Asianet Suvarna News Asianet Suvarna News

Oral Hygiene: ಸಿಕ್ಕಾಪಟ್ಟೆ ಮೌತ್ ವಾಶ್ ಬಳಸ್ತೀರಾ? ಈ ಸಮಸ್ಯೆ ಶುರುವಾಗ್ಬೋದು!

ಹಲ್ಲು ನೋವು ಬಂದಿದೆ ಎಂದಾಕ್ಷಣ ನಾವು ಹುಡುಕೋದು ಮೌತ್ ವಾಶನ್ನು. ಅದು ನೋವಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ನೀಡುತ್ತದೆ ನಿಜ. ಆದ್ರೆ  ಮೂಲೆಯಲ್ಲಿರುವ, ಯಾವುದೋ ಕಂಪನಿ ಮೌತ್ ವಾಶ್ ಬಳಸುವುದು ಅಪಾಯಕಾರಿ.
 

Is Mouthwash Bad for You
Author
Bangalore, First Published Mar 5, 2022, 6:02 PM IST

`ಬಾಯಿ (Mouth)ಯ ಸ್ವಚ್ಛತೆ (Clean)  ಬಹಳ ಮುಖ್ಯ. ಇದು ಕೇವಲ ಹಲ್ಲಿ (Teeth)ನ ಆರೋಗ್ಯ (Health)ಕ್ಕೆ ಸಂಬಂಧಿಸಿದ್ದಲ್ಲ ಮೌಖಿಕ ನೈರ್ಮಲ್ಯವನ್ನು ನಿರ್ಲಕ್ಷಿಸುವುದರಿಂದ ಇಡೀ ದೇಹಕ್ಕೆ ಹಾನಿಯಾಗುತ್ತದೆ. ಹಲ್ಲುಗಳು, ಒಸಡುಗಳು ಮತ್ತು ನಾಲಿಗೆ ಇತ್ಯಾದಿಗಳ ಮೇಲಿನ ಸೋಂಕು ಹೃದಯ ಮತ್ತು ಯಕೃತ್ತಿನಂತಹ ಅಂಗಗಳನ್ನು ಸಹ ಹಾನಿಗೊಳಿಸುತ್ತದೆ. ವಿಶೇಷವಾಗಿ ಈಗಾಗಲೇ ಮಧುಮೇಹದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಬಾಯಿಯ ಸ್ವಚ್ಛತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವುದು ಹೆಚ್ಚು ಮುಖ್ಯ. ಹಲ್ಲನ್ನು ಶುಚಿಗೊಳಿಸುವುದು ಮತ್ತು ನಿಯಮಿತ ತಪಾಸಣೆ ಮಾಡಿಸುವುದು ದೈಹಿಕ ಪರೀಕ್ಷೆಯಂತೆ ಒಂದಾಗಿದೆ. ಬಾಯಿಯ ನೈರ್ಮಲ್ಯಕ್ಕಾಗಿ ವಿವಿಧ ಉತ್ಪನ್ನಗಳನ್ನು ಬಳಸುತ್ತೇವೆ. ಅವುಗಳಲ್ಲಿ ಮೌತ್ ವಾಶ್ ಕೂಡ ಒಂದು. ಮೌತ್‌ವಾಶ್‌ನ ಆಯ್ಕೆ ಮತ್ತು ಬಳಕೆ ಎರಡರಲ್ಲೂ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಸ್ವಲ್ಪ ನಿರ್ಲಕ್ಷ್ಯವು ದೊಡ್ಡ ತೊಂದರೆಗೆ ಕಾರಣವಾಗಬಹುದು. ಮೌತ್ ವಾಶ್ ನಿಂದಾಗುವ ಸಮಸ್ಯೆಗಳೇನು ಎಂಬುದನ್ನು ನಾವಿಂದು ಹೇಳ್ತೇವೆ.

ಆರೋಗ್ಯ ಹಾಳು ಮಾಡ್ಬಹುದು ಮೌತ್ ವಾಶ್ 
ಮೌತ್ ವಾಶ್ ಖರೀದಿಸುವಾಗ ಜಾಗರೂಕರಾಗಿರಿ :  ಇತ್ತೀಚಿನ ದಿನಗಳಲ್ಲಿ ಬಾಯಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ದಿನಕ್ಕೆರಡು ಬಾರಿ ಹಲ್ಲುಜ್ಜುವ ಅಭ್ಯಾಸದ ಜೊತೆಗೆ ಫ್ಲೋಸ್, ಮೌತ್ ವಾಶ್ ಮೊದಲಾದ ಮೌಖಿಕ ಶುಚಿಗೊಳಿಸುವ ಉತ್ಪನ್ನಗಳ ಬಳಕೆಯೂ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಬಗೆಯ ಮೌತ್ ವಾಶ್ ಲಗ್ಗೆಯಿಟ್ಟಿದೆ. ಜಾಹೀರಾತುಗಳನ್ನು ನಂಬಿ ಹಾಗೂ ಯಾವುದೇ ಪೂರ್ವಪರ ಆಲೋಚನೆ ಮಾಡದೆ ಜನರು ಮೌತ್ ವಾಶ್ ಮನೆಗೆ ತರ್ತಾರೆ. ಅದ್ರಲ್ಲಿರುವ ಕೆಮಿಕಲ್ ಬಗ್ಗೆ ಸರಿಯಾಗಿ ತಿಳಿಯದೆ ಬಳಕೆ ಮಾಡ್ತಾರೆ. ತಪ್ಪಾದ ಮೌತ್ ವಾಶ್ ಬಳಕೆ ದೇಹಕ್ಕೆ ಹಾನಿಯುಂ ಮಾಡುತ್ತದೆ. ಹಾಗಾಗಿ ಮೌತ್ ವಾಶ್ ಖರೀದಿ ಮಾಡುವಾಗ ಎಚ್ಚರಿಕೆ ವಹಿಸಬೇಕು. 

ಮೌತ್ ವಾಶ್ ಕೆಲವು ರಾಸಾಯನಿಕಗಳನ್ನು ಹೊಂದಿರಬಹುದು. ಅದು ಬಾಯಿಯನ್ನು ಸ್ವಚ್ಛವಾಗಿಡಲು ಮತ್ತು ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳು ಇತ್ಯಾದಿಗಳನ್ನು ಹೊಡೆದೋಡಿಸಲು ಸಹಾಯ ಮಾಡುತ್ತದೆ. ಆದರೆ ಅವುಗಳ ಅತಿಯಾದ ಬಳಕೆಯು ಆರೋಗ್ಯದ ದೃಷ್ಟಿಯಿಂದ ಹಾನಿಕಾರಕವಾಗಿದೆ. ಅನೇಕ ಮೌತ್‌ವಾಶ್‌ಗಳಲ್ಲಿ ಆಲ್ಕೋಹಾಲ್ ಕೂಡ ಇರುತ್ತದೆ. ಇದು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ, ಮೌತ್ವಾಶ್ ಅನ್ನು ಆಯ್ಕೆಮಾಡುವ ಮತ್ತು ಬಳಸುವ ಮೊದಲು ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು.

Fennel Seeds Benefits: ಹೃದಯದ ಆರೋಗ್ಯಕ್ಕೆ ಸೋಂಪು ಸೇವನೆ ಬೆಸ್ಟ್

ಈ ವಸ್ತುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ : 
ಮೌತ್ ವಾಶ್ ಸಾಮಾನ್ಯವಾಗಿ 2-3 ವರ್ಷಗಳ ಮುಕ್ತಾಯ ದಿನಾಂಕವನ್ನು ಹೊಂದಿರುತ್ತದೆ. ಆದರೆ ಅನೇಕ ಜನರು ನಾಲ್ಕೈದು ವರ್ಷದ ಮೌತ್ ವಾಶ್ ಈಗಲೂ ಬಳಸ್ತಾರೆ. ಇದು ಬಹಳ ಅಪಾಯಕಾರಿ. ಆಲ್ಕೋಹಾಲ್ ಜೊತೆಗೆ ಫ್ಲೋರೈಡ್, ಹೈಡ್ರೋಜನ್ ಪೆರಾಕ್ಸೈಡ್ ಇದರಲ್ಲಿರುತ್ತದೆ. ಮುಕ್ತಾಯ ದಿನಾಂಕದ ನಂತರ ಇವುಗಳ ಬಳಕೆ  ಸಮಸ್ಯೆಗೆ ಕಾರಣವಾಗುತ್ತದೆ. 

ಮೌತ್ ವಾಶ್ ಬಣ್ಣ ಬದಲಾದಂತೆ ತೋರುತ್ತಿದ್ದರೆ ಅಥವಾ ವಿಚಿತ್ರವಾದ ವಾಸನೆ ಬಂದರೆ ತಕ್ಷಣ ಅದನ್ನು ಹೊರಹಾಕಿ.
ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮೌತ್ ವಾಶ್ ಗಳಿವೆ. ಕೆಲವು ಮೌತ್‌ವಾಶ್‌ಗಳನ್ನು ಫ್ರಿಜ್‌ನಲ್ಲಿ ಶೇಖರಿಸಿಡಬೇಕಾಗುತ್ತದೆ.  
ಪ್ಲಾಸ್ಟಿಕ್ ಬಾಟಲಿಯಲ್ಲಿ ಬರುವ ಮೌತ್‌ವಾಶ್‌ನ ಬಗ್ಗೆಯೂ ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ. ಏಕೆಂದರೆ ಕಾಲಾನಂತರದಲ್ಲಿ, ಮೌತ್‌ವಾಶ್‌ನಲ್ಲಿರುವ ಪದಾರ್ಥಗಳ ಕೊಳೆಯುವಿಕೆಯಿಂದಾಗಿ, ಬಾಟಲಿಯ ಪ್ಲಾಸ್ಟಿಕ್ ಕೂಡ ಕೆಟ್ಟ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.  
ಸೂರ್ಯನ ಬೆಳಕು ನೇರವಾಗಿ ಬೀಳುವ ಜಾಗದಲ್ಲಿ ಮೌತ್ ವಾಶ್ ಸಂಗ್ರಹಿಸಬೇಡಿ.  

ಈ 5 ದೇಸಿ ಪಾನೀಯ ಸಿಗರೇಟು , ಆಲ್ಕೋಹಾಲ್‌ಗಿಂತಲೂ ಕಿಕ್ ಕೊಡುತ್ತೆ

ಬಾಯಿಯ ದುರ್ವಾಸನೆ, ಹಲ್ಲಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ವೈದ್ಯರ ಸಲಹೆ ಬಡೆದು ಸರಿಯಾದ ಮೌತ್ ವಾಶ್ ಬಳಸಿ.  ಸಾಮಾನ್ಯ ಮೌತ್ ವಾಶ್ ಮತ್ತು ಔಷಧೀಯ ಮೌತ್ ವಾಶ್ ನಡುವೆ ವ್ಯತ್ಯಾಸವಿರುತ್ತದೆ.

ಮೌತ್ ವಾಶ್ ಬಳಕೆ ಹೇಗೆ? : ಮೊದಲು ಹಲ್ಲುಗಳನ್ನು ಸ್ವಚ್ಛವಾಗಿ ಬ್ರಶ್ ಮಾಡಬೇಕು. ಸ್ವಲ್ಪ ಸಮಯದ ನಂತ್ರ ಮೂರರಿಂದ ಐದು ಚಮಚ ಮೌತ್ ವಾಶ್ ಹಾಕಿ ಬಾಯಿಯನ್ನು ಸರಿಯಾಗಿ ಮುಕ್ಕಳಿಸಿ. ಮೌತ್ ವಾಶ್ ಬಾಯಿಯ ಚರ್ಮಕ್ಕೆ ತಾಗಬೇಕು. 30 ಸೆಕೆಂಡ್ ಗಾರ್ಗ್ಲ್ ಮಾಡಬೇಕು. ಅದನ್ನು ನುಂಗಬಾರದು. 

Follow Us:
Download App:
  • android
  • ios