒಟ್ಟು ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಸದ್ಯ 15,166 ಆಕ್ಟೀವ್ ಕೇಸ್‌ಗಳಿವೆ. ಇನ್ನು ಒಟ್ಟು 1,784 ಜನರು ಕೋವಿಡ್​ನಿಂದ ಸಾವಿಗೀಡಾಗಿದ್ದು, 12 ಸಾವಿರ ಬೆಡ್ ಖಾಲಿ ಇವೆ. 696 ಕಂಟೈನ್ಮೆಂಟ್ ಜೋನ್‌ಗಳಿವೆ.

ಹತ್ತು ಸಾವಿರ ಬೆಡ್​ಗಳ ಬೃಹತ್​ ಆಸ್ಪತ್ರೆ ಸ್ಥಾಪಿಸಿ ಸೋಂಕಿತರನ್ನು ಚಿಕಿತ್ಸೆ ಹಾಗೂ ಐಸೋಲೇಷನ್​ಗೆ ಒಳಪಡಿಸುತ್ತಿರುವ ಕಾರಣ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ತಗುಲುವುದರಲ್ಲಿ ಕಡಿಮೆಯಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದ್ದು, ಸಂತಸದ ಸಂಗತಿಯಾಗಿದೆ.

Follow Us:
Download App:
  • android
  • ios