ಭಾರತದ ಬೆನ್ನಲ್ಲೇ ಚೀನಾಗೆ ಶಾಕ್ ಕೊಟ್ಟ ಅಮೆರಿಕ: ತತ್ತರಿಸಿದ ಡ್ರ್ಯಾಗನ್!
ಲಡಾಖ್ ಗಡಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಸೇನೆಯ ಇಪ್ಪತ್ತು ಯೊಧರು ಹುತಾತ್ಮರಾಗಿದ್ದರು. ಇದಾದ ಬಳಿಕ ದೇಶಾದ್ಯಂತ ಚೀನಾ ನಿರ್ಮಿತ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಕೂಗು ಎದ್ದಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಭಾರತ ಸರ್ಕಾರ ಟಿಕ್‌ಟಾಕ್, ಶೇರ್ ಇಟ್, ಹೆಲೋ ಸೇರಿದಂತೆ ಚೀನಾದ ಒಟ್ಟು 59 App ಗಳನ್ನು ಬ್ಯಾನ್ ಮಾಡಿತ್ತು. ಭಾರತದ ಈ ಡಿಜಿಟಲ್ ಸ್ಟ್ರೈಕ್ ಬೆನ್ನಲ್ಲೇ ಚೀನಾಗೆ ಅಮೆರಿಕ ಕೂಡಾ ಬಿಸಿ ಮುಟ್ಟಿಸಿದೆ. ಚೀನಾ ವಿರುದ್ಧ ದೊಡ್ಡಣ್ಣ ಕೂಡಾ ಬಹುದೊಡ್ಡ ಹೆಜ್ಜೆ ಇಟ್ಟಿದೆ.
ಹೌದು ಸುರಕ್ಷತೆ ವಿಚಾರವನ್ನಿಟ್ಟುಕೊಂಡು ಅಮೆರಿಕ ಕೂಡಾ ಚೀನಾದ ಎರಡು ಕಂಪನಿಗಳನ್ನು ಬ್ಯಾನ್ ಮಾಡಿದೆ. ಈ ಪಟ್ಟಿಯಲ್ಲಿ Huawei ಟೆಕ್ನಾಲಜಿ ಹಾಗೂ ZTE ಕೂಡಾ ಇವೆ.
ಅಮೆರಿಕದ ಫೆಡರಲ್ ಕಮ್ಯುನಿಕೇಷನ್ ಕಮಿಷನ್ ಮಮಂಗಳವಾರ 5-0 ವೋಟಿಂಗ್ ಆಧಾರದಲ್ಲಿ ಈ ಕಂಪನಿಗಳು ಅಪಾಯಕಾರಿ ಎಂದು ಘೋಷಿಸಿವೆ. ಅಮೆರಿಕ ಈ ಕಂಪನಿಗಳೊಂದಿಗೆ ಒಪ್ಪಂದವನ್ನೂ ಮಾಡಿದ್ದು, ಇದರಲ್ಲಿ 8.3 ಬಿಲಿಯನ್ ಡಾಲರ್‌ನ ವಸ್ತುಗಳನ್ನು ಖರೀದಿಸುವುದರಲ್ಲಿತ್ತು. ಆದರೀಗ ಇದನ್ನೂ ತಡೆ ಹಿಡಿದಿದೆ.
ಇನ್ನು ಭಾರತದಲ್ಲೂ Huawei ಕಂಪನಿ ಮೇಲೆ ಸಂಕಟದ ವಾತಾವರಣ ನಿರ್ಮಾಣವಾಗಿದೆ. ಕಳೆದ ಕೆಲ ದಿನಗಳ ಹಿಂದೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಸಿದೆ. 5 ಜಿ ಸೇವೆ ನೀಡಲು Huawei ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸರ್ಕಾರ ಇದಕ್ಕೆ ತಡೆ ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಮೆರಿಕದ FCC ಚೇರ್ಮನ್ ಅಜಿತ್ ಪೈ ಮಂಗಳವಾರದಂದು ನೀಡಿದ ತಮ್ಮ ಹೇಳಿಕೆಯಲ್ಲಿ ನಾವು ಚೀನಾ ಕಂಪನಿ ಜೊತೆ ನಮ್ಮ ನೆಟ್ವರ್ಕ್ ಶೇರ್ ಮಾಡಲು ಸಾಧ್ಯವಿಲ್ಲ. ಶೇರ್ ಮಾಡಿದರೆ ನಮ್ಮ ಕಮ್ಯುನಿಕೇಷನ್ ಇನ್ಫಾಸ್ಟ್ರಕ್ಷರ್‌ಗೆ ಹಾನಿಯಾಗುವ ಸಾಧ್ಯತೆ ಇದೆ ಎಂದಿದ್ದರು. ಆದರೆ ಈವರೆಗೂ ಈ ಸಂಬಂಧ ಎರಡೂ ಕಂಪನಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಕಳೆದ ವರ್ಷ ಮೇನಲ್ಲಿ ಆದೇಶವೊಂದನ್ನು ಹೊರಡಿಸಿದ್ದರು. ಇದರ ಅನ್ವಯ ಯಾವುದೇ ಕಂಪನಿ ದೇಶದ ಸುರಕ್ಷತೆಗೆ ಧಕ್ಕೆಯುಂಟು ಮಾಡಿದರೆ ಅವುಗಳ ಜೊತೆ ಯಾವುದೇ ಟೆಲಿಕಮ್ಯುನಿಕೇಷನ್ ವ್ಯವಹಾರ ನಡೆಸುವುದಿಲ್ಲ ಎಂದಿದ್ದಾರೆ.
ಅಮೆರಿಕ ಸರ್ಕಾರ ಹಾಗೂ Huawei ನಡುವೆ ಈ ಮೊದಲಿನಿಂದಲೂ ವಿವಾದ ನಡೆಯುತ್ತಿದ್ದು, ಇದನ್ನು ಬ್ಲ್ಯಾಕ್ ಲಿಸ್ಟ್‌ಗೆ ಹಾಕಲಾಗಿದೆ. ಜೊತೆಗೆ ಇತರ ರಾಷ್ಟ್ರಗಳಿಗೂ Huawei ಜೊತೆ ಕೆಲಸ ಮಾಡಬೇಡಿ, ಇದು ದೇಶದ ಭದ್ರತೆಗೆ ಅಪಾಯವುಂಟು ಮಾಡುತ್ತದೆ ಎಂದೂ ಹೇಳಿದೆ.
ಇನ್ನು ಭಾರತ ಕೂಡಾ ಸೋಮವಾರದಂದು ಚೀನಾದ 59 App ಗಳನ್ನು ಬ್ಯಾನ್ ಮಾಡಿತ್ತು. ಇದು ದೇಶದ ಸುರಕ್ಷತೆಗೆ ಹಾನಿ ಎಂಬ ಕಾರಣ ನೀಡಿ ಜನಪ್ರಿಯ App ಟಿಕ್‌ಟಾಕ್ ಸೇರಿ ಅನೇಕ Appಗಳನ್ನು ಬ್ಯಾನ್ ಮಾಡಿದೆ.