Asianet Suvarna News Asianet Suvarna News

ಗ್ರೆಟಾ ಥನ್ಬರ್ಗ್ ಟೂಲ್‌ ಕಿಟ್ ವಿವಾದ: ಬೆಂಗಳೂರಿನ ವಿದ್ಯಾರ್ಥಿನಿ ದಿಶಾ ರವಿ ಅರೆಸ್ಟ್!

ರೈತ ಹೋರಾಟ ಬೆಂಬಲಿಸಿ 18ರ ಹರೆಯದ ಸಾಮಾಜಿಕ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಮಾಡಿದ್ದ ಟ್ವೀಟ್| ಭಾರೀ ವಿವಾದ ಸೃಷ್ಟಿಸಿದ್ದ ಟೂಲ್‌ಕಿಟ್| ಟೂಲ್‌ಕಿಟ್ ವಿಚಾರ, ಬೆಂಗಳೂರಿನ 21 ವರ್ಷದ ದಿಶಾ ರವಿ ಅರೆಸ್ಟ್

21 year old climate activist Disha Ravi arrested in Bengaluru for spreading toolkit on farmers protest pod
Author
Bangalore, First Published Feb 14, 2021, 3:57 PM IST

ದೆಹಲಿಯಲ್ಲಿರುವ ರೈತ ಹೋರಾಟ ಬೆಂಬಲಿಸಿ 18ರ ಹರೆಯದ ಸಾಮಾಜಿಕ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಮಾಡಿದ್ದ ಟ್ವೀಟ್ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಅಲ್ಲದೇ ಇವರು ಟ್ವಿಟರ್‌ನಲ್ಲಿ ಹಂಚಿಕೊಂಡು ಬಳಿಕ ಡಿಲೀಟ್ ಮಾಡಿದ್ದ ಟೂಲ್‌ಕಿಟ್ ಕೂಡಾ ಭಾರೀ ವಿವಾದ ಸೃಷ್ಟಿಸಿತ್ತು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 21 ವರ್ಷದ ಯುವತಿಯನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. 

"

ಬೆಂಗಳೂರಿನ ಪ್ರಸಿದ್ಧ ಮೌಂಟ್‌ ಕಾರ್ಮೆಲ್‌ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ, ಹಾಗೂ ಫ್ರೈಡೇಸ್‌ ಫಾರ್‌ ಫ್ಯೂಚರ್‌ನ ಸಹ ಸಂಸ್ಥಾಪಕಿ 21 ವರ್ಷದ ದಿಶಾ ರವಿ ಎಂಬಾಕೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದಿಶಾ ವಿರುದ್ಧ ಗ್ರೆಟಾ ಥನ್ಬರ್ಗ್ ಶೇರ್ ಮಾಡಿದ್ದ ಟೂಲ್‌ಕಿಟ್‌ನ್ನು ಎಡಿಟ್‌ ಮಾಡಿರುವ ಆರೋಪ ಆರೋಪ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ದೇಶದ್ರೋಹಕ್ಕೆ ಕುಮ್ಮಕ್ಕು, ಕ್ರಿಮಿನಲ್‌ ಸಂಚು ಮೊದಲಾದ ಐಸಿಪಿ ಸೆಕ್ಷನ್‌ನಡಿ ದಿಶಾ ವಿರುದ್ಧ ದೂರು ದಾಖಲಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿರುವ ಪಟಿಯಾಲಾ ಹೌಸ್‌ ಕೋರ್ಟ್‌ ಈಕೆಯನ್ನು ಐದು ದಿನಗಳವರೆಗೆ ದೆಹಲಿ ಪೊಲೀಸರ ಕಸ್ಟಡಿಗೆ ವಹಿಸಿದೆ. 

ಗ್ರೆಟಾ ಹಂಚಿಕೊಂಡಿದ್ದ ಟೂಲ್‌ಕಿಟ್‌ ಗೂಗಲ್‌ ಡಾಕ್ಯುಮೆಂಟ್‌ ಮಾದರಿಯಲ್ಲಿತ್ತು. ಆದರೆ ಅಪ್ಲೋಡ್‌ ಮಾಡಿದ ಕೆಲವೇ ನಿಮಿಷಗಳಲ್ಲಿ ಅದನ್ನು ಎಡಿಟ್‌ ಮಾಡಲಾಗಿತ್ತು. ಗ್ರೆಟಾ ಹಂಚಿಕೊಂಡ ಈ ಟೂಲ್‌ಕಿಟ್‌ ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ, ದೆಹಲಿ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದರು. ಅಲ್ಲದೇ ಗ್ರೆಟಾ ಶೇರ್ ಮಾಡಿದ್ದ ಮೂಲ ದಾಖಲೆಯ ಮಾಹಿತಿ ನೀಡುವಂತೆ ಕೋರಿ ಗೂಗಲ್‌ಗೆ ಪತ್ರವನ್ನೂ ಬರೆದಿದ್ದರು. 

ಟೂಲ್‌ಕಿಟ್‌ ರಚನೆ ಮಾಡಲು ಬಳಸಿದ ಸಾಮಾಜಿಕ ಜಾಲತಾಣಗಳ ಖಾತೆ, URL ನೀಡುವಂತೆಯೂ ಮನವಿ ಮಾಡಿದ್ದರು. ಸದ್ಯ ಗೂಗಲ್‌ ನೀಡಿದ ಮಾಹಿತಿಯನ್ನು ಆಧರಿಸಿ ದಿಶಾಳನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ದಿಶಾ ಮೊಬೈಲ್‌ ವಶಕ್ಕೆ ಪಡೆಡದಿರುವ ದೆಹಲಿ ಪೊಲೀಸರ ವಿಶೇಷ ತಂಡ ಡೇಟಾ ತನಿಖೆ ನಡೆಸಲಿದೆ. 

Follow Us:
Download App:
  • android
  • ios