ನವದೆಹಲಿ[ಫೆ.26]: ಸುಪ್ರೀಂ ಕೋರ್ಟ್‌ನ 6 ನ್ಯಾಯಾಧೀಶರಿಗೆ ಎಚ್‌1ಎನ್‌1 ಜ್ವರ ತಗುಲಿದೆ. ಇದರಿಂದ ಸುಪ್ರೀಂ ಕೋರ್ಟ್‌ ಕಲಾಪಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಮಂಗಳವಾರ ಈ ಕುರಿತು ನ್ಯಾಯಾಧೀಶರು ಹಾಗೂ ವಕೀಲರ ಜತೆ ಚರ್ಚೆ ನಡೆಸಿದ ಮುಖ್ಯ ನ್ಯಾಯಾಧೀಶ ಎಸ್‌.ಎ. ಬೋಬ್ಡೆ ಅವರು, ಜ್ವರ ಹರಡುವಿಕೆ ತಡೆಗಟ್ಟಲು ವಕೀಲರು ಹಾಗೂ ಕೋರ್ಟ್‌ ಸಿಬ್ಬಂದಿಗೆ ಲಸಿಕೆ ಹಾಕಿಸಬೇಕು ಎಂದು ಸೂಚಿಸಿದರು.

ಈ ಬಗ್ಗೆ ತಮ್ಮ ಕಲಾಪದಲ್ಲಿ ವಿವರ ನೀಡಿದ ನ್ಯಾ| ಡಿ.ವೈ. ಚಂದ್ರಚೂಡ, ‘ನ್ಯಾ| ಬೋಬ್ಡೆ ನೇತೃತ್ವದಲ್ಲಿ ಸಭೆ ನಡೆಯಿತು. ಜ್ವರ ತಡೆಗೆ ಲಸಿಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ’ ಎಂದರು. ಬೋಬ್ಡೆ ಸಭೆ ನಡೆಸುತ್ತಿದ್ದ ಕಾರಣ 10.30ಕ್ಕೆ ಆರಂಭವಾಗಬೇಕಿದ್ದು ಕೋರ್ಟ್‌ ಕಲಾಪಗಳು 11.08ಕ್ಕೆ ಆರಂಭವಾದವು.