ಹಾಸನ [ನ.15]: ರಾಜ್ಯದಲ್ಲಿ ಡಿಸೆಂಬರ್ 5 ರಂದು ಉಪ ಚುನಾವಣೆ ನಿಗಧಿಯಾಗಿದ್ದು, ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧರಾಗಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಹೇಳಿದರು. 

ಹಾಸನದಲ್ಲಿ ಮಾತನಾಡಿದ ದೇವೇಗೌಡರು ನಾವು  ಎಲ್ಲಾ ಕಡೆಯಲ್ಲಿಯೂ  ಸ್ಪರ್ಧೆ ಮಾಡುತ್ತೇವೆ. ಸೋಲು ಗೆಲುವು ಜನರಿಗೆ ಬಿಟ್ಟಿದ್ದು, ಏನು‌ ತೀರ್ಮಾನ ಮಾಡುತ್ತಾರೋ ಹೇಳಲಾಗದು ಎಂದರು. 

ನಾನು ಉಪ ಚುನಾವಣೆ ನಡೆಯುವ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡುತ್ತೇನೆ. ಯಡಿಯೂರಪ್ಪ ರಾಜ್ಯದಲ್ಲಿ ರಾಜೀನಾಮೆ ನೀಡಿ ಅನರ್ಹರಾದ 15 ಮಂದಿಯನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಹಾಗೇ ಮಾಡಿದಲ್ಲಿ ಚುನಾವಣೆಯ ಪಾವಿತ್ರ್ಯತೆ ಎಲ್ಲಿ ಉಳಿಯುತ್ತದೆ ಎಂದರು.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಂದೆಡೆ ಅನರ್ಹತೆ ಎತ್ತಿ ಹಿಡಿಯಲಾಗಿದೆ. ಮತ್ತೊಂದೆಡೆ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ. ಯಡಿಯೂರಪ್ಪ ಈಗಲೇ ಮಂತ್ರಿ ಮಾಡುತ್ತೇವೆ ಅನ್ನೋದು ಗೆಲ್ಲುವ ತಂತ್ರದಿಂದ ಎಂದು ಅಸಮಾಧಾನ ಹೊರಾಹಾಕಿದರು. 

ಮಂತ್ರಿ ಮಾಡುತ್ತೇವೆ ಎಂದರೆ ಜನ ಓಟ್ ಮಾಡುತ್ತಾರೆ ಎಂದು ಹೀಗೆ ಹೇಳಿದ್ದಾರೆ. ಜನರಿಗೆ ಆಸೆ ತೋರಿಸಿ ಗೆಲ್ಲೋ ತಂತ್ರಗಾರಿಕೆ ಇದು. ಜನರ ಬ್ರೈನ್ ವಾಶ್ ಮಾಡುವ ದುರುದ್ದೇಶ. ಸೋಲುವ ಭೀತಿಯಿಂದ ಯಡಿಯೂರಪ್ಪ ಎಲ್ಲರನ್ನೂ ಮಂತ್ರಿ ಮಾಡುತ್ತೇವೆ ಎಂದಿರುವುದು ದುರಾದೃಷ್ಟಕರ ಎಂದು ದೇವೇಗೌಡರು ಕಿಡಿಕಾರಿದರು.