Asianet Suvarna News Asianet Suvarna News

Bengaluru News: ಸಮಾಜಮುಖಿ ಕಾರ್ಯಗಳಲ್ಲಿ ಲಕ್ಷ್ಮೇಶ ಫೌಂಡೇಶನ್ ಮುಂಚೂಣಿ

  • ಸಮಾಜಮುಖಿ ಕಾರ್ಯಗಳಲ್ಲಿ ಲಕ್ಷ್ಮೇಶ ಫೌಂಡೇಶನ್ ಮುಂಚೂಣಿ
  • ಕ್ಯಾನ್ಸರ್‌ ರೋಗಿಗಳು ಮತ್ತು ಆರೈಕೆದಾರರಿಗೆ ನೆರವು, ಹಿರಿಯ ನಾಗರಿಕರು, ಬಡ ಮಕ್ಕಳಿಗೆ ಸೌಲಭ್ಯ
Lakshmesh Foundation is a leader in social work bengaluru rav
Author
First Published Sep 14, 2022, 4:19 AM IST

ಬೆಂಗಳೂರು (ಸೆ.14) : ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಯ ನೋವು ಒಂದೆಡೆಯಾದರೇ ಅವರ ಆರೈಕೆ ಮಾಡುವವರನ್ನು ಆತಂಕ, ಸಂಕಟ, ನೋವು ಮತ್ತೊಂದೆಡೆ ಕಾಡುತ್ತಿರುತ್ತದೆ. ಅಂತಹ ಆರೈಕೆದಾರರಿಗೆ ಸಾಂತ್ವನ ಮಾಡಿ, ಭಾವನಾತ್ಮಕ ಬೆಂಬಲ ನೀಡಿ, ಆತ್ಮವಿಶ್ವಾಸ ಹೆಚ್ಚಿಸಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವ ಜತೆಗೆ ರೋಗಿಗಳ ಮಕ್ಕಳಿಗೆ ಶಿಕ್ಷಣ ನೆರವು ನೀಡುವ ಹಾದಿಯಲ್ಲಿ ಬೆಂಗಳೂರಿನ ಲಕ್ಷ್ಮೇಶ ಫೌಂಡೇಶನ್ ಸಾಗುತ್ತಿದೆ.

ಬಳಸಿದ ಎಣ್ಣೆಯನ್ನೆ ಮತ್ತೆ ಮತ್ತೆ ಬಳಸ್ತಿದೀರಾ? ಆರೋಗ್ಯಕ್ಕೆ ಅಪಾಯವಿದೆ ಎಚ್ಚರ

ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ ರೋಗಿಗಳ ಆರೈಕೆದಾರ ನೆರವು ಮತ್ತು ಹಿರಿಯ ನಾಗರೀಕರ ಸೇವಾ ಕಾರ್ಯಗಳಲ್ಲಿ ಲಕ್ಷ್ಮೇಶ ಫೌಂಡೇಶನ್ ಮುಂಚೂಣಿಯಲ್ಲಿದೆ. 2020ರಲ್ಲಿ ಪತ್ರಕರ್ತೆ ಮತ್ತು ಉದ್ಯಮಿ ಉಷಾ ನಾರಾಯಣ್‌ ಅವರು ಕ್ಯಾನ್ಸರ್‌ ರೋಗಿಗಳು ಮಾತ್ರವಲ್ಲದೇ ಅವರ ಸಂಬಂಧಿಕರು ಮತ್ತು ಆಪ್ತರಿಗೆ ವಿಶ್ವಾಸ ತುಂಬುವ ಉದ್ದೇಶದಿಂದ ಈ ¶ೌಂಡೇಶನ್‌ ಆರಂಭಿಸಿದ್ದರು. ಬಳಿಕ ಕುಟುಂಬ ಸ್ನೇಹಿತರ ನೆರವಿನೊಂದಿಗೆ ಸಂಸ್ಥೆಯನ್ನು ಮತ್ತಷ್ಟುಸಮಾಜ ಮುಖಿ ಕಾರ್ಯಗಳಿಗೆ ವಿಸ್ತರಿಸಿಕೊಂಡಿದೆ.

¶ೌಂಡೇಶನ್‌ ಆರಂಭವಾದ ಮೊದಲ ವರ್ಷದಲ್ಲಿ ಪ್ರಮುಖವಾಗಿ ಕ್ಯಾನ್ಸರ್‌ ಆಸ್ಪತ್ರೆಗಳಲ್ಲಿ ಉಚಿತ ಆಪ್ತಸಲಹೆ, ಕ್ಯಾನ್ಸರ್‌ ಉಳ್ಳವರನ್ನು ಆರೈಕೆ ಮಾಡುವವರಿಗೆ ಉಲ್ಲಾಸಮಯ ಕಾರ್ಯಕ್ರಮಗಳ ಆಯೋಜನೆ, ಕ್ಯಾನ್ಸರ್‌ ರೋಗಿಗಳ ಮಕ್ಕಳಿಗೆ ಶಿಕ್ಷಣ ನೆರವು, ಬಳಸದ ಬಟ್ಟೆ, ಗೃಹ ಉಪಯೋಗಿ ಸಾಮಗ್ರಿಗಳ ಅಗತ್ಯವಿರುವವರಿಗೆ ವಿತರಣೆಯಂತಹ ಕಾರ್ಯಗಳನ್ನು ಕೈಗೊಂಡಿತ್ತು. ಎರಡನೇ ವರ್ಷದಲ್ಲಿ ಹಿರಿಯ ನಾಗರಿಕರತ್ತ ಗಮನ ಹರಿಸಿದ್ದು, ಹಿರಿಯ ನಾಗರಿಕರ ವಸತಿ ಗೃಹಗಳಲ್ಲಿ ಸಾಂಸ್ಕೃತಿಕ, ಕ್ರೀಡಾ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜತೆಗೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಬೇಸಿಗೆ ಶಿಬಿರ, ಕ್ಯಾನ್ಸರ್‌ ಪೀಡಿತರ ಮಕ್ಕಳಿಗೆ ಶೈಕ್ಷಣಿಕ ನೆರವು, ಮನೋರಂಜನಾ ಕಾರ್ಯಕ್ರಮಗಳನ್ನು ಕೂಡಾ ಮುಂದುವರೆಸಿಕೊಂಡು ಬಂದಿದೆ. ಇನ್ನು ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ಲಕ್ಷ್ಮೇಶ ¶ೌಂಡೇಶನ್‌ ಬಡ ಕುಟುಂಬಗಳಿಗೆ ದಿನಸಿ ಕಿಟ್‌ಗಳ ವಿತರಣೆಯನ್ನು ಮಾಡಿದೆ.

ಬಡಮಕ್ಕಳ ಶಿಕ್ಷಣ ನೆರವಿಗೆ ಸೆ.18ಕ್ಕೆ ಸ್ವರಾಮೃತ ಕಾರ್ಯಕ್ರಮ

ಬಡವರ ಪಾಲಿಗೆ ಶಿಕ್ಷಣ ಹೊರೆಯಾಗುತ್ತಿದ್ದು, ಬಡ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕವನ್ನು ಪಾವತಿಸುವ ಕೆಲಸಕ್ಕೆ ಲಕ್ಷ್ಮೇಶ ¶ೌಂಡೇಶನ್‌ ಮುಂದಾಗಿದೆ. ಈ ಸೇವಾಕಾರ್ಯಕ್ಕೆ ಸಾರ್ವಜನಿಕರನ್ನು ಒಳಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನ ಜೆ.ಪಿ.ನಗರದ ಆರ್‌.ವಿ.ಡೆಂಟಲ್‌ ಕಾಲೇಜು ಸಭಾಂಗಣದಲ್ಲಿ ಭಾನುವಾರ (ಸೆ.18) ಮಧ್ಯಾಹ್ನ 3.45ಕ್ಕೆ ಸ್ವರಾಮೃತ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

 

Breast Feeding, ಕ್ಯಾನ್ಸರ್ ಬಗ್ಗೆ ಇರಲಿ ತುಸು ಎಚ್ಚರ, ಮರೀಬೇಡಿ ಆರೋಗ್ಯದ ಕಾಳಜಿ

ವಿದುಷಿ ಲಕ್ಷ್ಮೇ ನಾಗರಾಜ್‌, ಇಂದೂ ನಾಗರಾಜ್‌, ವಿದ್ವಾನ್‌ ಶ್ರೀಹರ್ಷ ಮೈಸೂರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿದ್ವಾನ್‌ ಡಾ.ಆರ್‌.ಕೆ.ಪದ್ಮನಾಭ, ಅದಮ್ಯಚೇತನ ಸಂಸ್ಥಾಪಕರಾದ ತೇಜಸ್ವಿನಿ ಅನಂತಕುಮಾರ್‌, ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ರಾಮಚಂದ್ರ, ವಿಧಾನಪರಿಷತ್ತಿನ ಸದಸ್ಯ ಯು.ಬಿ.ವೆಂಕಟೇಶ್‌ ಭಾಗವಹಿಸಲಿದ್ದಾರೆ. ಆಸಕ್ತರು ಭಾಗವಹಿಸಿ ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲು ¶ೌಂಡೇಶನ್‌ ಮನವಿ ಮಾಡಿದೆ.

Follow Us:
Download App:
  • android
  • ios