12 ವರ್ಷದ ಬಾಲಕನಿಂದ ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಜೀವ ಬೆದರಿಕೆ, ಪೊಲೀಸ್ ಕೇಸ್ ದಾಖಲು
ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಬುಧವಾರ ಸಂಜೆಯ ವೇಳೆಗೆ ಜೀವ ಬೆದರಿಕೆ ಕರೆ ಬಂದಿದೆ. ಆದರೆ, ಈ ಕರೆ ಬಂದಿರುವುದು 14 ವರ್ಷದ ಬಾಲಕನಿಂದ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ.
ತಿರುವನಂತಪುರಂ: ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಜೀವ ಬೆದರಿಕೆ ಕರೆ ಬಂದಿದೆ. ಬುಧವಾರ ಸಂಜೆ ಪೊಲೀಸ್ ಪ್ರಧಾನ ಕಛೇರಿಯ ನಿಯಂತ್ರಣ ಕೊಠಡಿಗೆ ಕರೆ ಬಂದಿದ್ದು, ಪೊಲೀಸ್ ಪಡೆಗಳನ್ನು ಹೈ ಅಲರ್ಟ್‌ನಲ್ಲಿ ಇಡಲಾಗಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ 12 ವರ್ಷದ ಬಾಲಕನಿಂದ ಜೀವ ಬೆದರಿಕೆ ಕರೆ ಬಂದಿದೆ. ಮ್ಯೂಸಿಯಂ ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಬಳಿಕ ಎರ್ನಾಕುಲಂನ 12 ವರ್ಷದ ಬಾಲಕನಿಂದ ಬೆದರಿಕೆ ಬಂದಿರುವುದು ಬೆಳಕಿಗೆ ಬಂದಿದೆ. ಈ ವಿಚಿತ್ರ ಘಟನೆಯಿಂದ ಗೊಂದಲಕ್ಕೊಳಗಾದ ಪೊಲೀಸರು ಬಾಲಕನ ಪೋಷಕರೊಂದಿಗೆ ಮಾತನಾಡಿದ್ದಾರೆ. ಪೋಷಕರ ಪ್ರಕಾರ, ಏಳನೇ ತರಗತಿಯ ವಿದ್ಯಾರ್ಥಿ ಫೋನ್‌ನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನಿಯಂತ್ರಣ ಕೊಠಡಿಗೆ ಕರೆ ಹೋಗಿತ್ತು ಎಂದು ತಿಳಿಸಿದ್ದಾರೆ. ಆದರೆ, ವಿವರಣೆಯಿಂದ ತೃಪ್ತರಾಗದ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಇದೇ ವೇಳೆ ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಬೆದರಿಕೆ ಹಾಕಲು ಬಳಸಿದ ದೂರವಾಣಿ ಸಂಖ್ಯೆ ವಿರುದ್ಧ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118(ಬಿ) ಮತ್ತು 120(ಒ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 118(ಬಿ) ಪೊಲೀಸ್, ಅಗ್ನಿಶಾಮಕ ದಳ ಅಥವಾ ಇತರ ಯಾವುದೇ ಅಗತ್ಯ ಸೇವೆಯನ್ನು ದಾರಿತಪ್ಪಿಸಲು ಉದ್ದೇಶಪೂರ್ವಕವಾಗಿ ವದಂತಿಗಳನ್ನು ಹರಡುವುದು ಅಥವಾ ಸುಳ್ಳು ಎಚ್ಚರಿಕೆಗಳನ್ನು ನೀಡುವುದರೊಂದಿಗೆ ವ್ಯವಹರಿಸುತ್ತದೆ ಮತ್ತು ಸೆಕ್ಷನ್ 120(ಒ) ಪುನರಾವರ್ತಿತ ಅಥವಾ ಅನಪೇಕ್ಷಿತ ಅಥವಾ ಅನಾಮಧೇಯ ಕರೆ, ಪತ್ರ, ಬರವಣಿಗೆ, ಸಂದೇಶ, ಇ-ಮೇಲ್ ಅಥವಾ ಮೆಸೆಂಜರ್ ಸೇರಿದಂತೆ ಯಾವುದೇ ಸಂವಹನ ವಿಧಾನದ ಮೂಲಕ ಯಾವುದೇ ವ್ಯಕ್ತಿಗೆ ತೊಂದರೆ ಉಂಟುಮಾಡುವ ಬಗ್ಗೆ ವ್ಯವಹರಿಸುತ್ತದೆ.
Rajeev Chandrasekhar:ಭಯೋತ್ಪಾದಕರಿಗೆ ಪಿಣರಾಯಿ ವಿಜಯನ್‌ರಿಂದ ಕೇರಳಕ್ಕೆ ರೆಡ್ ಕಾರ್ಪೆಟ್ ಸ್ವಾಗತ!
ಫೋನ್‌ನಲ್ಲಿ ಮಾತನಾಡಿದ ಬಾಲಕ ಸಿಎಂ ವಿಜಯನ್‌ಗೆ ಬೈದರಿವುದು ಮಾತ್ರವಲ್ಲದೆ, ಅವರಿಗೆ ಜೀವ ಬೆದರಿಕೆ ನೀಡುವ ಮಾತನ್ನೂ ಆಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕ ಈ ಕುರಿತಾಗಿ ಕೌನ್ಸೆಲಿಂಗ್ ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಅಚಾನಕ್ ಆಗಿ ಕರೆ ಹೋಗಿದ್ದರೂ, ಸಿಎಂಗೆ ಜೀವ ಬೆದರಿಕೆ ನೀಡುವ ಮಾತನ್ನಾಡಿರುವುದರ ಹಿಂದಿನ ಕಾರಣವೇನು ಅನ್ನೋದನ್ನೂ ಪೊಲೀಸರು ಪತ್ತೆ ಮಾಡುತ್ತಿದ್ದಾರೆ.