ಶ್ರೀನಗರ[ಫೆ.27]: ಪುಲ್ವಾಮಾ ದಾಳಿ ಬಳಿಕ, ಗಡಿ ದಾಟಿದ್ದ ಭಾರತೀಯ ವಾಯು ಸೇನೆ ಪಾಕ್ ನಲ್ಲಿದ್ದ ಉಗ್ರರ ಕ್ಯಾಂಪ್ ಗಳನ್ನು ಧ್ವಂಸಗೊಳಿಸಿತ್ತು. ಹೀಗಾಘಿ ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದಲ್ಲದೆ, ಯುದ್ಧವಾಗುವ ಸಾಧ್ಯತೆಗಳಿತ್ತು. ಹೀಗಿರುವಾಗಲೇ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ವಾಯುಪಡೆಯ ಮಿಗ್-21 ಯುದ್ಧವಿಮಾನ ಇಂದು ಬೆಳಿಗ್ಗೆ ಪತನಗೊಂಡಿದೆ. ಈ ದುರಂತದಲ್ಲಿ ಇಬ್ಬರು ಫೈಟರ್ ಜೆಟ್ ಪೈಲೆಟ್‍ಗಳು ಮೃತಪಟ್ಟಿದ್ದಾರೆ.

ಪುಲ್ವಾಮಾ ಭಯೋತ್ಪಾದಕರ ದಾಳಿ ನಂತರ ಪ್ರತೀಕಾರದ ಕ್ರಮವಾಗಿ ಭಾರತೀಯ ವಾಯುಪಡೆ ಪಾಕ್ ಆಕ್ರಮಿತ ಕಾಶ್ಮೀರದ ಬಾಲಕೋಟ್‍ಗೆ ನುಗ್ಗಿ ಜೈಷ್ ಉಗ್ರರ ಅಡಗುತಾಣ ಮತ್ತು ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಿತು.

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆಯು ಪಾಕ್ ಆಕ್ರಮಿತ ಕಾಶ್ಮೀರದ ಬಾಲಕೋಟ್‍ಗೆ ನುಗ್ಗಿ ಜೈಷ್ ಉಗ್ರರ ಅಡಗುತಾಣ ಮತ್ತು ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ಇದಾದ ಬಳಿಕ ಎದುರಾಗಬಹುದಾದ ಪರಿಸ್ಥಿತಿಯನ್ನು ನಿಭಾಯಿಸಲು ಭಾರತವು ಗಡಿ ಪ್ರದೆಶದಲ್ಲಿ ಮಿಗ್ ವಿಮಾನಗಳನ್ನು ಪಹರೆಗಾಗಿ ಇಟ್ಟಿದ್ದು, ಇವುಗಳು ಗಸ್ತು ಹಾರಾಟ ನಡೆಸುತ್ತಿದ್ದವು. ಆದರೆ ಇಂದು ಬೆಳಗ್ಗೆ ಗಸ್ತು ನಿರ್ವಹಣೆ ಕರ್ತವ್ಯದಲ್ಲಿದ್ದ ಮಿಗ್-21 ಯುದ್ಧ ವಿಮಾನ ತಾಂತ್ರಿಕ ದೋಷದಿಂದ ಬದ್ಗಾಮ್ ಜಿಲ್ಲೆಯಲ್ಲಿ ಪತನಗೊಂಡಿದೆ. ಇಬ್ಬರು ಪೈಲೆಟ್‍ಗಳೂ ಈ ದುರ್ಘಟನೆಯಲ್ಲಿ ಹುತಾತ್ಮರಾಗಿದ್ದಾರೆ.