ವೈಟ್ ಹೌಸ್ ಪ್ರವೇಶಿಸಲು ಬೈಡೆನ್ ಸಜ್ಜು: ಹಣೆಬರಹ ನಿರ್ಧರಿಸಿದ 5 ಅಂಶಗಳಿವು!

First Published 5, Nov 2020, 11:38 AM

ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಳೆದ 4 ವರ್ಷ ಆಡಳಿತ ನಡೆಸಿದ್ದ ಟ್ರಂಪ್‌ಗೆ ಜೋ ಬೈಡೆನ್‌ ಸವಾಲು ಹಾಕಿದ್ದಾರೆ. ಹಾಗಿದ್ದಾರೆ ಯಾವ್ಯಾವ ಅಂಶಗಳು ಬೈಡೆನ್‌ರನ್ನು ಆಯ್ಕೆ ಮಾಡಲು ಕಾರಣವಾಗಬಹುದು ಇಲ್ಲಿವೆ ವಿಶ್ಲೇಷಣೆ

ಚುನಾವಣೆಗೂ ಮುನ್ನ ಟ್ರಂಪ್‌ ಆಡಳಿತಕ್ಕೆ ಕೇವಲ ಶೇ.45ರಷ್ಟುಜನರ ಮೆಚ್ಚುಗೆ ದೊರೆತಿದೆ. ಶೇ.53ರಷ್ಟುಜನರು ಟ್ರಂಪ್‌ ಆಡಳಿತವನ್ನು ಒಪ್ಪಿಲ್ಲ. ಎರಡನೇ ಬಾರಿ ಆಯ್ಕೆಯಾಗಲು ಇದು ಬಹಳ ಮುಖ್ಯ. ಎರಡನೇ ಆಯ್ಕೆಗೂ ಮುನ್ನ ಒಬಾಮಾ ಶೇ.50, ಬುಷ್‌ ಶೇ.49.5ರಷ್ಟುಜನರ ಮೆಚ್ಚುಗೆ ಹೊಂದಿದ್ದರು.

ಕೊರೋನಾ ಸಮಸ್ಯೆ ನಿಭಾಯಿಸುವಲ್ಲಿ ಟ್ರಂಪ್‌ ವಿಫಲರಾಗಿದ್ದಾರೆ. ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯಲ್ಲಿ ಅಮೆರಿಕವು ಜಗತ್ತಿನಲ್ಲೇ ನಂ.1 ಸ್ಥಾನ ಪಡೆದಿದೆ. ಕೊರೋನಾಕ್ಕಿಂತ ಮೊದಲು ಟ್ರಂಪ್‌ರ ಜನಪ್ರಿಯತೆ ಹೆಚ್ಚಿತ್ತು. ಆದರೆ, ನಂತರ ಅದು ಕಡಿಮೆಯಾಗಿದೆ. ಹೀಗಾಗಿ ಬೈಡನ್‌ ಗೆಲ್ಲುವ ಸಾಧ್ಯತೆ ಹೆಚ್ಚು.

ಟ್ರಂಪ್‌ ತಮ್ಮ ವಿರೋಧಿಗಳು ಹಾಗೂ ಮಾಧ್ಯಮಗಳ ವಿರುದ್ಧ ಯದ್ವಾತದ್ವಾ ಮಾತನಾಡುತ್ತಾರೆ. ಆದರೆ, ಬೈಡನ್‌ ತಮ್ಮ ಮಾತಿನ ಮೇಲೆ ಹಿಡಿತ ಹೊಂದಿದ್ದಾರೆ ಮತ್ತು ಎಲ್ಲರಿಗೂ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡುವ ರೀತಿಯಲ್ಲಿ ಮಾತನಾಡುತ್ತಾರೆ. ಶಾಂತ ಸ್ವಭಾವ ಹಾಗೂ ಎಲ್ಲರನ್ನೂ ಒಳಗೊಳ್ಳುವ ಗುಣ ಅಮೆರಿಕನ್ನರಿಗೆ ಇಷ್ಟ.

ನಾಲ್ಕು ವರ್ಷಗಳ ಹಿಂದಿನ ಚುನಾವಣೆಯಲ್ಲಿ ಟ್ರಂಪ್‌ರನ್ನು ಮತದಾರರು ದ್ವೇಷಿಸುತ್ತಿದ್ದರು. ಆದರೆ, ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್‌ರನ್ನು ಅದಕ್ಕಿಂತ ಹೆಚ್ಚು ದ್ವೇಷಿಸುತ್ತಿದ್ದರು. ಹೀಗಾಗಿ ಟ್ರಂಪ್‌ ಗೆದ್ದರು. ಆದರೆ, ಈ ಬಾರಿ ಟ್ರಂಪ್‌ರನ್ನು ದ್ವೇಷಿಸುವವರ ಜೊತೆಗೆ ಬೈಡನ್‌ರನ್ನು ಇಷ್ಟಪಡುವವರು ಸಾಕಷ್ಟುಸಂಖ್ಯೆಯಲ್ಲಿದ್ದಾರೆ.

ಎರಡು ದಶಕಗಳಿಂದ ಅಮೆರಿಕದ ಹಿರಿಯ ನಾಗರಿಕರ ಒಲವು ಡೆಮಾಕ್ರೆಟಿಕ್‌ ಪಕ್ಷದ ಪರ ಇಲ್ಲ. ರಿಪಬ್ಲಿಕನ್‌ ಪಕ್ಷದ ಟ್ರಂಪ್‌ 2016ರಲ್ಲಿ ಇವರ ಶೇ.52ರಷ್ಟುಮತ ಪಡೆದಿದ್ದರು. ಆದರೆ, ಈಗ ಮತ್ತೆ ಡೆಮಾಕ್ರೆಟಿಕ್‌ ಪಕ್ಷದತ್ತ ವೃದ್ಧರು ವಾಲಿದಂತಿದೆ. ಸಮೀಕ್ಷೆಯಲ್ಲಿ ಶೇ.42ರಷ್ಟುವೃದ್ಧರು ಮಾತ್ರ ಟ್ರಂಪ್‌ ಪರ ಒಲವು ತೋರಿದ್ದಾರೆ.