Asianet Suvarna News Asianet Suvarna News

ಅಪ್ಘಾನಿಸ್ತಾನದ ಪರಿಸ್ಥಿತಿ ಹೊಸ ಸವಾಲು ಹುಟ್ಟು ಹಾಕಿದೆ: ರಾಜನಾಥ್ ಸಿಂಗ್

* ಭಾರತವನ್ನು ರಕ್ಷಿಸಲು, ಬಲಿಷ್ಠವಾಗಿಸಲು ಸರ್ಕಾರದಿಂದ ಸೂಕ್ತ ಕ್ರಮ

* ಭಾರತವನ್ನು ಸಮೃದ್ಧ, ಬಲಿಷ್ಠ ಮತ್ತು ಸುಭದ್ರ ದೇಶವನ್ನಾಗಿಸುವುದು ಮಾಡುವುದು ನಮ್ಮ ಉದ್ದೇಶ

* ಅಪ್ಘಾನಿಸ್ತಾನ ಹೊಸ ಸವಾಲು ಹುಟ್ಟುಹಾಕುವುದರಲ್ಲಿ ಅನುಮಾನವಿಲ್ಲ

Afghan situation raises new security questions Rajnath Singh pod
Author
Bangalore, First Published Aug 30, 2021, 2:22 PM IST

ನವದೆಹಲಿ(ಆ.30): ಭಾರತವು ತನ್ನ ಸಾರ್ವಭೌಮತ್ವವ ಭದ್ರಪಡಿಸುವ ನಿಟ್ಟಿನಲ್ಲಿ ಅದೆಷ್ಟೇ ಕಠಿಣ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಭಾರತವನ್ನು ರಕ್ಷಿಸಲು, ಬಲಿಷ್ಠವಾಗಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 

ರಾಷ್ಟ್ರೀಯ ಭದ್ರತೆ ಕುರಿತು ದಿವಂಗತ ಬಲರಾಮ್‌ಜಿ ದಾಸ್ ಟಂಡನ್ ಸೆಮಿನಾರ್‌ನಲ್ಲಿ ಮಾತನಾಡಿದ ರಾಜನಾಥ್ ಸಿಂಗ್, "ಭಾರತವನ್ನು ಸಮೃದ್ಧ, ಬಲಿಷ್ಠ ಮತ್ತು ಸುಭದ್ರ ದೇಶವನ್ನಾಗಿಸುವುದು ಮಾಡುವುದು ನಮ್ಮ ಉದ್ದೇಶವಾಗಿದೆ. ಭಾರತ ಬೇರೆ ದೇಶಗಳಿಗೆ ಬೆದರಿಕೆಯೊಡ್ಡುವುದಿಲ್ಲ ಆದರೆ ಅವರಲ್ಲಿ ನಂಬಿಕೆ ಮತ್ತು ನಂಬಿಕೆಯ ಭಾವನೆ ಮೂಡಿಸುತ್ತದೆ. ಬಲಿಷ್ಠವಾದ ಭಾರತ ಅವರಿಗೆ ಅಪಾಯವಲ್ಲ ಆದರೆ ಸುರಕ್ಷತೆ ಮತ್ತು ಭದ್ರತೆಯ ಭಾವನೆ ಇರಬೇಕಾಗುತ್ತದೆ ಎಂದಿದ್ದಾರೆ.

ಇದೇ ವೇಳೆ ಅಫ್ಘಾನಿಸ್ತಾನದ ಪರಿಸ್ಥಿತಿ ಬಗ್ಗೆಯೂ ಮಾತನಾಡಿದ ರಾಜನಾಥ್ ಸಿಂಗ್ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಪರಿಸ್ಥಿತಿ ಚಿಂತಾಜನಕವಾಗಿದೆ. "ನೆರೆಯ ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆಯೋ ಅದು ಭದ್ರತಾ ದೃಷ್ಟಿಯಿಂದ ಹೊಸ ಸವಾಲು ಹುಟ್ಟುಹಾಕುತ್ತದೆ. ನಮ್ಮ ಸರ್ಕಾರ ದೇಶದ ಅಭಿವೃದ್ಧಿಯೆಡೆ ಗಮನ ಹರಿಸಿದೆ. ನಮ್ಮ ಸರ್ಕಾರ ಭಾರತೀಯರ ಭದ್ರತೆಯನ್ನು ಬಯಸುತ್ತದೆ ಮತ್ತು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಪರಿಸ್ಥಿತಿಯಿಂದ ಗಡಿಯಾಚೆಗೆ ಭಯೋತ್ಪಾದಕ ಚಟುವಟಿಕೆ ನಡೆಯದಂತೆ ಎಚ್ಚರವಹಿಸಲಿದೆ ಎಂದಿದ್ದಾರೆ.

ರಾಷ್ಟ್ರೀಯ ಭದ್ರತೆಗೆ ಸವಾಲೊಡ್ಡುವ ವಿಚಾರಗಳ ಬಗ್ಗೆ ನಮ್ಮ ಸರ್ಕಾರವು ಎಚ್ಚರವಾಗಿರುತ್ತದೆ ಮತ್ತು ಎಲ್ಲಾ ಸನ್ನಿವೇಶಗಳನ್ನು ಎದುರಿಸಲು ಸಿದ್ಧವಾಗಿದೆ. ಯಾವುದೇ ಬೆದರಿಕೆಗಳನ್ನು ಎದುರಿಸಲು ನಾವು ಯಾವಾಗಲೂ ಸಿದ್ಧರಿದ್ದೇವೆ ಎಂದಿದ್ದಾರೆ. 

Follow Us:
Download App:
  • android
  • ios