Asianet Suvarna News Asianet Suvarna News

'ಹಿಂದಿ ರಾಜ್ಯಗಳಿಗೆ ಮಾತ್ರ ಮೋದಿ ಪ್ರಧಾನಿ, ನೂರು ದಿನದಲ್ಲಿ ಎಲ್ಲ ಪರಿಹಾರ'

ತಮಿಳುನಾಡಿನಲ್ಲಿ ಚುನಾವಣೆ ಕಾವು ಸ್ಟಾಲಿನ್ ಸಂದರ್ಶನ/ ಅಧಿಕಾರಕ್ಕೆ ಬಂದರೆ ಯಾವೆಲ್ಲ ಬದಲಾವಣೆ ತಮಿಳುನಾಡಿನಲ್ಲಿ ಆಗಲಿದೆ? ಹಿಂದಿ ಹೇರಿಕೆ ತಡೆಯುವುದು ನಮ್ಮ ಅಜೆಂಡಾದದಲ್ಲಿ ಇದೆ

5 State Elections Dravida Munnetra Kazhagam (DMK) chief MK Stalin Interview mah
Author
Bengaluru, First Published Mar 28, 2021, 4:02 PM IST

ಚೆನ್ನೈ(ಮಾ.  28)  ಡಿಎಂಕೆ ಅಗ್ರ ನಾಯಕ ಎಂಕೆ ಸ್ಟಾಲಿನ್(68)  ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಡಿಎಂಕೆ ಸಿಎಂ ಕ್ಯಾಂಡಿಡೇಟ್ ಆಗಿಯೂ  ಇದೇ ಮೊದಲ ಸಾರಿ ಕರುಣಾನಿಧಿ ಪುತ್ರ ಕಾಣಿಸಿಕೊಂಡಿದ್ದಾರೆ. 

ಯುವಕರಾಗಿದ್ದಾಗಿನಿಂದಲೇ ಸ್ಟಾಲಿನ್ ಡಿಎಂಕೆ ಕಾರ್ಯಕರ್ತರಾಗಿ  ಗುರುತಿಸಿಕೊಂಡವರು.  ಆರು ಸಾರಿ ಶಾಸಕರಾಗಿದ್ದ ಸ್ಟಾಲಿನ್ ಚೆನ್ನೈ ಮೇಯರ್, ತಮಿಳುನಾಡು ಡಿಸಿಎಂ ಆಗಿಯೂ ಕೆಲಸ ಮಾಡಿದ್ದಾರೆ.  ಗ್ರಾಮೀಣಾಭಿವೃದ್ಧಿ ಸಚಿವರಾಗಿಯೂ  ಕೆಲಸ ಮಾಡಿದ್ದ ಸ್ಟಾಲಿನ್ ಇದೀಗ ತಮಿಳುನಾಡು ವಿಪಕ್ಷ  ನಾಯಕ. ಹಿಂದೂಸ್ತಾನ್ ಟೈಮ್ಸಿಗೆ ಕೊಟ್ಟ ಸಂದರ್ಶನ  ನೀಡಿದ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಸ್ಟಾಲಿನ್ ಹೇಳಿಕೊಂಡಿದ್ದಾರೆ.

 ಒಂದು ದಶಕದಿಂದ ಅಧಿಕಾರಿಂದ ಹೊರಗೆ ಇದ್ದೀರಿ.. ಈ ಅವಧಿಯಲ್ಲಿ ಏನೆಲ್ಲಾ ಪಾಠಗಳನ್ನು ಕಲಿತಿದ್ದೀರೀ?

ಅಧಿಕಾರದಲ್ಲಿ ಅಥವಾ ವಿಪಕ್ಷದಲ್ಲಿ ಇರಲಿ ನಾನು ಜನರ ಒಳಿತಿಗೆ ಚಿಂತನೆ ಮಾಡಿಕೊಂಡು ಬಂದಿದ್ದೇನೆ. ಡಿಎಂಕೆ ಪಕ್ಷ ಯಾವಾಗಲೂ ಜನರೊಂದಿಗೆ ನಿಂತಿದೆ. ತಳವರ್ಗದವರ ಕಲ್ಯಾಣಕ್ಕಾಗಿಯೇ ಡಿಎಂಕೆ ಸ್ಥಾಪನೆಯಾಗಿದೆ. ಮಹಿಳೆಯರ ಹಕ್ಕು ಕಾಪಾಡಲು ಹೋರಾಟ ಮಾಡಿಕೊಂಡೇ ಬಂದಿದ್ದೇವೆ. ಜನರ ಆಶೋತ್ತರಗಳಿಗೆ ಅನುಗುಣವಾಗಿ ಪಕ್ಷ ನಡೆದುಕೊಂಡು ಬಂದಿದೆ ಮುಂದೆಯೂ ಹೀಗೆ ಇರಲಿದೆ. 

ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಸರ್ಕಾರವು ತನ್ನ ಅವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ನೀವು ನಂಬಿದ್ದೀರಾ ಅಥವಾ ನಿಮಗೆ ಆಶ್ಚರ್ಯವಾಗಿದೆಯೇ?  2016 ಕ್ಕಿಂತ  ಮೊದಲು ಅವರ ಹೆಸರೇ ಚಾಲ್ತಿಯಲ್ಲಿ ಇರಲಿಲ್ಲ. ನಿಮ್ಮ ರಾಜಕಾರಣದ ಮೊದಲ ವೈರಿ ಅವರೇ ಆಗುತ್ತಾರಾ? 

ಡಿಎಂಕೆ ಸಿದ್ಧಾಂತವನ್ನು ನಂಬಿಕೊಂಡಿರುವ ಪಕ್ಷ.  ನಾವು ಎಂದಿಗೂ ಹಿಂಬಾಗಿಲಿನ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನಿಸಲಿಲ್ಲ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅನಾರೋಗ್ಯ ಮತ್ತು ಸಾವಿನ ಕಾರಣದಿಂದಾಗಿ ಎಐಎಡಿಎಂಕೆ ಯಲ್ಲಿನ ಗೊಂದಲ ನಿರ್ಮಾಣ ಆಯಿತು. ಯಾವ ಸಮಯದಲ್ಲೂ, ಹಿಂಬಾಗಿಲಿನ ಮೂಲಕ ಅಧಿಕಾರಕ್ಕೆ ಬರುವುದಿಲ್ಲ ಎಂದು ಡಿಎಂಕೆ ಸ್ಪಷ್ಟಪಡಿಸಿದೆ.. ಪಳನಿಸ್ವಾಮಿ ಆಡಳಿತದಲ್ಲಿನ  ಭ್ರಷ್ಟಾಚಾರ ಮತ್ತು ಅವರು ತಮ್ಮ ಮಂತ್ರಿಗಳಿಗೆ ಖಜಾನೆಯನ್ನು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದನ್ನು ನೋಡಿದರೆ, ಪಳನಿಸ್ವಾಮಿ ಸರ್ಕಾರವು ಅದರ ಅವಧಿ ಮುಗಿಯುವವರೆಗೂ ಮುಂದುವರೆದಿದೆ.  ಈಗಲೂ ಸಹ, ಅವರು ಸರ್ಕಾರದ ಹಣವನ್ನು ಖರ್ಚು ಮಾಡುತ್ತ ಜಾಹೀರಾತು ಪ್ರಚಾರ ಮಾಡಿಕೊಂಡಿದ್ದಾರೆ ಹೊರತು ಕೆಲಸ ಮಾಡಿಲ್ಲ. ಜನ ಅವರ ಕಳಪೆ ಸಾಧನೆ ಮತ್ತು ವೈಫಲ್ಯಗಳನ್ನು ಗುರುತಿಸಿದ್ದಾರೆ.

'ತಮಿಳುನಾಡಿನಲ್ಲಿ ಬಿಜೆಪಿ ಪರ ಅಲೆ'

ನರೇಂದ್ರ ಮೋದಿಯವರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಭಾರತೀಯ ಜನತಾ  ತಮಿಳುನಾಡಿನಲ್ಲಿ ಹೆಜ್ಜೆ ಹಾಕಲು ತನ್ನ ಬೂತ್ ಮಟ್ಟದ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ, ಮುಂದೆ ಯಾವ ಬದಲಾವಣೆಗೆ ತೆರೆದುಕೊಳ್ಳಬಹುದು? 

ಪ್ರಧಾನಿ ಮೋದಿ ಅವರು ತಾವು ಕೇವಲ ಹಿಂದಿ ಮಾತನಾಡುವ ರಾಜ್ಯಗಳ ಪ್ರಧಾನಿ ಎಂದು ಯೋಚಿಸುತ್ತಿದ್ದಾರೆ. ತಮಿಳುನಾಡಿನ ಅಭಿವೃದ್ಧಿಯಲ್ಲಿ ಅವರಿಗೆ ಯಾವುದೇ ಆಸಕ್ತಿಯಿಲ್ಲ.  ಎನ್‌ಡಿಎ ಆಡಳಿತದ ಯಾವ ರಾಝ್ಯಗಳಲ್ಲಿಯೂ ಅಭೀವೃದ್ಧಿ ಇಲ್ಲ.  ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವ ಕೆಲಸ ಕೇಂದ್ರ ಸರ್ಕಾರದಿಂದ ಆಗುತ್ತಲೇ ಇದೆ. ಸಂವಿಧಾನದ ಭಾಗವಾಗಿರುವ ರಾಜ್ಯ ಪಟ್ಟಿಯಲ್ಲಿನ ಅಧಿಕಾರಗಳು ಆತಂಕದಲ್ಲಿದೆ.  ತಮಿಳುನಾಡಿನ ಸಾಮರಸ್ಯ ಕದಡಿ ಕೋಮು ಭಾವನೆ ಬಿತ್ತಲು  ಎಐಎಡಿಎಂಕೆಯನ್ನು ಬಳಸಿಕೊಳ್ಳುತ್ತಿದ್ದಾರೆ. 

ಮೋದಿ ಸರ್ಕಾರದ ಅವಧಿಯಲ್ಲಿ ತಮಿಳುನಾಡಿಗೆ ಯಾವುದೇ ಮೂಲಸೌಕರ್ಯ ಯೋಜನೆಗಳು ಸಿಕ್ಕಿಲ್ಲ. ಆರು ವರ್ಷಗಳ ಹಿಂದೆ ಘೋಷಿಸಲಾದ ಮಧುರೈನಲ್ಲಿರುವ ಏಮ್ಸ್ ಇಂದಿಗೂ  ಆರಂಭವಾಗದೆ ಉಳಿದಿದೆ.  ತಮಿಳುನಾಡಿನ ಜನ ಎಐಎಡಿಎಂಕೆ ಮತ್ತು ಬಿಜೆಪಿ ಎರಡನ್ನೂ  ಒಂದೇ ಎಂದು ಭಾವಿಸಿದ್ದು ಈ ಬಾರಿ ತಿರಸ್ಕಾರ ಮಾಡಲಿದ್ದಾರೆ.

ತಮಿಳುನಾಡಿನಲ್ಲಿ ಡಿಕೆಶಿ, ಸಿದ್ದರಾಮಯ್ಯ ಗುಡುಗು

ಸನ್ನಿವೇಶ ಎದುರಾದರೆ ನೀವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಾ? ನಿಮ್ಮ ತಂದೆ 1999 ಮತ್ತು 2003 ರ ನಡುವೆ ಡಿಎಂಕೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದರು.

ಡಿಎಂಕೆ ಜಾತ್ಯತೀತ ಮೌಲ್ಯ ಮತ್ತು ಪ್ರಜಾಪ್ರಭುತ್ವದ  ಆಧರಿಸಿಕೊಂಡು ಬಂದ ಪಕ್ಷವಾಗಿದೆ. ಮತದಾನದ ನಂತರದ  ಹೀಗೆ ಆಗುತ್ತದೆ ಎಂದು ಸನ್ನಿವೇಶ ನೀವು ಹೇಗೆ ಹೇಳಲು ಸಾಧ್ಯ?  ಡಿಎಂಕೆ ರಾಜಕೀಯವಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಾವು ಕಾಂಗ್ರೆಸ್ ನೇತೃತ್ವದ ಜಾತ್ಯತೀತ ಮೈತ್ರಿಕೂಟದಲ್ಲಿದ್ದೇವೆ.

ಎಐಎಡಿಎಂಕೆ ಬಿಜೆಪಿಯೊಂದಿಗಿನ ಮೈತ್ರಿ ಇದರ ವಿರುದ್ಧದ ದೊಡ್ಡ ಅಂಶವೆಂದು ನೀವು ಭಾವಿಸುತ್ತೀರಾ ಮತ್ತು ಹಿಂದಿ ವಿರೋಧಿ ಭಾವನೆ ತಮಿಳುನಾಡಿನಲ್ಲಿ ಇನ್ನೂ ಪ್ರಬಲವಾಗಿದೆ ಎಂದು ನೀವು ಭಾವಿಸುತ್ತೀರಾ?

ಎಐಎಡಿಎಂಕೆ ಮತ್ತು ಬಿಜೆಪಿ ಒಂದೇ ಎಂದು ನಾನು ಈಗಾಗಲೇ ಹೇಳಿದ್ದೇನೆ. ಇಬ್ಬರೂ ತಮಿಳುನಾಡಿನ ಯುವಕರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ತಮಿಳುನಾಡಿನ ಲಕ್ಷಾಂತರ ಯುವಕರು ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇಬ್ಬರೂ ತಮಿಳುನಾಡಿನ ಯುವಕರನ್ನು ಶೈಕ್ಷಣಿಕ ಅವಕಾಶದಿಂದ ವಂಚನೆ ಮಾಡುತ್ತಿದ್ದಾರೆ.  ನೀಟ್ ಪರೀಕ್ಷೆಯಿಂದಾಗಿ ಒಂದು ಡಜನ್‌ಗೂ ಹೆಚ್ಚು ಯುವತಿಯರು ಮತ್ತು ಹುಡುಗರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ಆದರೆ ಎಐಎಡಿಎಂಕೆ ಮತ್ತು ಬಿಜೆಪಿ ಮೂಕ  ಪ್ರೇಕ್ಷಕರಾಗಿ ಉಳಿದಿವೆ. ಗ್ರಾಮೀಣ ಯುವಕರ ವೈದ್ಯಕೀಯ ಶಿಕ್ಷಣವನ್ನು ಬಿಜೆಪಿ ಕಸಿದುಕೊಂಡಿದೆ. ನರ್ಸಿಂಗ್ ಕೋರ್ಸ್ ಗೂ ನೀಟ್ ಎನ್ನುತ್ತ ಮತ್ತೆ ಗೊಂದಲದ ಕೆಲಸ ಮಾಡಲಾಗುತ್ತಿದೆ. ಮಾತೃಭಾಷೆಯನ್ನು ನಿರ್ಲಕ್ಷಿಸಿ ಮತ್ತು ಹಿಂದಿ ಹೇರಿಕೆಯನ್ನು ತಮಿಳುನಾಡು ಯಾವಾಗಲೂ ವಿರೋಧಿಸಿಕೊಂಡೇ ಬಂದಿದೆ.  ಭಾಷೆ ಮತ್ತು ಭಾವನೆ ಮುಖ್ಯವಾಗಲಿದೆ.

ನೀವು ಪಕ್ಷದ  ಯುವ  ವಿಭಾಗದ ಕಾರ್ಯಕ್ರಮ ಆಯೋಜನೆ ಮಾಡಲು ಆರಂಭಿಸಿದಾಗ ನಿಮಗೆ  ಆಯೋಜಿಸಲು ಪ್ರಾರಂಭಿಸಿದಾಗ ನಿಮಗೆ 13 ವರ್ಷ. ನೀವು ಆಡಳಿತದಲ್ಲಿ ಮತ್ತು ರಾಜಕೀಯವಾಗಿ ಡಿಎಂಕೆ ಒಳಗೆ ವಿಭಿನ್ನ  ಸ್ತರಗಳಲ್ಲಿ, ಪಾತ್ರಗಳಲ್ಲಿ ಕೆಲಸ ಮಾಡಿದ್ದೀರಿ. ನಿಮ್ಮ ಮಗ ಉದಯಾನಿಧಿಯನ್ನು ಯುವ ವಿಭಾಗದ ಕಾರ್ಯದರ್ಶಿಯಾಗಿ ನೇಮಿಸಿದಾಗಿನಿಂದ, ಅವರು ನಿಮ್ಮ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದಾರೆ ಮತ್ತು ಚೆಪಾಕ್‌ನಿಂದ ಸ್ಪರ್ಧಿಸುತ್ತಿದ್ದಾರೆ.. ಇದರ ಬಗ್ಗೆ ಬಿಜೆಪಿ ಮತ್ತು ಎಐಎಡಿಎಂಕೆ ಟೀಕೆ ಮಾಡುತ್ತದೆಯಲ್ಲಾ?

ಡಿಎಂಕೆ ಕಾರ್ಯಕರ್ತರ ಪಕ್ಷ. ಪಕ್ಷ ಶ್ರೇಷ್ಠ ದ್ರಾವಿಡ ಸಿದ್ಧಾಂತಕ್ಕೆ ಬದ್ಧರಾಗಿದೆ.. ನೀವು ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಬದ್ಧರಾಗಿದ್ದಾಗ ಹಾಗೆ ನಡೆದುಕೊಳ್ಳಬೇಕಾಗುತ್ತದೆ. ಅದೂ ಜನರ ಉನ್ನತಿ ಮತ್ತು ರಾಜ್ಯದ ಅಭಿವೃದ್ಧಿಗೆ ಕಾರಣವಾಗಬೇಕಾಗುತ್ತದೆ.  ಇಲ್ಲಿ ತಕಂಧೆ ಮಗ ಎನ್ನುವುದಕ್ಕಿಂತ ಪಕ್ಷ ಕಾರ್ಯಕರ್ತ ಎನ್ನುವುದು ಮುಖ್ಯವಾಗುತ್ತದೆ.

ಬೆಳಗಾವಿ ಬೈ ಇಲೆಕ್ಷನ್; ಬಿಜೆಪಿಯ ಅಚ್ಚರಿ ನಡೆ

ನಿಮ್ಮ ತಂದೆ ನಿಮ್ಮನ್ನು  ರಾಜಕಾರಂಣಕದಲ್ಲಿ ಬೆಳೆಸಿದಂತೆ ನಿಮ್ಮ ಮಗನನ್ನು ನೀವು ಬೆಳೆಸುತ್ತೀರಾ? 

ಆದರೆ ಒಂದು ವಿಷಯ ಖಚಿತ - ನಾನು ಅಥವಾ ಪಕ್ಷದಲ್ಲಿರುವ ಯಾರಾದರೂ ತಮ್ಮ ಮಕ್ಕಳನ್ನು ಡಿಎಂಕೆ ಯಲ್ಲಿರುವ ಕಾರಣ ರಾಜಕೀಯದಲ್ಲಿ ಬೆಳೆಸಲು ಸಾಧ್ಯವಿಲ್ಲ. ಡಿಎಂಕೆ ಯಲ್ಲಿ ಬೆಳೆಯಲು ವ್ಯಕ್ತಿ ಶ್ರಮಿಸಬೇಕು, ಜನರನ್ನು ತಲುಪಬೇಕು ಮತ್ತು ರಾಜ್ಯದ ಕಲ್ಯಾಣಕ್ಕಾಗಿ ಹೋರಾಡಬೇಕು. ಎಐಎಡಿಎಂಕೆ ಮತ್ತು ಬಿಜೆಪಿಯ ಟೀಕೆಗಳು ಹತಾಶೆಯಿಂದ ಹುಟ್ಟಿದ್ದು, ಕಳೆದ ಹತ್ತು ವರ್ಷಗಳಲ್ಲಿ ಎಐಎಡಿಎಂಕೆ ದುರಾಡಳಿತ ಮರೆಮಾಚಲು ಇಂಥ ಟೀಕೆ ಮಾಡಲಾಗುತ್ತಿದೆ.

ನಿಮ್ಮ ತಂದೆ ಎಂ ಕರುಣಾನಿಧಿ ಜೀವಂತವಾಗಿದ್ದರೆ, ಈ ಸಮಯದಲ್ಲಿ ಅವರು ನಿಮಗೆ ಯಾವ ಸಲಹೆ ನೀಡುತ್ತಿದ್ದರು?

"ಕೋಮು ಮತ್ತು ಭ್ರಷ್ಟ ಶಕ್ತಿಗಳನ್ನು ತಮಿಳುನಾಡಿನಿಂದ ಹೊರಹಾಕಿ" ಮತ್ತು "ತಮಿಳುನಾಡಿನ ಹೆಮ್ಮೆ ಮತ್ತು ಸ್ವಾಭಿಮಾನವನ್ನು ಪುನಃಸ್ಥಾಪಿಸು" ಎಂಬ ಘೋಷಣೆಯೊಂದಿಗೆ ಜನರ ಬಳಿಗೆ ಹೋಗಲು ಅವರು ನನಗೆ ಸಲಹೆ ನೀಡುತ್ತಿದ್ದರು.  ಅವರು ಈಗ ಇಲ್ಲವಾದರೂ ಅವರು ಹೇಳಿದ್ದನ್ನು ನಾನು ಮಾಡುತ್ತಿದ್ದೇನೆ.

2021 ರಲ್ಲಿ ಡಿಎಂಕೆ ತನ್ನ 2019 ರ  ಲೋಕಸಭಾ ಚುನಾವಣಾ ಫಲಿತಾಂಶ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಹೇಳುವುದಕ್ಕೆ ಅರ್ಥವಿಲ್ಲ.  ಉಪಚುನಾವಣಾ ಫಲಿತಾಂಶಗಳು ಜನರ ಮನಸ್ಥಿತಿ ಬದಲಾಗಿದ್ದನ್ನು ತಿಳಿಸಿದೆ.  234  ಕ್ಷೇತ್ರಗಳಲ್ಲಿ ಡಿಎಂಕೆ ಮತ್ತು ಮೈತ್ರಿಕೂಟ ಮುನ್ನಡೆ ಕಾಯ್ದುಕೊಳ್ಳಲಿದೆ.


ನೀವು ಅಧಿಕಾರಕ್ಕೆ ಬಂದರೆ ನಿಮ್ಮ ಪ್ರಮುಖ ಆದ್ಯತೆಗಳು ಯಾವುವು ಮತ್ತು ಅವು ನಿಮ್ಮ ತಂದೆಯಿಂದ ಹೇಗೆ ಭಿನ್ನವಾಗಿರುತ್ತವೆ?

'ಸ್ಟಾಲಿನ್ ಇನ್ ಯುವರ್ ಕಾನ್ಸ್ಟಿಟ್ಯೂನ್ಸಿ ಪ್ರೋಗ್ರಾಂ' ಸಮಯದಲ್ಲಿ ಜನರಿಂದ ಪಡೆದ ಕುಂದುಕೊರತೆ ಅರ್ಜಿಗಳು ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಪರಿಹರಿಸಲಾಗುವುದು .ಇದಕ್ಕೆ ಮೊದಲ ಆದ್ಯತೆ.  ತಿರುಚ್ಚಿಯಲ್ಲಿ, ನಾನು 'ಸ್ಟಾಲಿನ್'ಸ್ ಸೆವೆನ್ ಅಶ್ಯೂರೆನ್ಸ್' ಅನ್ನು ಘೋಷಿಸಿದೆ - ಇದು ಮುಂದಿನ 10 ವರ್ಷಗಳ ಕಾಲ ತಮಿಳುನಾಡಿಗೆ ಡಿಎಂಕೆ ಇಟ್ಟುಕೊಂಡಿರುವ ದೂದೃಷ್ಟಿಯ ಸಂಕೇತ.  ಡಿಎಂಕೆ ಪ್ರಣಾಳಿಕೆ ಎಂದಿನಂತೆ  ಜನಪರವಾಗಿ ಇದೆ. . ಪೆರಾರಿಗ್ನಾರ್ ಅನ್ನಾ (ಡಿಎಂಕೆ ಸಂಸ್ಥಾಪಕ ಸಿ.ಎನ್.ಅನ್ನದುರೈ) ಕರುಣಾನಿಧಿ ಆದರ್ಶಗಳ ಆಧಾರಲ್ಲಿ ಜನಪರವಾಗಿ ನಡೆದುಕೊಳ್ಳಲಾಗುವುದು .

Follow Us:
Download App:
  • android
  • ios