ಚೀನಾದಲ್ಲಿ ಎಚ್‌ಎಂಪಿವಿ ವೈರಸ್‌ನಿಂದ ಸಾವಿರಾರು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಕೇಂದ್ರ ಸರ್ಕಾರವು, ಭಾರತದಲ್ಲೂ ಇಂಥ ಪ್ರಕರಣಗಳ ಮೇಲೆ ನಿಗಾ ಇಡಲು ವಿವಿಧ ಸೋಂಕಿನ ಪ್ರಕರಣಗಳ ಮೇಲೆ ಕಣ್ಣಾವಲು ಇಟ್ಟಿತ್ತು. ಈ ವೇಳೆ ಮಕ್ಕಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 

ನವದೆಹಲಿ(ಜ.07): ನೆರೆಯ ಚೀನಾ, ಹಾಂಕಾಂಗ್, ಜಪಾನ್ ದೇಶ ಗಳಲ್ಲಿ ಭಾರೀ ಆತಂಕ ಹುಟ್ಟಿಸಿರುವ ಎಚ್ ಎಂಪಿಎ (ಹೂಮನ್ ಮೆಟಾನ್ಯೂಮೋ ವೈರಸ್) ಇದೀಗ ಭಾರತಕ್ಕೂ ಕಾಲಿಟ್ಟಿದೆ. ಮೊದಲ 2 ಪ್ರಕರಣ ಬೆಂಗಳೂರಲ್ಲಿ ವರದಿಯಾಗಿದ್ದು, ಇವೆರಡೂ ಸೇರಿ ದೇಶದಲ್ಲಿ ಸೋಮವಾರ 6 ಪ್ರಕರಣ ದೃಢಪಟ್ಟಿದೆ. ಅದರಲ್ಲಿ ಕರ್ನಾಟಕದ 2 ಮತ್ತು ಗುಜರಾತ್‌ನ 1 ಮಗುವಿನಲ್ಲಿ ಎಚ್‌ಎಂ ವೈರಸ್ ಪತ್ತೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಪ್ರಕಟಿಸಿದೆ. ಇನ್ನು ಚೆನ್ನೈನಲ್ಲಿ 2 ಹಾಗೂ ಕೋಲ್ಕತಾದಲ್ಲಿ 1 ಕೇಸು ವರದಿಯಾಗಿದೆ. 

Add Asianetnews Kannada as a Preferred SourcegooglePreferred

ಚೀನಾದಲ್ಲಿ ಎಚ್‌ಎಂಪಿವಿ ವೈರಸ್‌ನಿಂದ ಸಾವಿರಾರು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಕೇಂದ್ರ ಸರ್ಕಾರವು, ಭಾರತದಲ್ಲೂ ಇಂಥ ಪ್ರಕರಣಗಳ ಮೇಲೆ ನಿಗಾ ಇಡಲು ವಿವಿಧ ಸೋಂಕಿನ ಪ್ರಕರಣಗಳ ಮೇಲೆ ಕಣ್ಣಾವಲು ಇಟ್ಟಿತ್ತು. ಈ ವೇಳೆ ಮಕ್ಕಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ವಿಶೇಷವೆಂದರೆ ಸೋಂಕು ದೃಢಪಟ್ಟ ಮಕ್ಕಳಾಗಲೀ ಅಥವಾ ಕುಟುಂಬ ಸದಸ್ಯರ ಪೈಕಿ ಯಾರೂ ವಿದೇಶಕ್ಕೆ ಹೋಗಿ ಬಂದ ಇತಿಹಾಸ ಹೊಂದಿಲ್ಲ.

ಬೆಂಗಳೂರಲ್ಲಿ ಮೊದಲ ಕೇಸ್‌, HMPV ವಿರುದ್ಧ ಸಮರಕ್ಕೆ ಸಜ್ಜಾದ ದೆಹಲಿ!

ಯಾರಿಗೆ ಬರುತ್ತೆ?

ಎಚ್‌ಎಂಪಿವಿ ಅಥವಾ ಹೂಮನ್ ಮೆಟಾನ್ನೂ ಮೋವೈರಸ್, ಉಸಿರಾಟದ ಸಮಸ್ಯೆಗೆ ಕಾರಣವಾಗುವ ವೈರಸ್. ಇದು ಎಲ್ಲಾ ವಯೋಮಾನದವರಲ್ಲೂ ಕಾಣಿಸಿಕೊಳ್ಳಬಹುದು. ಮಕ್ಕಳು, ವಯೋ ವೃದ್ಧರು, ರೋಗನಿರೋಧಕ ಶಕ್ತಿಯ ಕೊರತೆ ಇರುವವರನ್ನು ಹೆಚ್ಚಾಗಿ ಬಾಧಿಸುವ ಸಂಭವ ಇರುತ್ತದೆ. 

ಇದು ಹೊಸದೇನಲ್ಲ 

ಎಚ್‌ಎಂಪಿವಿ ವೈರಾಣು ಹೊಸದಲ್ಲ. 2001ರಲ್ಲಿ ಮೊದಲ ಬಾರಿ ಕಾಣಿಸಿಕೊಂ ಡಿತ್ತು. ಆದರೆ ಈಗ ಮತ್ತೆ ಸದ್ದು ಮಾಡುತ್ತಿದೆ. ಇದಕ್ಕೆ ಯಾವುದೇ ಲಸಿಕೆ ಇಲ್ಲ. 
ಹೇಗೆ ಹರಡುತ್ತದೆ? ಕೆಮ್ಮುವಾಗ ಅಥವಾ ಸೀನುವಾಗ ಹೊರಬರುವ ಕಣಗಳಿಂದ ಈ ಸೊಂಕು ಹರಡುತ್ತದೆ. ಸೋಂಕಿತರ ಸಂಪರ್ಕಕ್ಕೆ ಬರುವುದರಿಂದ ಹಾಗೂ ಕಲುಷಿತ ವಾತಾವರಣಕ್ಕೆ ತೆರೆದುಕೊಳ್ಳುವುದರಿಂ ದಲೂ ಎಚ್‌.ಎಂಪಿಎ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ.

ಲಾಕ್‌ಡೌನ್, ಮಾಸ್, ಸ್ಟೀನಿಂಗ್, ಮಾರ್ಗಸೂಚಿಗಳು ಇಲ್ಲ: ದಿನೇಶ್

ಬೆಂಗಳೂರು: ಎಚ್‌ಎಂಪಿವಿ ಎಂಬುದು ಪ್ರತಿ ವರ್ಷ ಸಾಮಾನ್ಯ ವಾಗಿ ಹರಡುವ ಸಹಜ ಸೋಂಕು. ಮಾರಣಾಂತಿಕ ಅಥವಾ ಅಪಾಯಕಾರಿ ವೈರಸ್ ಅಲ್ಲ. ಹೀಗಾಗಿ ರಾಂಡಮ್ ಪರೀಕ್ಷೆ, ಮಾಸ್ಕ್, ಲಾಕ್‌ಡೌನ್, ಮಕ್ಕಗಳಿಗೆ ಮಾರ್ಗಸೂಚಿ, ವಿಮಾನ ನಿಲ್ದಾಣಗಳಲ್ಲಿ ಸ್ಟೀನಿಂಗ್ ಸೇರಿದಂತೆ ಯಾವುದೇ ವಿಶೇಷ ಕ್ರಮಗಳನ್ನೂ ನಾವು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. 

ಮಲೇಷ್ಯಾದಲ್ಲೂ ವೈರಸ್ ಸೋಂಕು ಶೇ.45 ಹೆಚ್ಚಳ 

ಕೌಲಾಲಂಪುರ: ಮಲೇಷ್ಯಾ ಸರ್ಕಾರ ಕೂಡ ತನ್ನ ದೇಶದಲ್ಲಿ ಎಚ್‌ಎಂಪಿವಿ ವೈರಸ್‌ನಲ್ಲಿ ಏರಿಕೆ ಕಂಡುಬಂದಿದೆ ಎಂದು ಹೇಳಿದೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ಶೇ.45ರಷ್ಟು ಹೆಚ್ಚು ಸೋಂಕು ದೃಢಪಟ್ಟಿವೆ ಎಂದು ಹೇಳಿಕೊಂಡಿದೆ.

ಚೀನಾದಲ್ಲಿ HMPV ವೈರಸ್ ಹೆಚ್ಚಳ ಬೆನ್ನಲ್ಲೇ ಅಮೆರಿಕಕ್ಕೆ ತಲೆನೋವಾದ ವಿಚಿತ್ರ ಕಾಯಿಲೆ!

ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ 

ರಾಜ್ಯದಲ್ಲಿ ಸೋಂಕು ಹರಡದಂತೆ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದು ಕೊಳ್ಳ ಲಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಇದು ಹಳೇ ವೈರಸ್, ಆತಂಕ ಬೇಡ: ಸರ್ಕಾರ, ತಜ್ಞರು ನವದೆಹಲಿ: ಎಚ್‌ಎಂಪಿವಿ ಹೊಸ ವೈರಸ್ ಅಲ್ಲ ಎಂದು ತಜ್ಞರು ಹೇಳಿದ್ದಾರೆ. ವಿಶ್ವದಲ್ಲೇ ಚಾಲ್ತಿಯ ಲ್ಲಿರುವ ವೈರಾಣುವಾಗಿದ್ದು, ಅದರಲ್ಲಿ ಭಾರತವೂ ಇದೆ. ಇದನ್ನು ಎದುರಿಸಲು ಸನ್ನದ್ದ ವಾಗಿದ್ದೇವೆ' ಎಂದು ಸರ್ಕಾರ ಹೇಳಿದೆ.