ಬಾಲ್ಯದ ದಿನದ ತಮ್ಮ ಸ್ನೇಹಿತನನ್ನು ನೆನಪಿಸಿಕೊಂಡಿದ್ದ ಪಿಎಂ ಮೋದಿ, ತಂದೆಯ ಅಕಾಲಿಕ ಮರಣದ ನಂತರ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ವಡ್‌ನಗರದಲ್ಲಿರುವ ಅವರ ಮನೆಯಲ್ಲಿಯೇ ಓದಿದ್ದ ಸ್ನೇಹಿತ ಅಬ್ಬಾಸ್ ರಾಮ್ಸದಾ ಬಗ್ಗೆ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದರು.

ಅಹಮದಾಬಾದ್ (ಜೂನ್ 20): ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜೂನ್ 18 ರಂದು ತಮ್ಮ ತಾಯಿಯ 100 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬರೆದ ಬ್ಲಾಗ್‌ನಲ್ಲಿ (Blog) ತಮ್ಮ ಬಾಲ್ಯದ ಗೆಳೆಯ ಅಬ್ಬಾಸ್ (Abbas) ಅವರನ್ನು ನೆನಪಿಸಿಕೊಂಡಿದ್ದರು. ಅಂದಿನಿಂದ ನೆಟಿಜನ್‌ಗಳು ಮೋದಿ ಅವರ ಈ ಬಾಲ್ಯದ ಗೆಳೆಯನ ಕುರಿತಾಗಿ ಮಾಹಿತಿ ನಿರೀಕ್ಷೆ ಮಾಡಿದ್ದರು. 

ತನ್ನ ಸ್ನೇಹಿತನನ್ನು ನೆನಪಿಸಿಕೊಂಡ ಪಿಎಂ ಮೋದಿ, ತಂದೆ ದಾಮೋದರ್ ದಾಸ್ (Damodar Das) ಅವರ ಆತ್ಮೀಯ ಸ್ನೇಹಿತರಾಗಿದ್ದ ಮೈನಾಬಾಯ್ ರಾಮ್ಸದಾ (Miyanbhai Ramsada) ಪಕ್ಕದ ಗ್ರಾಮದಲ್ಲಿಯೇ ವಾಸವಿದ್ದರು. ಆದರೆ, ಅವರ ಸ್ನೇಹಿತನ ಅಕಾಲಿಕ ನಿಧನದ ಬಳಿಕ ಅವರ ಮಗನಾದ ಅಬ್ಬಾಸ್‌ರನ್ನು (ರಾಮ್ಸದಾ) ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ಆತ ನಮ್ಮೊಂದಿಗೆ ಉಳಿದುಕೊಂಡಿದ್ದ. ನಮ್ಮೊಂದಿಗೆ ಇದ್ದು ವಿದ್ಯಾಭ್ಯಾಸ ಪೂರ್ತಿ ಮಾಡಿದ್ದ. ನಮ್ಮ ಸಹೋದರರನ್ನು ನೋಡು ರೀತಿಯಲ್ಲಿಯೇ ಆತನನ್ನು ನೋಡುತ್ತಿದ್ದರು. ಪ್ರತಿ ವರ್ಷದ ಈದ್‌ ದಿನದಂದು ಆತನಿಗಾಗಿ ಆತನ ಫೇವರಿಟ್ ಆಹಾರ ತಯಾರಾಗುತ್ತಿತ್ತು' ಎಂದು ಮೋದಿ ಬರೆದುಕೊಂಡಿದ್ದರು.

ಅಬ್ಬಾಸ್ ಕುರಿತಾಗಿ ವಿವರಗಳಿಗೆ ಕುತೂಹಲ ಆರಂಭವಾದ ಬೆನ್ನಲ್ಲಿಯೇ, ಪ್ರಧಾನಿಯವರ ಸಹೋದರ ಅಬ್ಬಾಸ್ ಭಾಯ್ ಅವರ ಚಿತ್ರವನ್ನು ಗುರುತಿಸಿದ್ದು, ಹಾಗೂ ಈ ಚಿತ್ರದಲ್ಲಿರುವುದು ಅವರೇ ಎಂದು ಖಚಿತಪಡಿಸಿದರು. ಅಬ್ಬಾಸ್ ಅವರು ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ತಮ್ಮ ಪುತ್ರನೊಂದಿಗೆ ವಾಸಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿ ಜೂನ್ 18 ರಂದು ತಮ್ಮ ತಾಯಿಯ ಹೀರಾಬೆನ್ ಮೋದಿ (Heeraben Modi) 100 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭಾಶಯ ಕೋರಲು ಗಾಂಧಿನಗರದಲ್ಲಿರುವ ತಮ್ಮ ಮನೆಗೆ ತಲುಪಿದರು. ಅವರು ಬರೆದ ಬ್ಲಾಗ್ ಪೋಸ್ಟ್‌ನಲ್ಲಿ ಪ್ರಧಾನಿ ತಮ್ಮ ತಾಯಿಯ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.

ಮೋದಿ ಆತ್ಮೀಯ ಸ್ನೇಹಿತ ಅಬ್ಬಾಸ್ ಅವರ ಕುರಿತಾಗಿ ಮಾಹಿತಿಗಳು: ಅಬ್ಬಾಸ್ ಅವರು ಗುಜರಾತ್ ಸರ್ಕಾರದ ಕ್ಲಾಸ್ 2 ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಕೆಲವು ತಿಂಗಳ ಹಿಂದೆ ಸೇವೆಯಿಂದ ನಿವೃತ್ತರಾಗಿದ್ದಾರೆ. ಆಹಾರ ಮತ್ತು ಸರಬರಾಜು ಇಲಾಖೆಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಅಬ್ಬಾಸ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಖೇರಾಲು ತಹಶೀಲ್‌ನಲ್ಲಿ ವಾಸಿಸುತ್ತಿದ್ದರೆ, ಕಿರಿಯ ಮಗ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ. ಅಬ್ಬಾಸ್ಭಾಯ್ ಪ್ರಸ್ತುತ ಸಿಡ್ನಿಯಲ್ಲಿ ತನ್ನ ಕಿರಿಯ ಮಗನೊಂದಿಗೆ ವಾಸಿಸುತ್ತಿದ್ದಾರೆ. 

ತಮ್ಮ ಬ್ಲಾಗ್‌ನಲ್ಲಿ, ಪ್ರಧಾನಿ ಮೋದಿ ಅವರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ ಮತ್ತು ವಡ್ನಗರದಲ್ಲಿ ತಾವು ಬೆಳೆದ ಒಂದೂವರೆ ಕೋಣೆಯ ಮನೆ ಚಿಕ್ಕದಾಗಿತ್ತು ಮತ್ತು ಮಣ್ಣಿನ ಗೋಡೆಗಳು ಮತ್ತು ಹೆಂಚುಗಳಿಂದ ಮಾಡಲ್ಪಟ್ಟಿತ್ತು ಎಂದು ಬರೆದಿದ್ದರು. ಅಬ್ಬಾಸ್ ಅವರು ನಮ್ಮ ಮನೆಯಲ್ಲಿದ್ದಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದರು. ಪಂಕಜ್ ಮೋದಿ ಹಾಗೂ ಅಬ್ಬಾಸ್ ಇಬ್ಬರೂ ಒಂದೇ ತರಗತಿಯಲ್ಲಿ ಓದುತ್ತಿದ್ದರು. ಇಬ್ಬರೂ ಕೂಡ ಸರ್ಕಾರಿ ಕೆಲಸವನ್ನು ಸಂಪಾದನೆ ಮಾಡಿದ್ದರು. ಪಂಕಜ್ ಮೋದಿ, ಮಾಹಿತಿ ಹಾಗೂ ಸಂವಹನ ಇಲಾಖೆಯಲ್ಲಿ ಕೆಲಸ ಪಡೆದುಕೊಂಡರೆ, ಅಬ್ಬಾಸ್ ಅವರು ಆಹಾರ ಹಾಗೂ ಸರಬರಾಜು ಇಲಾಖೆಯಲ್ಲಿ ಕೆಲಸ ಸಂಪಾದಿಸಿದ್ದರು.

Photos ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಗ್ರ್ಯಾಂಡ್ ಎಂಟ್ರಿ

ಕೆಸಿಂಪಾ ಗ್ರಾಮದ ಅಬ್ಬಾಸ್: ಕಿರಾಣಿ ವ್ಯಾಪಾರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ತಂದೆ ದಾಮೋದರದಾಸ್ ಅವರು ತಮ್ಮ ಮೃತ ಸ್ನೇಹಿತ, ನೆರೆಯ ಕೆಸಿಂಪಾ ಗ್ರಾಮದ ಮಿಯಾನ್‌ಭಾಯ್ ರಾಮ್ಸಾದ ಅವರ ಕುಟುಂಬದ ಮನವೊಲಿಸಲು ಯಶಸ್ವಿಯಾಗಿ ರಾಮ್ಸದಾ ಅವರನ್ನು ಮನೆಗೆ ಕರೆ ತಂದಿದ್ದರು. ಅವರ ಹಳ್ಳಿಯ ಶಾಲೆಯಲ್ಲಿ ಐದನೇ ತರಗತಿಗಿಂತ ಹೆಚ್ಚಿನ ತರಗತಿಗಳಲ್ಲಿ ಓದಲು ಸಾಧ್ಯವಿರಲಿಲ್ಲ. ಆ ಕಾರಣ ಅಬ್ಬಾಸ್ ಅವರನ್ನು ಹೆಚ್ಚಿನ ಅಧ್ಯಯನಕ್ಕಾಗಿ ವಡ್‌ನಗರದಲ್ಲಿ ತಮ್ಮ ಕುಟುಂಬದೊಂದಿಗೆ ಇರಲು ಕಳುಹಿಸುವಂತೆ ಮನವಿ ಮಾಡಿದ್ದರು. . 1973-74ರಲ್ಲಿ ಅಬ್ಬಾಸ್ ತನ್ನ ಎಸ್‌ಎಸ್‌ಸಿ ಪರೀಕ್ಷೆಗೆ ಹಾಜರಾಗುವ ಹೊತ್ತಿಗೆ, ಮೋದಿ ಪೂರ್ಣ ಪ್ರಮಾಣದ ಆರ್‌ಎಸ್‌ಎಸ್ ಪ್ರಚಾರಕರಾಗಲು ವಡ್ನಗರದಿಂದ ಅಹಮದಾಬಾದ್‌ಗೆ ತೆರಳಿದ್ದರು. ಅಬ್ಬಾಸ್ ಅವರು ತಮ್ಮ ಜೀವನ ಮತ್ತು ವೃತ್ತಿಜೀವನದಲ್ಲಿ ಅವರ ಕುಟುಂಬವು ನಿರ್ವಹಿಸಿದ ನಿರ್ಣಾಯಕ ಪಾತ್ರವನ್ನು ಪ್ರಧಾನಿ ಮೋದಿ ಅವರ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಸಂಚರಿಸುವ ಮಾರ್ಗದುದ್ದಕ್ಕೂ ಬಿಗಿ ಭದ್ರತೆ, ಖಾಕಿ ಅಲರ್ಟ್

ಪ್ರಧಾನಿಯವರ ಮತ್ತೊಬ್ಬ ಸಹೋದರ ಪ್ರಹ್ಲಾದ್ ಮೋದಿ, ಅಬ್ಬಾಸ್ ರಾಮ್ಸಾದಾ ಅವರ ಮನೆಯಲ್ಲಿ ತಂಗಿದ್ದನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ. "ಅಬ್ಬಾಸ್ ಕೆಲವು ವರ್ಷಗಳ ಕಾಲ ನಮ್ಮೊಂದಿಗೆ ಇದ್ದು ಮೆಟ್ರಿಕ್ಯುಲೇಷನ್ ನಂತರ ಮನೆಯನ್ನು ತೊರೆದರು. ಅವರು ನನ್ನ ಸಹೋದರ ಪಂಕಜ್ ಅವರ ಸಹಪಾಠಿ" ಎಂದು ಅವರು ಹೇಳಿದರು. ದಶಕಗಳ ನಂತರ, ಮೋದಿ ಗುಜರಾತ್ ಸಿಎಂ ಆಗಿದ್ದಾಗ, ಅಬ್ಬಾಸ್, ಮೋದಿಯವರನ್ನು ಭೇಟಿಯಾಗಿ ಹಳೆಯ ದಿನಗಳನ್ನು ಮೆಲುಗು ಹಾಕಿಕೊಂಡಿದ್ದರು.