ನವದೆಹಲಿ(ಸೆ.24): ಶಾಲೆಗಳಲ್ಲಿ ಸಾರ್ವಜನಿಕ ಉದ್ದಿಮೆಗಳು ನಿರ್ಮಿಸಿದೆ ಎನ್ನಲಾದ ಶೇ.11ರಷ್ಟುಶೌಚಾಲಯಗಳು ಇಲ್ಲ ಎಂದು ಸಂಸತ್ತಿನ ಮುಂದೆ ಇಡಲಾದ ಮಹಾಲೇಖಪಾಲಕರ ವರದಿಯಲ್ಲಿ ಗೊತ್ತಾಗಿದೆ.

ವರದಿಯ ಪ್ರಕಾರ ಉದ್ದಿಮೆಗಳು ಹೇಳಿಕೊಂಡ ಶೇ.11ರಷ್ಟುಶೌಚಾಲಯಗಳು ನಿರ್ಮಾಣವಾಗಿಲ್ಲ ಅಥವಾ ಅರ್ಧ ನಿರ್ಮಾಣವಾಗಿದೆ. ಇನ್ನು ಶೇ.30ರಷ್ಟುಶೌಚಾಲಯಗಳು ಉಪಯೋಗಕ್ಕೆ ಲಾಯಕ್ಕಿಲ್ಲ ಎಂದು ಹೇಳಿದೆ.

ಸರ್ಕಾರಿ ಶಾಲೆಗಳಲ್ಲಿ ಹುಡುಗ ಹಾಗೂ ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಲು ಸಾರ್ವಜನಿಕ ಉದ್ದಿಮೆಗಳ ಸಹಕಾರದೊಂದಿಗೆ ಕೇಂದ್ರ ಸರ್ಕಾರ ‘ಸ್ವಚ್ಛ ವಿದ್ಯಾಲಯ ಅಭಿಯಾನ’ವನ್ನು ಜಾರಿಗೆ ತಂದಿತ್ತು. ಇದರನ್ವಯ ಸಾರ್ವಜನಿಕ ಉದ್ದಿಮೆಗಳು ತಮ್ಮ ಸಾರ್ವಜನಿಕ ಹೊಣೆಗಾರಿಕೆ ನಿಧಿಯಿಂದ ಶೌಚಾಲಯ ನಿರ್ಮಾಣ ಮಾಡಬೇಕಿತ್ತು.