ಮಿಝೋರಾಂನ ಪುಟ್ಟ ಬಾಲಕಿ ಯೂಟ್ಯೂಬ್‌ನಲ್ಲಿ ವೈರಲ್ ಆಗಿದ್ದಾಳೆ. ಮೀಝೋರಾಂನ 4 ವರ್ಷದ ಹುಡುಗಿ ಎಆರ್ ರೆಹಮಾನ್ ಹಾಡಿದ ವಂದೇ ಮಾತಂ ಹಾಡಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾಳೆ.

ಪುಟ್ಟ ಬಾಲಕಿ ಧ್ವನಿಯಲ್ಲಿ ಹಿಟ್ ಪಾಟ್ರಿಯಾಟಿಕ್ ಸಾಂಗ್ ಕೇಳಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರೂ ವಿಡಿಯೋ ನೋಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಪ್ಪ ಹೊಟ್ಟೆ, ಸ್ಟ್ರೆಚ್ ಮಾರ್ಕ್‌ ಎಲ್ಲವನ್ನೂ ಒಪ್ಪಿಕೊಳ್ಳುವೆ; ದರ್ಶನ್ ನಟಿ ಕನಿಕಾ!

ಮಿಝೋರಾಂನ ಎಸ್ತರ್ ನಮ್ಟೆ ಎಂಬ ಬಾಲಕಿ ತನ್ನ ಹಾಡಿನಿಂದ ಮಿಝೋರಾಂ ಸಿಎಂ ಝೋರಾಮಾತಂಗ ಅವರ ಗಮನ ಸೆಳೆದಿದ್ದಾಳೆ. ಎಆರ್ ರೆಹಮಾನ್ ಅವರೂ ತಮ್ಮ ಟ್ವಿಟರ್ ಖಾತೆಯಲ್ಲಿ ಹಾಡನ್ನು ಶೇರ್ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ಈ ಹಾಡಿಗೆ 5.5 ಲಕ್ಷ ವ್ಯೂಸ್ ಬಂದಿದೆ.

ಮೆಸ್ಮರೈಸಿಂಗ್ ಎಸ್ತರ್ ನಮ್ಟೆ, ಲುಂಗ್ಲೈನ 4 ವರ್ಷದ ಬಾಲಕಿ. ಮಾ ತುಝೇ ಸಲಾಂ, ವಂದೇ ಮಾತರಂ ಎಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ ವಿಡಿಯೋ ನೋಡಿ, ಇದು ಪ್ರಶಂಸನೀಯ! ಎಸ್ತರ್ ಹೆಮ್ಮೆ ಎಂದು ಟ್ವೀಟ್ ಮಾಡಿದ್ದಾರೆ. ಬಾಲಕಿಯ ಯೂಟ್ಯೂಬ್ ಚಾನೆಲ್‌ಗೆ 74 ಸಾವಿರ ಸಬ್ಕ್ರೈಬರ್ಸ್ ಇದ್ದಾರೆ.