ಅಮರಾವತಿ[ಫೆ.22]: ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ತಮ್ಮ ಹಾಗೂ ತಮ್ಮ ಕುಟುಂಬದ ಆಸ್ತಿ ಘೋಷಣೆ ಮಾಡಿದ್ದಾರೆ. ಅಚ್ಚರಿ ಎಂದರೆ ನಾಯ್ಡು ಮತ್ತು ಅವರ ಪುತ್ರ ನಾರಾ ಲೋಕೇಶ್‌ಗಿಂತಲೂ ಅವರ 6 ವರ್ಷದ ಮೊಮ್ಮಗ ಶ್ರೀಮಂತ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ನಾಯ್ಡು ಆಸ್ತಿಯಲ್ಲಿ 87 ಲಕ್ಷ ಏರಿಕೆಯಾಗಿದೆ. ನಾಯ್ಡು ತಮ್ಮ ಬಳಿ 3.87 ಕೋಟಿ ಆಸ್ತಿ ಹಾಗೂ 5.13 ಕೋಟಿ ಸಾಲ ಇದೆ ಎಂದು ಘೋಷಣೆ ಮಾಡಿದ್ದಾರೆ.

ರಾಜಕೀಯದಲ್ಲಿ ಕೊನೆಯ ಕ್ಷಣದಲ್ಲಿ ಗುರುವಿಗೇ ಕೈಕೊಟ್ಟವರು ಇವರು!

ಇನ್ನು ನಾಯ್ಡು ಪುತ್ರ ನಾರಾ ಲೋಕೇಶ್‌ ಆಸ್ತಿಯಲ್ಲಿ 2 ಕೋಟಿ ಇಳಿಕೆಯಾಗಿ 19 ಕೋಟಿಗೆ ತಲುಪಿದೆ. ಅಚ್ಚರಿ ಎಂದರೆ ನಾರಾ ಲೋಕೇಶ್‌ ಅವರ ಮಗ ದೇವಾಂಶ್‌ ಬಳಿ 19.42 ಕೋಟಿ ಆಸ್ತಿ ಇದ್ದು, ಅವರಿಗೆ ಯಾವುದೇ ಸಾಲಗಳಿಲ್ಲ.

ಇನ್ನು ನಾಯ್ಡು ಅವರ ಪತ್ನಿ ಭುವನೇಶ್ವರಿ ಆಸ್ತಿಯಲ್ಲಿ 8 ಕೋಟಿ ರು. ಏರಿಕೆಯಾಗಿ 39.58 ಕೋಟಿ ರು.ಗೆ ತಲುಪಿದೆ.