Asianet Suvarna News Asianet Suvarna News

50 ವರ್ಷದಲ್ಲಿ 4.58 ಕೋಟಿ ಭಾರತೀಯ ಮಹಿಳೆಯರು ‘ನಾಪತ್ತೆ’: ವಿಶ್ವಸಂಸ್ಥೆ ವರದಿ

50 ವರ್ಷದಲ್ಲಿ 4.58 ಕೋಟಿ ಭಾರತೀಯ ಮಹಿಳೆಯರು ‘ನಾಪತ್ತೆ’: ವಿಶ್ವಸಂಸ್ಥೆ ವರದಿ| ವಿಶ್ವದಾದ್ಯಂತ 14.26 ಕೋಟಿ ಮಹಿಳೆಯರು ನಾಪತ್ತೆ| ಇದರಲ್ಲಿ ಚೀನಾ ಹಾಗೂ ಭಾರತದ ಪಾಲು ಶೇ.83

4 58 crore women missing in India from past 50 years says United Nations
Author
Bangalore, First Published Jul 1, 2020, 11:31 AM IST

ವಿಶ್ವಸಂಸ್ಥೆ(ಜು.01): ವಿಶ್ವಾದ್ಯಂತ ಕಳೆದ 50 ವರ್ಷದಲ್ಲಿ 14.26 ಕೋಟಿ ಮಂದಿ ಮಹಿಳೆಯರು ‘ನಾಪತ್ತೆ’ಯಾಗಿದ್ದಾರೆ. ಈ ಪೈಕಿ ಭಾರತೀಯ ಮಹಿಳೆಯ ಪಾಲು 4.58 ಕೋಟಿ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.

ಕಾಣೆಯಾದವರ ಮುಖ ಹಾಲಿನ ಪ್ಯಾಕೆಟ್‌ ಮೇಲೆ; ಕುಟುಂಬದವರ ಜತೆ ಒಟ್ಟಾದವರು ನೂರಾರು?

ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ವರದಿ ಅನ್ವಯ, 1960ರಲ್ಲಿ ‘ನಾಪತ್ತೆ’ಯಾದವರ ಸಂಖ್ಯೆ 6.1 ಕೋಟಿ ಇತ್ತು. ಕಳೆದ 50 ವರ್ಷದಲ್ಲಿ ಈ ಸಂಖ್ಯೆ ದ್ವಿಗುಣವಾಗಿದೆ. ಪ್ರಸವಪೂರ್ವ ಹಾಗೂ ಪ್ರಸವ ನಂತರದ ಲಿಂಗ ಆಯ್ಕೆಯೇ ಹೆಚ್ಚಿನ ಹೆಣ್ಣು ಮಕ್ಕಳ ನಾಪತ್ತೆಗೆ ಕಾರಣ ಎಂದು ವರದಿ ಉಲ್ಲೇಖಿಸಿದೆ. ವರದಿ ಅನ್ವಯ ನಾಪತ್ತೆಯಾದ ಮಹಿಳೆಯ ಪೈಕಿ ಜನಸಂಖ್ಯೆಯಲ್ಲಿ ವಿಶ್ವದಲ್ಲಿ ಮೊದಲ 2 ಸ್ಥಾನದಲ್ಲಿರುವ ಚೀನಾ ಮತ್ತು ಭಾರತದ ಪಾಲು ಶೇ.83ರಷ್ಟಿದೆ. ಚೀನಾ 7.23 ಕೋಟಿ ಮತ್ತು ಭಾರತದ 4..58 ಕೋಟಿ ಮಹಿಳೆಯರು ಕಳೆದ 50 ವರ್ಷಗಳಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿ ಹೇಳಿದೆ.

ಭಾರತದಲ್ಲಿ 2013-17ರ ಅವಧಿಯಲ್ಲಿ ಪ್ರತಿ ವರ್ಷ ಜನನದ ವೇಳೆ 4.6 ಲಕ್ಷ ಮಹಿಳೆಯರು ನಾಪತ್ತೆಯಾಗಿದ್ದಾರೆ. ಲಿಂಗ ಆಧರಿತ ಆಯ್ಕೆ ಒಟ್ಟು ನಾಪತ್ತೆ ಪೈಕಿ ಮೂರನೇ ಎರಡು ಭಾಗ ಪಾಲು ಹೊಂದಿದೆ, ಜನನ ನಂತರದ ಹೆಣ್ಣು ಮಕ್ಕಳ ಸಾವು ಮೂರನೇ ಒಂದು ಪಾಲು ಹೊಂದಿದೆ ಎಂದು ವರದಿ ಹೇಳಿದೆ.

ನಮ್ಮನ್ನು ಸಂತೋಷದಿಂದ ದೂರ ಕೊಂಡೊಯ್ಯುವ ಫೋಮೋ

ಧಾರಿತ ಲೈಂಗಿಕ ಸಂಪರ್ಕ ಹಾಗೂ ಜನನದ ಬಳಿಕ ಹೆಣ್ಣಿನ ಮರಣ ಪ್ರಮಾಣ ಕ್ರಮವಾಗಿ ಎರಡನೇ ಮೂರು ಹಾಗೂ ಒಂದನೇ ಮೂರು ಇದಕ್ಕೆ ಕಾರಣ ಎಂದು ವರದಿ ಉಲ್ಲೇಖಿಸಿದೆ.

Follow Us:
Download App:
  • android
  • ios