ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಜೊತೆ ಹಸೆಮಣೆ ಏರುವ ತಯಾರಿಯಲ್ಲಿರುವ ಆಪ್‌ ರಾಜ್ಯಸಭಾ ಸಂಸದ ರಾಘವ್‌ ಚಡ್ಡಾಗೆ ಮಂಗಳವಾರ ಸಂಸತ್‌ ಭವನದ ಹೊರಗಡೆ ಕಾಗೆ ದಾಳಿ ಮಾಡಿದೆ. ಇದರ ನಡುವೆ ಸೋಶಿಯ್‌ ಮೀಡಿಯಾದಲ್ಲಿ ಮದುವೆಗೂ ಮುನ್ನವೇ ರಾಘವ್‌ ಚಡ್ಡಾಗೆ ಅಪಶಕುನ ಆರಂಭವಾಗಿದೆ ಎಂದು ಕಾಮೆಂಟ್‌ ಮಾಡಿದ್ದಾರೆ. 

ನವದೆಹಲಿ (ಜು.26): ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್‌ ಚಡ್ಡಾ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೇ ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಾಘವ್‌ ಚಡ್ಡಾಗೆ ಮಂಗಳವಾರ ಸಂಸತ್‌ ಭವನದ ಹೊರಗಡೆ ಅಹಿತಕರ ಎನಿಸುವಂತೆ ಘಟನೆ ನಡೆದಿದೆ. ಮಂಗಳವಾರ ಸಂಸತ್‌ ಭವನದ ಹೊರಗಡೆ ಫೋನ್‌ನಲ್ಲಿ ಮಾತನಾಡುವ ವೇಳೆ, ಕಾಗೆಯೊಂದು ಅವರ ಮೇಲೆ ದಾಳಿ ಮಾಡಿದೆ. ರಾಘವ್‌ ಚಡ್ಡಾ ಅವರ ತಲೆಗೆ ಕಾಗೆಯೊಂದು ಕುಕ್ಕಿ ಹೋಗುವ ದೃಶ್ಯವನ್ನು ಪಿಟಿಐ ಫೋಟೋಗ್ರಾಫರ್‌ ಸೆರೆಹಿಡಿದ್ದಾರೆ. ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಹೆಚ್ಚಿನವರು ರಾಘವ್‌ ಚಡ್ಡಾಗೆ ದುರಾದೃಷ್ಟ ಆರಂಭವಾಗಿದೆ ಎನ್ನುವ ಅರ್ಥದಲ್ಲಿ ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ರಾಘವ್‌ ಚಡ್ಡಾ ಶೀಘ್ರವಾಗಿ ತಮಗೆ ಯಾವುದಾದರೂ ಶನಿ ದೋಷವಿದೆಯೇ ಅನ್ನೋದರ ಬಗ್ಗೆ ಜ್ಯೋತಿಷ್ಯರನ್ನು ಕೇಳುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ಇನ್ನು ಬಿಜೆಪಿ ದೆಹಲಿ ಈ ಚಿತ್ರವನ್ನು ಟ್ವೀಟ್‌ ಮಾಡಿದ್ದು, ಸುಳ್ಳುಗಾರನಿಗೆ ಕಾಗೆ ಕಚ್ಚುತ್ತದೆ ಎನ್ನುತ್ತದೆ ಎನ್ನುವ ಮಾತನ್ನು ಕೇಳಿದ್ದೆವು. ಈಗ ಅದನ್ನು ನಿಜವಾಗಿಯೂ ನೋಡಿದ್ದೇವೆ' ಎಂದು ಟ್ವೀಟ್‌ ಮಾಡಿದೆ. ಈ ಪೋಸ್ಟ್‌ಗೆ ಟ್ವಿಟರ್‌ನಲ್ಲಿ 4 ಸಾವಿರ ಲೈಕ್ಸ್ ಬಂದಿದ್ದು 1400ಕ್ಕೂ ಅಧಿಕ ರೀಟ್ವೀಟ್‌ಗಳು ಬಂದಿವೆ. ಹೆಚ್ಚಿನವರು ಕಾಗೆ ಕುಕ್ಕಿದ್ದರಿಂದ ರಾಘವ್‌ ಚಡ್ಡಾ ಅವರ ಆರೋಗ್ಯದ ಬಗ್ಗೆ ಗಮನ ನೀಡಿದ್ದರೆ, ಇನ್ನೂ ಕೆಲವರು ಮದುವೆ ಆಗುವ ದಿನಗಳಲ್ಲಿ ಇದು ಅಪಶಕುನ ಎನ್ನುವ ಅರ್ಥದಲ್ಲಿ ಕಾಮೆಂಟ್‌ ಮಾಡಿದ್ದಾರೆ. ಸಂಸತ್ತಿನ ಒಳಗೆ ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕೆಂದು ಒತ್ತಾಯಿಸಿದ ನಂತರ ಪ್ರತಿಪಕ್ಷಗಳು ಬುಧವಾರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಬೆನ್ನಲ್ಲೇ ಬಿಜೆಪಿಯ ದಾಳಿ ನಡೆದಿದೆ.

ಕಾಗೆ ಕುಕ್ಕಿದ್ದರಿಂ ರಾಘವ್‌ ಚಡ್ಡಾಗೆ ಯಾವುದೇ ಸಮಸ್ಯೆ ಆಗಿಲ್ಲ. ರಾಜ್ಯಸಭೆಯ ಕಲಾಪದಲ್ಲಿ ಭಾಗವಹಿಸಿ ಹೊರಗಡೆ ಬರುವಾಗ ಈ ಘಟನೆ ನಡೆದಿದೆ. ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಏಕಾಏಕಿ ಬಂದ ಕಾಗೆಯೊಂದು ಅವರಿಗೆ ಕುಕ್ಕಿದೆ. ಈ ವೇಳೆ ಕಾಗೆಯಿಂದ ತಪ್ಪಿಸಿಕೊಳ್ಳಲು ರಾಘವ್‌ ಚಡ್ಡ ಬಗ್ಗಿದರೂ ಸಹಾಯವಾಗಲಿಲ್ಲ. ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ ನಡೆದ ಈ ಘಟನೆಯಲ್ಲಿ ಪಿಟಿಐ ಫೋಟೋಗ್ರಾಫರ್‌ ಸೆರೆಹಿಡಿದ್ದಾರೆ.

ಚಾರ್ಟರ್ಡ್ ಅಕೌಂಟೆಂಟ್ ರಾಘವ್‌ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ನೆಟ್‌ ವರ್ತ್‌ ಎಷ್ಟು?

ರಾಘವೇಂದ್ರ ರಾವ್‌ ಎನ್ನುವ ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದು, ರಾಘವ್‌ ಚಡ್ಡಾ ನೀವು ಆದಷ್ಟು ಬೇಗ ಶುದ್ಧೀಕರಣಗೊಳ್ಳಬೇಕು. ಏಕೆಂದರೆ ಇದು ಅಪಶಕುನ. ಅದಲ್ಲದೆ, ನೀವು ಮದುವೆಯಾಗುವ ಹಂತದಲ್ಲಿದ್ದೀರಿ. ಯಮುನಾ ನದಿ ಹೇಗಿದ್ದರೂ ಮನೆಬಾಗಿಲಿಗೆ ಬರುತ್ತಿದೆ. ಆದಷ್ಟು ಶೀಘ್ರವಾಗಿ ಅದರಲ್ಲಿಯೇ ಮುಳುಗಿ ಶುದ್ದೀಕರಣ ಮಾಡಿಕೊಳ್ಳಿ' ಎಂದು ಲೇವಡಿ ಮಿಶ್ರಿತ ಧಾಟಿಯಲ್ಲಿ ಸಲಹೆ ನೀಡಿದ್ದಾರೆ.

ದೇವಸ್ಥಾನದಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್ ಚಡ್ಡಾ- ಪರಿಣೀತಿ ಚೋಪ್ರಾ: ವಿಡಿಯೋ ವೈರಲ್

ತಮಾಷೆ ಏನೆ ಇರಲಿ, ಇದು ಒಳ್ಳೆಯ ಶಕುನವಂತೂ ಅಲ್ಲ. ಶೀಘ್ರವಾಗಿ ರಾಘವ್‌ ಚಡ್ಡಾ ವಿಷ್ಣುವಿನ ದೇವಸ್ಥಾನಕ್ಕೆ ಹೋಗಬೇಕು. ತಳಸಿ ನೀರನ್ನು ತಮ್ಮ ತಲೆಯ ಮೇಲೆ ಹಾಕಿಕೊಳ್ಳಬೇಕು. ಇದನ್ನು ನೀವು ಮಾಡಿ' ಎಂದು ರಾಘವ್‌ ಚಡ್ಡಾಗೆ ಟ್ಯಾಗ್‌ ಮಾಡಿ ಸುರಭಿ ಎನ್ನುವವರು ಬರೆದಿದ್ದಾರೆ.