Asianet Suvarna News Asianet Suvarna News

ಮೋದಿ ಭೇಟಿಯಾಗಲು ಸಂಸತ್ತಿಗೆ ಬಂದ 10 ವರ್ಷದ ಪೋರಿ: ಪ್ರಶ್ನೆ ಕೇಳಿ ನಕ್ಕ ಪ್ರಧಾನಿ!

* ಪಿಎಂ ಭೇಟಿಯಾದ 10 ವರ್ಷದ ಪೋರಿ: ಪ್ರಶ್ನೆಗಳ ಮಳೆ

* ಮಗುವಿನ ಪ್ರಶ್ನೆ ಕೇಳಿ ನಕ್ಕ ಪಿಎಂ ಮೋದಿ

* ಮೇಲ್‌ ಕಳುಹಿಸಿದ ಬಾಲಕಿಗೆ ಮೋದಿ ಭೇಟಿಯಾಗುವ ಅವಕಾಶ

10 year old Anisha arrives in Parliament to meet PM Modi PM laughs at baby girl questions pod
Author
Bangalore, First Published Aug 12, 2021, 2:36 PM IST
  • Facebook
  • Twitter
  • Whatsapp

ನವದೆಹಲಿ(ಆ.12): ಪ್ರಧಾನಿ ಮೋದಿ 10 ವರ್ಷದ ಪುಟ್ಟ ಹುಡುಗಿಯನ್ನು ಭೇಟಿಯಾಘಿದ್ದಾರೆ. ಈ ಬಾಲಕಿ ಬೇರಾರೂ ಅಲ್ಲ ಅಹ್ಮದ್ ನಗರ ಸಂಸದ ಡಾ.ಸುಜಯ್ ವಿ. ಕೆ ಪಾಟೀಲ್ ಅವರ ಪುತ್ರಿ ಅನಿಶಾ. ಮಾಧ್ಯಮ ವರದಿಗಳ ಪ್ರಕಾರ, ಅನಿಶಾ ತನ್ನ ತಂದೆಯ ಲ್ಯಾಪ್ ಟಾಪ್ ನಿಂದ ಪಿಎಂ ಮೋದಿಗೆ ಮೇಲ್ ಕಳುಹಿಸಿದ್ದಳು. ಈಕೆ ಈ ಮೇಲ್‌ನಲ್ಲಿ ಹಲೋ ಸರ್. ನಾನು ಅನಿಶಾ ಮತ್ತು ನಾನು ನಿಮ್ಮನ್ನು ಭೇಟಿಯಾಗಲು ಬಯಸುತ್ತೇನೆ ಎಂದಿದ್ದಾರೆ
ಓಡಿ ಬಾ ಕಂದ ಎಂದ ನರೇಂದ್ರ ಮೋದಿ

ಓಡೋಡಿ ಬಾ ಕಂದ

ಪಿಎಂ ಮೋದಿ ಅನಿಶಾ ಮೇಲ್‌ಗೆ ಉತ್ತರಿಸಿದ್ದಾರೆ. ಈ ಮೇಲ್‌ನಲ್ಲಿ ಓಡೋಡಿ ಬಾ ಕಂದ ಎಂದು ಬರೆದಿದ್ದಾರೆ. ಇದಾದ ಬಳಿ ವಿ. ಕೆ ಪಾಟೀಲ್ ಸಂಸತ್ ಭವನಕ್ಕೆ ಬಂದಾಗ, ಪಿಎಂ ಮೋದಿ ಅನಿಶಾ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಬಳಿಕ ಅನಿಶಾ, ಪಿಎಂ ಮೋದಿಯವರನ್ನು ಭೇಟಿಯಾಗಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಸುಮಾರು 10 ನಿಮಿಷಗಳ ಭೇಟಿ

ಅನಿಶಾ ಮತ್ತು ಪಿಎಂ ಮೋದಿಯವರ ಈ ಭೇಟಿ ಸುಮಾರು 10 ನಿಮಿಷಗಳ ಕಾಲ ನಡೆದಿದೆ. ಈ ವೇಳೆ ಪಿಎಂ ಮೋದಿ ಅನಿಶಾಗೆ ಚಾಕಲೇಟ್ ನೀಡಿದ್ದಾರೆ. ಬಳಿಕ ಅನಿಶಾ ಪ್ರಧಾನಿ ಮೋದಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಮೊದಲ ಪ್ರಶ್ನೆ, ನೀವು ಇಲ್ಲಿ ಕುಳಿತುಕೊಳ್ಳುವುದಾ? ಎಂದಾಗಿತ್ತು. ಬಳಿಕ ಇದು ನಿಮ್ಮ ಆಫೀಸಾ? ಇದೆಷ್ಟು ದೊಡ್ಡ ಕಚೇರಿ? ಎಂದು ಅಚ್ಚರಿಯಿಂದ ಕೇಳಿದ್ದಾರೆನ್ನಲಾಗಿದೆ.

ಇದಕ್ಕುತ್ತರಿಸಿದ ಪ್ರಧಾನಿ ಮೋದಿ ಇದು ನನ್ನ ಶಾಶ್ವತ ಕಚೇರಿಯಲ್ಲ, ನಿಮ್ಮನ್ನು ಭೇಟಿ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಉತ್ತರಿಸಿದ್ದಾರೆ.

ನೀವು ಯಾವಾಗ ದೇಶದ ರಾಷ್ಟ್ರಪತಿಯಾಗುತ್ತೀರಿ?

ಇನ್ನು ಈ ಎಲ್ಲಾ ಸವಾಲುಗಳ ಮಧ್ಯೆ ಅನಿಶಾ, ಪ್ರಧಾನಿ ಮೋದಿ ಬಳಿ  ನೀವು ಈ ದೇಶದ ರಾಷ್ಟ್ರಪತಿ ಆಗೋದು ಯಾವಾಗ? ಎಂದು ಕೇಳಿದ್ದಾರೆ. ಇದನ್ನು ಕೆಳಿ ಮೋದಿ ನಕ್ಕಿದ್ದಾರೆ. ಇಷ್ಟೇ ಅಲ್ಲದೇ ನೀವು ಗುಜರಾತ್‌ನವರಾ ಎಂದು ಕೂಡಾ ಅನಿಶಾ ಮೋದಿಗೆ ಕೇಳಿದ್ದಾಳೆ. 

Follow Us:
Download App:
  • android
  • ios