Asianet Suvarna News

ಕೊರೋನಾ 2ನೇ ಅಲೆ ಇನ್ನೂ ಮುಗಿದಿಲ್ಲ, ಅನ್‌ಲಾಕ್ ಕುರಿತು ಆರೋಗ್ಯ ಸಚಿವರ ಎಚ್ಚರಿಕೆ!

  • ಅನ್‌ಲಾಕ್‌ನಿಂದ  ದೇಶದಲ್ಲಿ ಮತ್ತೆ ಹೆಚ್ಚಾಗುತ್ತಿದೆ ಕೊರೋನಾ ಪ್ರಕರಣ
  • ರಾಜ್ಯಗಳಲ್ಲಿ ಕಂಟೈನ್ಮೆಂಟ್ ಜೋನ್ ಕಟ್ಟುನಿಟ್ಟಾಗಿ ಜಾರಿ
  • ಕೋವಿಡ್ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವರ ಎಚ್ಚರಿಕೆ
2nd wave not over Health Minister Dr Harsh Vardhan warns covid 19 GOP meeting ckm
Author
Bengaluru, First Published Jun 28, 2021, 8:54 PM IST
  • Facebook
  • Twitter
  • Whatsapp

ನವದೆಹಲಿ(ಜೂ.28): ಭಾರತದಲ್ಲಿ ಕೊರೋನಾ 2ನೇ ಅಲೆ ಇನ್ನೂ ಮುಗಿದಿಲ್ಲ. ಹೀಗಾಗಿ ಜನರು ನಿರ್ಲಕ್ಷ ವಹಿಸಬಾರದು ಎಂದು ಕೇಂದ್ರ ಆರೋದಗ್ಯ ಸಚಿವ ಡಾ. ಹರ್ಷ ವರ್ಧನ್ ಹೇಳಿದ್ದಾರೆ. ಇಂದು ಸಚಿವರ ಕೊರೋನಾ ವರ್ಚುವಲ್ ಸಭೆಯಲ್ಲಿ ಹರ್ಷವರ್ಧನ್ ಈ ಮಾತನ್ನು ಪುನರುಚ್ಚರಿಸಿದ್ದಾರೆ. ಕೊರೋನಾ ಪ್ರಕರಣ ತಗ್ಗಿದ ಕಾರಣ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ. ಇದರ ನಡುವೆ ಪ್ರಕರಣ ಕೊಂಚ ಏರಿಕೆಯಾಗಿದೆ. ಜನರ ನಿರ್ಲಕ್ಷ್ಯ ಮತ್ತೊಂದು ಅಪಾಯವನ್ನು ತಂದೊಡ್ಡಲಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ. ಸಭೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣದ ನಿರ್ವಹಣೆ ಮತ್ತು ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನದ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಹರ್ಷವರ್ಧನ್ ಮೆಚ್ಚುಗೆ ವ್ಯಕ್ತಪಡಿಸಿದರು. 

ಭಾರತಕ್ಕೆ ಗುಡ್‌ ನ್ಯೂಸ್‌ ಕೊಟ್ಟ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್!.

ಕಳೆದ 24 ಗಂಟೆಗಳಲ್ಲಿ ನಮ್ಮಲ್ಲಿ ಕೇವಲ 46,148 ಪ್ರಕರಣಗಳು ಕಂಡು ಬಂದಿದ್ದು, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,72,994 ಕ್ಕೆ ಗಣನೀಯವಾಗಿ ಇಳಿಕೆಯಾಗಿದೆ. ಚೇತರಿಕೆ ದರ ಸ್ಥಿರವಾಗಿ ಏರಿಕೆಯಾಗುತ್ತಿದೆ ಮತ್ತು ಇಂದು ಇದು ಶೇ 96.80 ಕ್ಕೆ ಹೆಚ್ಚಳವಾಗಿದೆ. 24 ಗಂಟೆಗಳಲ್ಲಿ 58,578 ಸೋಂಕಿತರು ಗುಣಮುಖರಾಗಿದ್ದಾರೆ. ಸತತ 46 ನೇ ದಿನವಾದ ಇಂದು ಹೊಸ ಪ್ರಕರಣಗಳಿಗಿಂತ ಚೇತರಿಕೆಯಾಗುತ್ತಿರುವ ಸಂಖ್ಯೆ ಹೆಚ್ಚಾಗಿದೆ. ದೈನಂದಿನ ಪಾಸಿಟಿವಿಟಿ ದರ ಶೇ 2.94 ರಷ್ಟಿದ್ದು, ಮರಣ ಪ್ರಮಾಣ ಶೇ 1.30 ರಷ್ಟಿದೆ ಮತ್ತು ವಾರದ ಪಾಸಿಟಿವಿಟಿ ದರ ಶೇ 2.94 ರಷ್ಟಿದ್ದು, ಕಳೆದ 21 ದಿನಗಳಿಂದ ಶೇ 5 ಕ್ಕಿಂತ ಕಡಿಮೆ ಪ್ರಮಾಣ ದಾಖಲಾಗಿದೆ ಎಂದು ಹರ್ಷ ವರ್ಧನ್ ಹೇಳಿದರು.

ಕೋವಿಡ್ – 19 ಲಸಿಕೆ ಅಭಿಯಾನದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ ಮತ್ತು ಈವರೆಗೆ ಅಮೆರಿಕಾಗಿಂತಲೂ ಹೆಚ್ಚು ಕೋವಿಡ್ ಲಸಿಕೆ ಡೋಸ್ ಗಳನ್ನು ಹಾಕಲಾಗಿದೆ. ಅಮೆರಿಕಾದಲ್ಲಿ 2020ರ ಡಿಸೆಂಬರ್ 14 ರಿಂದ ಕೋವಿಡ್ ಲಸಿಕೆ ಹಾಕುತ್ತಿದ್ದು, ಭಾರತದಲ್ಲಿ 2021 ರ ಜನವರಿ 16 ರಿಂದ ಈ ಅಭಿಯಾನ ಪ್ರಾರಂಭವಾಯಿತು. ಕೋವಿಡ್ – 19 ಲಸಿಕೆ ಕುರಿತು ಹೊಸ ನೀತಿಯಡಿ ಕೇಂದ್ರ ಸರ್ಕಾರ ಶೇ 75 ರಷ್ಟು ಲಸಿಕೆಗಳನ್ನು ಖರೀದಿಸಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಕೆ ಮಾಡುತ್ತಿದೆ ಎಂದು ಆರೋಗ್ಯ ಸಚಿವರು ಹೇಳಿದರು.

ವರ್ಷದ ಕೊನೆಗೆ ಎಲ್ಲ ಯುವಜನಕ್ಕೂ ಲಸಿಕೆ ಎಂದ ಆರೋಗ್ಯ ಸಚಿವ.

ಕಳೆದ 24 ಗಂಟೆಯಲ್ಲಿ 32,36,63,297  ಲಸಿಕೆ ಡೋಸ್ ಗಳನ್ನು ಹಾಕಲಾಗಿದೆ. ಇದರಲ್ಲಿ 1,01,98,257 ಆರೋಗ್ಯ ಕಾರ್ಯಕರ್ತರು  ಮೊದಲ ಡೋಸ್ ಪಡೆದುಕೊಂಡಿದ್ದಾರೆ ಮತ್ತು  72,07,617 ಮಂದಿ  ಎರಡನೇ ಡೋಸ್ ಗಳನ್ನು ಹಾಕಿಸಿಕೊಂಡಿದ್ದಾರೆ. 1,74,42,767 ಮಂದಿ ಮಂಚೂಣಿ ಕಾರ್ಯಕರ್ತರಿಗೆ  ಮೊದಲ ಹಾಗೂ 93,99,319 ಎರಡನೇ ಡೋಸ್ ಲಸಿಕೆ ಹಾಕಲಾಗಿದೆ ಮತ್ತು 18 ರಿಂದ 44 ವಯೋಮಿತಿಯೊಳಗಿನ 8,46,51,696 ಮಂದಿಗೆ ಮೊದಲ ಡೋಸ್  ಹಾಗೂ 19,01,190 ಮಂದಿಗೆ ಎರಡನೇ ಡೋಸ್ ಹಾಕಲಾಗಿದೆ. 45 ರಿಂದ 60 ವಯೋಮಿತಿ ವರೆಗಿನ 8,71,11,445 ಮಂದಿಗೆ ಮೊದಲ   1,48,12,349 ಮಂದಿಗೆ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ. 60 ವರ್ಷ ಮೇಲ್ಪಟ್ಟ 6,75,29,713 ಮಂದಿಗೆ ಮೊದಲ ಡೋಸ್   2,34,08,944 ಮಂದಿಗೆ ಎರಡನೇ ಡೋಸ್  ಲಸಿಕೆ ಹಾಕಲಾಗಿದೆ.

Follow Us:
Download App:
  • android
  • ios