ಹೊಳೆನರಸೀಪುರ [ನ.16]: ಆದಿ ಶಂಕರಾಚಾರ್ಯರು ಧರ್ಮವನ್ನು ರಕ್ಷಿಸುವ ಕಾರ್ಯದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂಬುದು ಇತಿಹಾಸ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡ ನುಡಿದರು.

ತಾಲೂಕಿನ ನಾಗಲಾಪುರ ಗ್ರಾಮದ ಪಂಚಲಿಂಗೇಶ್ವರ ಸ್ವಾಮಿ ದೇಗುಲ ಜೀರ್ಣೋದ್ಧಾರ, ಪುನರಷ್ಟಬಂಧ ಪ್ರತಿಷ್ಠಾಪನೆ ಕಾರ್ಯದಲ್ಲಿ  ಭಾಗವಹಿಸಿ ಮಾತನಾಡಿದ ಅವರು, ಸನಾತನ ಧರ್ಮಕ್ಕೆ ಅಪಾಯ ಬಂದಂತಹ ಸಂದರ್ಭದಲ್ಲಿ ಈಶ್ವರನ ಸ್ವರೂಪನಾದ ಆದಿ ಶಂಕರಾಚಾರ್ಯರು ಜನ್ಮ ತಾಳಿದರು. ಬಿಹಾರ, ಪಾಂಡಿಚೇರಿ, ಗೋವಾ ಮತ್ತು ಹಲವಾರು ಕಡೆಗಳಲ್ಲಿ ಸನಾತನ ಧರ್ಮಕ್ಕೆ ಧಕ್ಕೆ ಉಂಟಾದಾಗ ಧರ್ಮದ ರಕ್ಷಣೆಯಲ್ಲಿ ತೊಡಗಿದ್ದರು ಎಂದು ಸ್ಮರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶೃಂಗೇರಿಯ ವಿಧುಶೇಖರ ಭಾರತೀ ಸ್ವಾಮೀಜಿಗಳು ನಾಗಲಾಪುರ ಹಾಗೂ ಪಟ್ಟಣದಲ್ಲಿ ಆಶೀರ್ವಚನ ನೀಡುತ್ತಾ ನೂತನ ದೇವಾಲಯಗಳನ್ನು ನಿರ್ಮಿಸದೇ ಹಳೇ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಿ ದೇವರನ್ನು ಪ್ರತಿಷ್ಠಾಪನೆ ಮಾಡಿದಾಗ ಉತ್ತಮ ಕಾರ್ಯವಾಗುತ್ತದೆ ಎಂದರು.

ಅಟ್ಟಣಿಕೆ ಏರಿದ ರೇವಣ್ಣ ದಂಪತಿ

ಹೊಳೆನರಸೀಪುರ ತಾಲೂಕಿನ ನಾಗಲಾಪುರ ಗ್ರಾಮದಲ್ಲಿ ಶ್ರೀಲಕ್ಷ್ಮಣೇಶ್ವರ ದೇವಾಲಯದ ಲೋಕಾರ್ಪಣೆ ವೇಳೆ ಕಳಸ ಪ್ರತಿಷ್ಠಾನೆಗಾಗಿ ಗೋಪುರದ ಮೇಲೇರಿ ಮಾಜಿ ಸಚಿವ ರೇವಣ್ಣ ಮತ್ತು ಪತ್ನಿ ಭವಾನಿ ರೇವಣ್ಣ ಅವರು ಪೂಜೆ ಸಲ್ಲಿಸಿದರು.

ಇದಕ್ಕಾಗಿ ಅಟ್ಟಣಿಗೆ ನಿರ್ಮಿಸಲಾಗಿತ್ತು. ಶೃಂಗೇರಿ ಶ್ರೀಗಳು ಪ್ರತಿಷ್ಠಾಪನೆ ಪೂಜೆ ವೇಳೆ ಶ್ರೀಗಳ ಜೊತೆಗೇ ಗೋಪುರವೇರಿ ಪೂಜೆ ಸಲ್ಲಿಸಿದರು. ಆತಂಕದಿಂದಲೇ ಮರದ ಅಟ್ಟಣಿಗೆ ಸಹಾಯದಿಂದ ಗೋಪುರದ ಮೇಲೆ ತೆರಳಿ ಪೂಜೆ ಸಲ್ಲಿಸಲಾಯಿತು.