ಭಾರತೀಯ ರೈಲ್ವೆ ಇದೀಗ ಅಗ್ನಿವೀರರಿಗೂ ಭರ್ಜರಿ ಕೊಡುಗೆಯನ್ನು ನೀಡಿದೆ. ಲೆವಲ್‌-1 ಹುದ್ದೆಗಳಲ್ಲಿ ಶೇ.10ರಷ್ಟು ಮೀಸಲಾತಿ ಮತ್ತು ಲೆವಲ್‌-2 ಹಾಗೂ ಗೆಜೆಟೆಡ್‌ ಅಲ್ಲದ ಹುದ್ದೆಗಳಲ್ಲಿ ಶೇ.5ರಷ್ಟು ಸಮಾನಾಂತರ ಮೀಸಲಾತಿ ಸೇರಿದಂತೆ ಒಟ್ಟು ಶೇ.15ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ದೇಶದಲ್ಲೇ ಅತಿ ಹೆಚ್ಚು ಉದ್ಯೋಗಗಳನ್ನು ನೀಡಿರುವ ಭಾರತೀಯ ರೈಲ್ವೆ ಇದೀಗ ಅಗ್ನಿವೀರರಿಗೂ ಭರ್ಜರಿ ಕೊಡುಗೆಯನ್ನು ನೀಡಿದೆ. ಲೆವಲ್‌-1 ಹುದ್ದೆಗಳಲ್ಲಿ ಶೇ.10ರಷ್ಟು ಮೀಸಲಾತಿ ಮತ್ತು ಲೆವಲ್‌-2 ಹಾಗೂ ಗೆಜೆಟೆಡ್‌ ಅಲ್ಲದ ಹುದ್ದೆಗಳಲ್ಲಿ ಶೇ.5ರಷ್ಟು ಸಮಾನಾಂತರ ಮೀಸಲಾತಿ ಸೇರಿದಂತೆ ಒಟ್ಟು ಶೇ.15ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಈ ಮೀಸಲಾತಿಯೂ ಸಹ ಮಾಜಿ ಸೈನಿಕರು, ಪಿಡಬ್ಲ್ಯುಬಿಡಿ (PWBD)ಮತ್ತು ಸಿಸಿಎಎಗಳಿಗೆ (CCAA)ನೀಡುವ ಮೀಸಲಾತಿಯಂತೆಯೇ ಇರಲಿದೆ. ಅಲ್ಲದೇ ಅಗ್ನಿವೀರರಿಗೆ ವಯೋಮಾನದಲ್ಲಿ ಸಡಿಲಿಕೆಯನ್ನು ಸಹ ಘೋಷಿಸಲಾಗಿದ್ದು, ಮೊದಲ ಅಗ್ನಿವೀರ ತಂಡಕ್ಕೆ 5 ವರ್ಷ ಮತ್ತು ಉಳಿದವುಗಳಿಗೆ 3 ವರ್ಷ ಸಡಿಲಿಕೆ ಘೋಷಣೆ ಮಾಡಲಾಗಿದೆ. ಅಲ್ಲದೇ ವಿವಿಧ ಸಮುದಾಯಗಳಿಗೆ ಸಂಬಂಧಿಸಿದಂತೆ ಈ ಸಡಿಲಿಕೆಯಲ್ಲಿ ಬದಲಾವಣೆಯಾಗಲಿದೆ. ಈ ಕುರಿತಾಗಿ ರೈಲ್ವೆ ಬೋರ್ಡ್‌ (Railway Board) ಈಗಾಗಲೇ ಎಲ್ಲಾ ಪ್ರಧಾನ ವ್ಯವಸ್ಥಾಪಕರಿಗೂ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ. 4 ವರ್ಷಗಳ ಕಾಲ ಅಗ್ನಿವೀರರಾಗಿ (Agniveer) ಸೇವೆ ಪೂರ್ಣಗೊಳಿಸಿದವರಿಗೆ ಮಾತ್ರ ಈ ಮೀಸಲಾತಿ ಅನ್ವಯವಾಗಲಿದೆ.

ಅಗ್ನಿವೀರ ನೇಮಕಕ್ಕೆ ಆನ್‌ಲೈನ್‌ ಪರೀಕ್ಷೆ ಶುರು: ಏ.27ರವರೆಗೆ ದೇಶಾದ್ಯಂತ ಪರೀಕ್ಷೆ

ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿ ಮಾಡಿದ ಅಗ್ನಿಪಥ (Agnipath)ಯೋಜನೆಯ ಪ್ರಕಾರ ನೇಮಕಗೊಂಡ ಅಗ್ನಿವೀರದಲ್ಲಿ ಶೇ.25ರಷ್ಟು ಮಂದಿ ಸೇನೆಗೆ ನೇಮಕಗೊಂಡರೆ, ಶೇ.75ರಷ್ಟು ಜನರನ್ನು ನಿರ್ಗಮನ ವೇತನದೊಂದಿಗೆ ಹೊರಕಳಿಸಲಾಗುತ್ತದೆ. ಇವರಿಗೆ ನೆರವಾಗಲು ರೈಲ್ವೇ ಇದೀಗ ಮುಂದಾಗಿದೆ.

ಅಗ್ನಿವೀರ ಪಡೆಯನ್ನು ಹಿಜಡಾಗಳ ಸೇನೆ ಎಂದು ಕರೆದ ಬಿಹಾರ ಸಚಿವ