ನವದೆಹಲಿ(ಏ.26): ದೆಹಲಿಯ ಜಹಾಂಗೀರ್‌ಪುರಿಯ ಸರ್ಕಾರಿ ಆಸ್ಪತ್ರೆ ಬಾಬೂ ಜಗಜೀವನ್ ರಾಮ್ ಆಸ್ಪತ್ರೆಯಲ್ಲಿ ಡಾಕ್ಟರ್ ಸೇರಿ ಒಟ್ಟು 44 ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಎಲ್ಲಾ ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಅಲ್ಲದೇ ಆಸ್ಪತ್ರೆ ಕಟ್ಟಡವನ್ನು ಸ್ಯಾನಿಟೈಸ್‌ ಮಾಡುವ ಕಾರ್ಯ ಆರಂಭವಾಗಿದೆ.

ಹೇರ್‌ ಕಟ್ಟಿಂಗ್ ಮಾಡಿಸಿದ್ದ 6 ಮಂದಿಗೆ ಕೊರೋನಾ: ಇಡೀ ಗ್ರಾಮ ಸೀಲ್‌ಡೌನ್!

ದೆಹಲಿಯ ಆರೋಗ್ಯ ಸಚಿವ ಅತ್ಯೇಂದ್ರ ಜೈನ್ ಈ ಸಂಬಂಧ ಮಾಹಿತಿ ನೀಡಿದ್ದು, ಜಹಹಾಂಗೀರ್‌ಪುರಿ ಇಲಾಖೆಯಲ್ಲಿರುವ ಜಗಜೀವನ್ ರಾಮ್ ಆಸ್ಪತ್ರೆಯ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಅಲ್ಲದೇ ಈ ಪ್ರದೇಶದಲ್ಲಿ ಹಲವಾರು ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದಿದ್ದಾರೆ.

ಇನ್ನು ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾ ವೈರಸ್‌ನಿಂದಾಗಿ ಸೀಲ್‌ಡೌನ್‌ ಆದ ೆರಡನೇ ಆಸ್ಪತ್ರೆ ಇದಾಗಿದೆ. ದೆಹಲಿಯಲ್ಲಿ ಈಗಾಗಲೇ ಪ್ಲಾಸ್ಮಾ ಥೆರಪಿ ಆರಂಭಿಸಿದ್ದು, ಇಬ್ಬರು ಈ ಚಿಕಿತ್ಸೆಯಿಂದ ಗಗುಣಮುಖರಾಗಿದ್ದಾರೆನ್ನಲಾಗಿದೆ. ಕರ್ನಾಟಕದಲ್ಲೂ ಈ ಚಿಕಿತ್ಸೆ ಆರಂಭಿಸಲು ಕೇಂದ್ರ ಪರವಾನಿಗೆ ನೀಡಿದ್ದು, ಚಿಕಿತ್ಸೆ ಆರಂಭಿಸಲಾಗಿದೆ.

ಪ್ಲಾಸ್ಮಾ ಥೆರಪಿಗೆ ದಿಲ್ಲಿಯಲ್ಲಿ ಆರಂಭದಲ್ಲೇ ಯಶಸ್ಸು!

ದೇಶದಲ್ಲೆಷ್ಟು ಕೊರೋನಾ ಪೀಡಿತರು?

ಇನ್ನು ಭಾರತದ ಆರೋಗ್ಯ ಇಲಾಖೆ ಭಾನುವಾರ ಬೆಳಗ್ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಅನ್ವಯ, ದೇಶದಲ್ಲಿ ಒಟ್ಟು 824 ಮಂದಿ ಮೃತಪಟ್ಟಿದ್ದು, 26,496 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇನ್ನು ಶನಿವಾರ ಒಂದೇ ದಿನ ಒಟ್ಟು 1990 ಪ್ರಕರಣಗಳು ಬೆಳಕಿಗೆ ಬಂದಿವೆ.