ಮುಂಬೈ(ಏ.08): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಮಾತೋಶ್ರೀ ನಿವಾಸದ ಸಮೀಪದ ಚಹಾ ವ್ಯಾಪಾರಿಗೆ ಕೊರೋನಾ ದೃಢಪಟ್ಟಿದೆ. ಉದ್ಧವ್‌ ಠಾಕ್ರೆ ಅವರ ಭದ್ರತಾ ತಂಡದ 160 ಸದಸ್ಯರನ್ನು ಪೂರ್ವ ಬಾಂದ್ರಾದಲ್ಲಿ ಕ್ವಾರಂಟೈನ್‌ಗೆ ಗುರಿಪಡಿಸಲಾಗಿದೆ.

ಅವರಿಂದ ಮಾದರಿಗಳನ್ನು ಸಂಗ್ರಹಿಸಿ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಮಾತೋಶ್ರೀ ನಿವಾಸಕ್ಕೆ ನಿಯೋಜಿಸಲಾಗಿದ್ದ ಎಲ್ಲಾ ಸಿಬ್ಬಂದಿಗಳನ್ನು ಬದಲಾಯಿಸಲಾಗಿದೆ.

ಈ ಮಧ್ಯೆ ಉದ್ಧವ್ ಠಾಕ್ರೆ ಚಾಲಕನನ್ನು ಬಿಟ್ಟು ತಾವೇ ಕಾರು ಚಲಾಯಿಸಿ ಗಮನಸೆಳೆದಿದ್ದಾರೆ.

"