ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿ ಈಜಿ ಪರಾರಿಯಾದ ಡ್ರಗ್ ಪೆಡ್ಲರ್
ಡ್ರಗ್ ಪೆಡ್ಲರ್ ಓರ್ವ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕೆರೆಗೆ ಹಾರಿ ಕೆರೆಯ ಇನ್ನೊಂದು ದಡಕ್ಕೆ ಈಜಿ ಪರಾರಿಯಾದ ಘಟನೆ ಮಧ್ಯಪ್ರದೇಶದ ಶಿಯೋಪುರ್‌ನಲ್ಲಿ ನಡೆದಿದೆ.
ಭೋಪಾಲ್: ಡ್ರಗ್ ಪೆಡ್ಲರ್ ಓರ್ವ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕೆರೆಗೆ ಹಾರಿ ಕೆರೆಯ ಇನ್ನೊಂದು ದಡಕ್ಕೆ ಈಜಿ ಪರಾರಿಯಾದ ಘಟನೆ ಮಧ್ಯಪ್ರದೇಶದ ಶಿಯೋಪುರ್‌ನಲ್ಲಿ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾನುವಾರ ಮಧ್ಯಾಹ್ನ ನಂತರ ಈ ಘಟನೆ ನಡೆದಿದ್ದು, ಡ್ರಗ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಖಾನ್ ಎಂಬಾತನಿಗೆ ಪೊಲೀಸರು ಬಲೆ ಬೀಸಿದ್ದರು. ಈತಗೆ ನೊಟೀಸ್ ನೀಡುವ ಸಲುವಾಗಿ ಪೊಲೀಸರು ಆತನಿದ್ದಲ್ಲಿಗೆ ತೆರಳಿದಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಪೊಲೀಸರು ಹಿಂಬಾಲಿಸಿದಾಗ ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ್ದಾನೆ. ಅಲ್ಲದೇ ಕೆರೆಯ ಮತ್ತೊಂದು ದಡಕ್ಕೆ ಈಜಿ ಆತ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ಆತನಿಗೆ ಕೆರೆಯಿಂದ ಮೇಲೆ ಬರುವಂತೆ ಮನವಿ ಮಾಡುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆ ಆಗಿದ್ದು, ವೈರಲ್ ಆಗಿದೆ. ಈತನ ವಿರುದ್ಧ ಡ್ರಗ್ ಮಾರಾಟ ದಂಧೆ ಸೇರಿದಂತೆ ಹಲವು ಪ್ರಕರಣಗಳು ಇದ್ದು, ಈತನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಕಲಮಶ್ಶೇರಿ ಬಾಂಬ್ ಸ್ಫೋಟ ಪ್ರಕರಣ: 2500 ಜನರಿದ್ದ ಕ್ರೈಸ್ತ ಭವನವನ್ನೇ ಸ್ಫೋಟಿಸಲು ಸಂಚು
ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿದ್ದು, ಈ ಹಿನ್ನೆಲೆಯಲ್ಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತದಿಂದಲೂ ಇಸ್ರೇಲ್ ರೀತಿ ಸ್ವದೇಶಿ 'ಐರನ್ ಡೋಮ್': ಡಿಆರ್‌ಡಿಒದಿಂದ 5 ವರ್ಷಗಳಲ್ಲಿ ನಿರ್ಮಾಣ