Ajmer Blackmail Case: ಅತಿದೊಡ್ಡ ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ 6 ಮಂದಿ ತಪ್ಪಿತಸ್ಥರು ಎಂದ ಕೋರ್ಟ್!
ಮಹತ್ವದ ತೀರ್ಪಿನಲ್ಲಿ, ಆಗಸ್ಟ್ 20 ರಂದು ಅಜ್ಮೀರ್‌ನ ವಿಶೇಷ ಪೋಕ್ಸೊ ಕಾಯಿದೆ ನ್ಯಾಯಾಲಯವು 1992 ರ ಹಿಂದಿನ ಬೃಹತ್ ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಪಾತ್ರಕ್ಕಾಗಿ ನಫೀಸ್ ಚಿಶ್ತಿ ಮತ್ತು ನಸೀಮ್ ಅಲಿಯಾಸ್ ಟಾರ್ಜನ್ ಸೇರಿದಂತೆ ಆರು ವ್ಯಕ್ತಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತು.
ಜೈಪುರ (ಆ.20): ಅಜ್ಮೀರ್ 1992 ರ ಲೈಂಗಿಕ ಹಗರಣದಲ್ಲಿ, ಪೋಕ್ಸೊ ನ್ಯಾಯಾಲಯ ಇಂದು ಐತಿಹಾಸಿಕ ತೀರ್ಪು ನೀಡಿದ್ದು, 6 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತು. ಇಂದು ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.ಇದರ ನಡುವೆ ಈ ಆರೋಪಿಗಳ ಪೈಕಿ ಒಬ್ಬ ಈಗಾಗಲೇ ಪರಾರಿಯಾಗಿದ್ದಾನೆ. ಆರೋಪಿಗಳಾದ ನಫೀಸ್ ಚಿಶ್ತಿ, ನಸೀಮ್ ಅಲಿಯಾಸ್ ಟಾರ್ಜನ್, ಸಲೀಂ ಚಿಶ್ತಿ, ಇಕ್ಬಾಲ್ ಭಾಟಿ, ಸೊಹೈಲ್ ಘನಿ, ಸೈಯದ್ ಜಮೀನ್ ಹುಸೇನ್ ಅಪರಾಧಿಗಳೆಂದು ಪೋಸ್ಕೋ ನ್ಯಾಯಾಲಯ ತೀರ್ಪು ನೀಡಿದೆ. 1992 ರಲ್ಲಿ, ಆರೋಪಿಗಳು ಅಜ್ಮೀರ್‌ನ ಪ್ರಸಿದ್ಧ ಮೇಯೊ ಕಾಲೇಜಿನ 100 ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಮತ್ತು ಅವರ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವ ಮೂಲಕ ಬ್ಲ್ಯಾಕ್‌ಮೇಲ್ ಮಾಡಿದರು. ಹಗರಣದ 4 ಆರೋಪಿಗಳು ಈಗಾಗಲೇ ಶಿಕ್ಷೆ ಅನುಭವಿಸಿದ್ದಾರೆ. ನ್ಯಾಯಾಲಯ ಅವರನ್ನು ಅಪರಾಧಿಗಳೆಂದು ಘೋಷಿಸಿದ ನಂತರ, ಪೊಲೀಸರು ಎಲ್ಲಾ ಆರೋಪಿಗಳನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
18 ಆರೋಪಿಗಳಿಗೆ ಏನಾಯಿತು?: ಮಾಹಿತಿಯ ಪ್ರಕಾರ, 32 ವರ್ಷಗಳ ಹಿಂದೆ ನಡೆದ ಲೈಂಗಿಕ ಹಗರಣದಲ್ಲಿ ಒಟ್ಟು 18 ಆರೋಪಿಗಳು ಸಿಕ್ಕಿಬಿದ್ದಿದ್ದರು. 9 ಮಂದಿಗೆ ಈಗಾಗಲೇ ಶಿಕ್ಷೆ ವಿಧಿಸಲಾಗಿದ್ದು, ಓರ್ವ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಬ್ಬ ವ್ಯಕ್ತಿಯನ್ನು ಬಾಲಕನಿಗೆ ಕಿರುಕುಳ ನೀಡಿದ ಆರೋಪವನ್ನು ನ್ಯಾಯಾಲಯ ಹೊರಿಸಿದೆ. ಒಬ್ಬ ಆರೋಪಿಯನ್ನು ಪರಾರಿ ಎಂದು ನ್ಯಾಯಾಲಯ ಘೋಷಿಸಿತ್ತು. ಉಳಿದವರನ್ನು ಇಂದು ದೋಷಿಗಳೆಂದು ನ್ಯಾಯಾಲಯ ಘೋಷಿಸಿದೆ. ಅಲ್ಲದೆ, ಈ ಪ್ರಕರಣದ 6 ಆರೋಪಿಗಳು ಈ ವರ್ಷದ ಜುಲೈನಲ್ಲಿ ಇವರ ವಿಚಾರಣೆಯನ್ನು ಪುರ್ಣಗೊಳಿಸಿತ್ತು.
ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 8 ಆರೋಪಿಗಳು ಡಿಜೆ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. 2001 ರಲ್ಲಿ, ಲೈಂಗಿಕ ಹಗರಣದಲ್ಲಿ 4 ಆರೋಪಿಗಳನ್ನು ನ್ಯಾಯಾಲಯವು ಖುಲಾಸೆಗೊಳಿಸಿತು ಆದರೆ ಇತರ ನಾಲ್ವರ ಶಿಕ್ಷೆಯನ್ನು ಎತ್ತಿಹಿಡಿಯಲಾಯಿತು.
ಅಜ್ಮೀರ್ ದರ್ಗಾಗೆ ಚಾದರ್ ಅರ್ಪಿಸಿದ ಪ್ರಧಾನಿ ನರೇಂದ್ರ ಮೋದಿ!
ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಇತರ ನಾಲ್ವರು: ಇಂತಹ ಪರಿಸ್ಥಿತಿಯಲ್ಲಿ ಇತರ ನಾಲ್ವರು ಆರೋಪಿಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕೂಡ ಪ್ರಕಟ ಮಾಡಿದೆ. 2003 ರಲ್ಲಿ ಎಲ್ಲಾ ನಾಲ್ವರ ಶಿಕ್ಷೆಯನ್ನು ಜೀವಾವಧಿಯಿಂದ 10 ವರ್ಷಕ್ಕೆ ಇಳಿಸಿತು. ಆರೋಪಿಗಳು ಈಗಾಗಲೇ 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದರಿಂದ, ಎಲ್ಲರೂ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಅಜ್ಮೇರ್ ದರ್ಗಾದ ಒಳಗೆ ಮಹಿಳೆಯ ನೃತ್ಯ ವೈರಲ್: ವ್ಯಾಪಕ ಆಕ್ರೋಶ